Cotton Clothes Washing Tips : ಹೊಸ ಬಟ್ಟೆ ಬಣ್ಣ ಹೋದ್ರೆ ಹೊಟ್ಟೆ ಉರಿಯುತ್ತೆ. ಕಾಟನ್ ಬಟ್ಟೆ ಬಣ್ಣ ಹೋಗೋದು ಸಾಮಾನ್ಯ. ಕಾಟನ್ ಬಟ್ಟೆ ಬಣ್ಣ ಹಾಗೆ ಇರ್ಬೇಕು ಅಂದ್ರೆ ಸಿಂಪಲ್ ಟಿಪ್ಸ್ ಇಲ್ಲಿದೆ.
ಕಾಟನ್ ಡ್ರೆಸ್ ಖರೀದಿ ಮಾಡ್ಬೇಕು ಅಂದ್ರೆ ಏನೋ ಆತಂಕ. ಹಣಕ್ಕೆ ತಕ್ಕಂತೆ ಡ್ರೆಸ್ ಚೆನ್ನಾಗೇನೋ ಇರುತ್ತೆ. ಆದ್ರೆ ಮನೆಗೆ ಬಂದು ವಾಶ್ ಮಾಡಿದಾಗ್ಲೇ ಅದ್ರ ಬಣ್ಣ ತಿಳಿಯೋದು. ನೀರಿಗೆ ಹಾಕ್ತಿದ್ದಂತೆ ಕಾಟನ್ ಡ್ರೆಸ್ ಬಣ್ಣವೇ ಬದಲಾಗಿರುತ್ತೆ. ಹಾಗಾಗಿ ಅನೇಕರು ಹೊಸ ಬಟ್ಟೆ ವಾಶ್ ಮಾಡ್ದೆ ಒಮ್ಮೆ ಧರಿಸಿ ಆಮೇಲೆ ವಾಶ್ ರಿಸ್ಕ್ ತೆಗೆದುಕೊಳ್ತಾರೆ. ನೀಲಿ, ಗುಲಾಬಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಮೊದಲ ಬಾರಿ ಕ್ಲೀನ್ ಮಾಡಿದ್ರೆ ಬಣ್ಣ ಹೋಗೋದು ಗ್ಯಾರಂಟಿ. ಮನೆಯಲ್ಲಿ ತಯಾರಿಸಿದ ಟ್ರಿಕ್ ಬಳಸಿ ನೀವು ಮೊದಲ ಬಾರಿಗೆ ಹೊಸ ಬಟ್ಟೆಗಳನ್ನು ತೊಳೆದರೆ, ಬಣ್ಣ ಮಸುಕಾಗುವುದಿಲ್ಲ.
25
ಹೊಸ ಬಟ್ಟೆಗೆ ಪಟಿಕ
ನೀವು ಕಾಟನ್ ಬಟ್ಟೆ ಖರೀದಿ ಮಾಡಿದ್ರೆ ಟೆನ್ಷನ್ ಬೇಡ. ಬಟ್ಟೆ ಜೊತೆ ಪಟಿಕವನ್ನೂ ಖರೀದಿ ಮಾಡಿ. ಇದು ನಿಮ್ಮ ಬಟ್ಟೆ ಕಲರ್ ಪೇಡ್ ಆಗೋದನ್ನು ತಪ್ಪಿಸುತ್ತೆ. ನೀವು ಮೊದಲ ಬಾರಿ ಕಾಟನ್ ಬಟ್ಟೆ ವಾಶ್ ಮಾಡೋವಾಗ ಪಟಿಕ ಬಳಸಿ. ಪಟಿಕ ಹಾಗೂ ಉಪ್ಪು ನಿಮ್ಮ ಬಟ್ಟೆ ಬಣ್ಣ ಮಾಸೋದನ್ನು ತಡೆಯುತ್ತೆ.
35
ಪಟಿಕದ ಬಳಕೆ ಹೇಗೆ?
