Health Tips: ನಿಮ್ಮ ಮಗುವಿಗೆ ಹಸಿವಾಗೋದಿಲ್ವೇ? ಈ ವಿಧಾನಗಳನ್ನು ಪಾಲಿಸಿ

First Published Apr 5, 2022, 6:40 PM IST

Increase Children Appetite: ಮಕ್ಕಳಿಗೆ ಹೆಚ್ಚಾಗಿ ಆರೋಗ್ಯಕರ ಆಹಾರ ಹೆಚ್ಚಾಗಿ ಇಷ್ಟವಾಗೋದೇ ಇಲ್ಲ. ಹೊರಗಿನ ವಸ್ತುಗಳು ಅಥವಾ ಜಂಕ್ ಫುಡ್, ಮಕ್ಕಳು ತಕ್ಷಣ ತಿನ್ನುತ್ತಾರೆ, ಆದರೆ ಅವರು ಆರೋಗ್ಯಕರ ಆಹಾರವನ್ನು ತಿನ್ನುವಲ್ಲಿ ಮಾತ್ರ ಹಿಂದೇಟು ಹಾಕುತ್ತಾರೆ. ಹಾಗಾದರೆ ಮಕ್ಕಳಿಗೆ ಉತ್ತಮ ಆಹಾರ ನೀಡೋದು ಯಾಕೆ. 
 

ಮಗುವಿನ ಫೈಲ್‌ ಫೋಟೊ

ಆರೋಗ್ಯದ(Health) ಮೇಲೆ ಪರಿಣಾಮ
ಆರೋಗ್ಯಕರ ಆಹಾರವನ್ನು ಸೇವಿಸದಿರುವುದರಿಂದ, ಮಕ್ಕಳ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ, ಈ ಕಾರಣದಿಂದಾಗಿ ಅವರು ಹಸಿವನ್ನು ಅನುಭವಿಸದಿರುವ ಸಮಸ್ಯೆಯನ್ನು ಹೊಂದಿರಬಹುದು. ಹಾಗಾದರೆ ಇಂತಹ ಸಮಯದಲ್ಲಿ ಏನು ಮಾಡಬಹುದು ನೋಡೋಣ. 

ಫೈಲ್‌ ಫೋಟೊ

ಫೀಡಿಂಗ್ ಟಿಪ್ಸ್(Feeding tips)
ಅಂತಹ ಪರಿಸ್ಥಿತಿಯಲ್ಲಿ, ಈ ಸಲಹೆಗಳ ಸಹಾಯದಿಂದ, ನೀವು ಪ್ರತಿದಿನ ಮಕ್ಕಳಿಗೆ ಪೌಷ್ಠಿಕಾಂಶ-ಸಮೃದ್ಧ ಆಹಾರವನ್ನು ನೀಡಲು ಸಾಧ್ಯವಾಗುತ್ತದೆ. ಇವು ಮಕ್ಕಳಿಗೆ ಆಹಾರದ ಬಗ್ಗೆ ಮೂಡಲು ಮತ್ತು ಹೆಚ್ಚಿನ ಆಹಾರ ಸೇವಿಸಲು ಸಹಕಾರಿಯಾಗಿದೆ. ಇಲ್ಲಿದೆ ನೋಡಿ ನೀವು ಪಾಲಿಸಬಹುದಾದ ಟಿಪ್ಸ್ : 

ಫೈಲ್‌ ಫೋಟೊ

ಹಸಿವನ್ನು ಹೆಚ್ಚಿಸುತ್ತದೆ ಅಜ್ವಾಯ್ನ್(Ajwain) 
ಒಂದು ಟೀಸ್ಪೂನ್ ಅಜ್ವಾಯ್ನ್ ಅನ್ನು ರುಬ್ಬಿ, ನಂತರ ಅದನ್ನು ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ಮತ್ತು ಅದನ್ನು ಮಗುವಿಗೆ ಕುಡಿಸಿರಿ. ಇದು ಮಗುವಿನ ಹಸಿವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಜೀರ್ಣ ಕ್ರಿಯೆಗೂ ಸಹ ಸಹಕಾರಿಯಾಗಿದೆ. ಇದನ್ನು ಪ್ರತಿದಿನವೂ ಮಕ್ಕಳಿಗೆ ನೀಡಬಹುದು. 

