Coconut Health Benefits : ಗರ್ಭಾವಸ್ಥೆಯಲ್ಲಿ ಹಸಿ ತೆಂಗಿನಕಾಯಿ ತಿನ್ನುವ ಪ್ರಯೋಜನಗಳು!

Contributor Asianet   | Asianet News
Published : Feb 04, 2022, 10:04 PM ISTUpdated : Feb 04, 2022, 10:24 PM IST

ಗರ್ಭಾವಸ್ಥೆಯಲ್ಲಿ (Pregnancy) ಮಹಿಳೆಯರ (Woman) ದೇಹದಲ್ಲಿ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ,  ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣ ಸೇವಿಸುವ ಆಹಾರದ ಮೇಲೆ ಗಮನ ಹರಿಸಬೇಕು. ಆದುದರಿಂದ ಆಹಾರದಲ್ಲಿ ತೆಂಗಿನಕಾಯಿ ( Coconut) ಸೇವಿಸಿ ಎಂದು ಹೇಳಲಾಗಿದೆ. 

PREV
19
Coconut Health Benefits : ಗರ್ಭಾವಸ್ಥೆಯಲ್ಲಿ ಹಸಿ ತೆಂಗಿನಕಾಯಿ ತಿನ್ನುವ ಪ್ರಯೋಜನಗಳು!

ಗರ್ಭಧಾರಣೆ(Pregnancy)
ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಅವರು ಪ್ರತಿಯೊಂದು ಕ್ರಿಯೆ, ಆಹಾರ, ಇತರ ಅಭ್ಯಾಸಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 

29

ಆಹಾರ ಕ್ರಮ(Food habits)
ಗರ್ಭಿಣಿಯರು ತಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ತಾಯಿ ತಿನ್ನುವ ಆಹಾರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಆರೋಗ್ಯಯುತ ಹಾಗೂ ಮಕ್ಕಳ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವನೆ ಮಾಡಬೇಕು. 

39

ಕಚ್ಚಾ ತೆಂಗಿನಕಾಯಿ(Raw coconut)
ಗರ್ಭಾವಸ್ಥೆಯಲ್ಲಿ, ಪೋಷಕಾಂಶಭರಿತ ವಸ್ತುಗಳನ್ನು ಸೇವಿಸಲು ವೈದ್ಯರು ಮಹಿಳೆಯರಿಗೆ ಸಲಹೆ ನೀಡುತ್ತಾರೆ, ಅವುಗಳಲ್ಲಿ ಒಂದು ಕಚ್ಚಾ ತೆಂಗಿನಕಾಯಿ. ಹೌದು ಹಸಿ ತೆಂಗಿನಕಾಯಿ ಸೇವನೆ ಮಾಡುವುದರಿಂದ ಗರ್ಭಿಣಿ  ಆರೋಗ್ಯ ಉತ್ತಮವಾಗುತ್ತದೆ .
 

49

ಮಾರ್ನಿಂಗ್ ಸಿಕ್ ನೆಸ್(Morning Sickness)
ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಬೆಳಗ್ಗೆ ಎದ್ದು ತಲೆನೋವು ಮತ್ತು ದೇಹ ನೋವಿನ ಸಮಸ್ಯೆ ಉಂಟಾಗುವುದು ಸಾಮಾನ್ಯ. ಇದನ್ನು ಮಾರ್ನಿಂಗ್ ಸಿಕ್ ನೆಸ್ ಎಂದು ಕರೆಯಲಾಗುತ್ತದೆ. ಆದರೆ ಹಸಿ ತೆಂಗಿನಕಾಯಿಯನ್ನು ಸೇವಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. 

59

ವಾಂತಿ(Vomit)
ಹಸಿ ತೆಂಗಿನಕಾಯಿಯನ್ನು ಸೇವಿಸುವ ಮೂಲಕ ಮಹಿಳೆಯರಿಗೆ ವಾಂತಿ ಮತ್ತು ವಾಕರಿಕೆಯಂತಹ ಸಮಸ್ಯೆಗಳು ಬರುವುದಿಲ್ಲ. ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಆದುದರಿಂದ ಹಸಿ ತೆಂಗಿನಕಾಯಿ ಸೇವಿಸುವ ಮೂಲಕ ವಾಂತಿ ಸಮಸ್ಯೆ ನಿವಾರಿಸಿ. 

69

ಪ್ರತಿರೋಧಕತೆ
ಗರ್ಭಿಣಿಯಾಗಿರುವಾಗ ಮಹಿಳೆಯರು ಆರೋಗ್ಯವಾಗಿರುವುದು ಮುಖ್ಯ. ಈ ಸಮಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುವ ಕಾರಣ ರೋಗ ನಿರೋಧಕ(Immunity) ಶಕ್ತಿ ಹೆಚ್ಚಿಸಿಕೊಳ್ಳುವುದು ಉತ್ತಮ. ಹಸಿ ತೆಂಗಿನಕಾಯಿಯಲ್ಲಿರುವ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

79

ರಕ್ತಹೀನತೆ(Anaemia)
ಗರ್ಭಿಣಿಯರಿಗೆ ಹೆಚ್ಚಾಗಿ ರಕ್ತದ ಕೊರತೆ ಇರುತ್ತದೆ , ಇದು ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಈ ಸಮಸ್ಯೆಯನ್ನ ದೂರ ಮಾಡಲು ಹಸಿ ತೆಂಗಿನಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಇದು  ರಕ್ತಹೀನತೆಯ ಸಮಸ್ಯೆಯಿಂದ ರಕ್ಷಿಸುತ್ತದೆ.

89

ಚರ್ಮ(Skin)
ಹಸಿ ತೆಂಗಿನಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಮೇಲಿನ ಕಲೆಗಳು ಮತ್ತು ಕಪ್ಪು ಗುರುತುಗಳನ್ನು ತೊಡೆದುಹಾಕಬಹುದು. ಇದರಿಂದ ಸುಂದರ ಕಲೆರಹಿತ ತ್ವಚೆ ನಿಮ್ಮದಾಗುತ್ತದೆ. ಗರ್ಭಾವಸ್ಥೆಯನ್ನು ಉತ್ತಮ ತ್ವಚೆಯನ್ನು ಪಡೆದುಕೊಳ್ಳಬಹುದು. 

99

ರಕ್ತದ ಹರಿವು
ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ರಕ್ತದ ಪ್ರಮಾಣ ಶೇ.50ರಷ್ಟು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಸಿ ತೆಂಗಿನಕಾಯಿಯು ರಕ್ತದ(Blood) ಹರಿವನ್ನು ಉತ್ತಮಗೊಳಿಸುತ್ತದೆ. ದೇಹದ ಆರೋಗ್ಯವೂ ಮತ್ತು ತಾಯಿ ಮತ್ತು ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ. 

Read more Photos on
click me!

Recommended Stories