ಒಂದು ಬಕೆಟ್ ನಲ್ಲಿ ತಣ್ಣೀರನ್ನು ಹಾಖಿ. ನಂತ್ರ ಅದಕ್ಕೆ ಪಟಿಕವನ್ನು ಪುಡಿಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಟಿಕದ ಡಬಲ್ ಸೈಂಧವ ಲವಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಣ್ಣ ಹೋಗಬಲ್ಲ ಕಾಟನ್ ಬಟ್ಟೆಯನ್ನು ಈ ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆಹಾಕಿ. ಎರಡು ಗಂಟೆ ನಂತ್ರ ಬಣ್ಣದ ಬಟ್ಟೆಯನ್ನು ಬಕೆಟ್ ನಿಂದ ತೆಗೆದು, ಶುದ್ಧ ನೀರಿನಲ್ಲಿ ತೊಳೆದು ಒಣಹಾಕಿ.
ಹರಳೆಣ್ಣೆ ಮತ್ತು ಉಪ್ಪು ಕೂಡ ಬಣ್ಣ ಹೋಗುವ ಬಟ್ಟೆಗೆ ಬೆಸ್ಟ್ ಮನೆ ಮದ್ದು. ಒಂದು ಬಕೆಟ್ ಗೆ ನೀರು ಮತ್ತು ಹನಿ ಹರಳೆಣ್ಣೆ ಮತ್ತು ಉಪ್ಪು ಮಿಕ್ಸ್ ಮಾಡಿ. ಅದರಲ್ಲಿ ಸ್ವಲ್ಪ ಸಮಯ ಬಟ್ಟೆ ನೆನೆಹಾಕಿ ನಂತ್ರ ವಾಶ್ ಮಾಡಿ. ಹರಳೆಣ್ಣೆ ಮತ್ತು ಉಪ್ಪಿನಿಂದ ತೊಳೆದ ಬಟ್ಟೆ ನಿಮಗೆ ಗಟ್ಟಿ ಎನ್ನಿಸಿದ್ರೆ ಒಂದು ಬಕೆಟ್ ನೀರಿಗೆ ಎರಡು ಟೀ ಚಮಚ ಬಿಳಿ ವಿನೆಗರ್ ಸೇರಿಸಿ ಮತ್ತು ಗಟ್ಟಿಯಾದ ಬಟ್ಟೆಗಳನ್ನು ಅರ್ಧ ಗಂಟೆ ಈ ನೀರಿನಲ್ಲಿ ನೆನೆಸಿಡಿ. ಈ ಟೆಕ್ನಿಕ್ ನಿಮ್ಮ ಬಟ್ಟೆಯನ್ನು ಮೃದುಗೊಳಿಸುತ್ತದೆ.
55
ಉಪ್ಪು
ಇದು ಅತ್ಯಂತ ಸರಳ ಹಾಗೂ ಪುರಾತನ ವಿಧಾನವಾಗಿದೆ. ಬೇರೆ ಯಾವುದೇ ವಸ್ತುಗಳ ಅಗತ್ಯ ಇದಕ್ಕಿಲ್ಲ. ನೀವು ಉಪ್ಪು ನೀರಿನಲ್ಲಿ ಬಟ್ಟೆ ನೆನೆಹಾಕಿ ಬಣ್ಣಮಾಸದಂತೆ ನೋಡಿಕೊಳ್ಳಬಹುದು. ಮೊದಲು ಒಂದು ಬಕೆಟ್ ಗೆ ನೀರನ್ನು ಹಾಕಿ, ಅದಕ್ಕೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತ್ರ ಬಟ್ಟೆಯನ್ನು ನೆನೆಹಾಕಿ. ಒಂದರಿಂದ ಎರಡು ಗಂಟೆ ಬಟ್ಟೆ ನೆನೆಹಾಕಿದ ನಂತ್ರ ಶುದ್ಧ ನೀರಿನಲ್ಲಿ ಬಟ್ಟೆಯನ್ನು ಸ್ವಚ್ಛಗೊಳಿಸಿ. ಉಪ್ಪು, ಬಟ್ಟೆಯ ಬಣ್ಣವನ್ನು ಬಿಗಿಗೊಳಿಸುತ್ತದೆ. ಬಣ್ಣ ಹೋಗದಂತೆ ತಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.