ಏಲಕ್ಕಿ

ಏಲಕ್ಕಿ(Cardamom) ಬಳಕೆ
ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಆಹಾರವನ್ನು ರುಚಿಕರವಾಗಿಸುತ್ತದೆ. ಹಾಲಿನಲ್ಲಿ ಏಲಕ್ಕಿಯನ್ನು ಹಾಕುವ ಮೂಲಕ ನೀವು ಮಗುವಿಗೆ ಹಾಲುಣಿಸಬಹುದು. ಇದು ಮಕ್ಕಳ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕ ಆಹಾರ ಸರಿಯಾಗಿ ದೊರೆಯುವಂತೆ ಮಾಡುತ್ತದೆ. 

ನೆಲ್ಲಿಕಾಯಿ

ನೆಲ್ಲಿಕಾಯಿ ಮತ್ತು ಜೇನುತುಪ್ಪ(Honey)
ನೆಲ್ಲಿಕಾಯಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನಂತರ ಈ ನೀರನ್ನು ಸೋಸಿ, ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಮಗುವಿಗೆ ನೀಡಿ. ಇದು ಸಹ ಮಕ್ಕಳ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು ನಿಯಮಿತವಾಗಿ ಮಗುವಿಗೆ ನೀಡುತ್ತಿದ್ದರೆ ಮಕ್ಕಳ ಬಾಯಿ ರುಚಿ ಕೂಡ ಹೆಚ್ಚುತ್ತದೆ. 

ಹುಣಸೆಹಣ್ಣು

ಹುಣಸೆಹಣ್ಣು ಸಹ ಪರಿಣಾಮಕಾರಿ
ಹುಣಸೆಹಣ್ಣಿನಲ್ಲಿರುವ ವಿರೇಚಕ ಅಂಶವು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಹುಣಸೆ ಹಣ್ಣಿನ ಚಟ್ನಿಯನ್ನು ಮಗುವಿನ ಆಹಾರದಲ್ಲಿ(Child Food) ಸೇರಿಸಬಹುದು. ಆದರೆ ಹುಣಸೆ ಹಣ್ಣನ್ನು ಹಾಗೆಯೇ ಮಕ್ಕಳಿಗೆ ನೀಡಬೇಡಿ, ಬದಲಾಗಿ ಇತರ ಆಹಾರಗಳ ಜೊತೆ ಸೇವಿಸಲು ನೀಡಿ. 

ಸೋಂಪು

ಸೋಂಪು ಮತ್ತು ಕಲ್ಲು ಸಕ್ಕರೆ 
ಊಟ ಮಾಡಿದ ನಂತರ, ಮಗುವಿಗೆ ಸೋಂಪು ಮತ್ತು ಕಲ್ಲು ಸಕ್ಕರೆಯನ್ನು ತಿನ್ನಿಸಿ. ಹಸಿವನ್ನು(Hunger) ಹೆಚ್ಚಿಸುವಲ್ಲಿ ಈ ಪಾಕವಿಧಾನವು ಪರಿಣಾಮಕಾರಿಯಾಗಿದೆ. ಇದು ರುಚಿಕರವಾಗಿದ್ದು, ಮಕ್ಕಳು ಇದನ್ನು ಖಂಡಿತವಾಗಿ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇಂದೇ ಮಕ್ಕಳಿಗೆ ಇದನ್ನು ನೀಡಿ. 

ಶುಂಠಿ

ಶುಂಠಿ(Ginger) ಕೂಡ ಪ್ರಯೋಜನಕಾರಿಯಾಗಿದೆ
ಶುಂಠಿಯು ಹಸಿವನ್ನು ಹೆಚ್ಚಿಸುತ್ತದೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಮಗುವಿನ ಆಹಾರಕ್ಕೆ ಶುಂಠಿಯನ್ನು ಸೇರಿಸಬಹುದು. ಅಥವ ಮಗುವಿಗೆ ಶುಂಠಿ ರಸದ ಜೊತೆಗೆ ಜೇನು ತುಪ್ಪವನ್ನು ಸೇರಿಸಿ ನೀಡುವುದರಿಂದ ಮಗುವಿಗೆ ಹಸಿವು ಹೆಚ್ಚುತ್ತದೆ. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. 

click me!