ಮುಟ್ಟಿನ ಬಗ್ಗೆ ನಟಿ Sreeleela ಮುಕ್ತ ಮಾತು: ಡಾಕ್ಟರ್​ ಆಗಿ ಹೀಗೆ ಹೇಳೋದಾ? ಶುರುವಾಗಿದೆ ಭಾರಿ ಚರ್ಚೆ

Published : Apr 07, 2026, 01:58 PM IST

ನಟಿ ಹಾಗೂ ವೈದ್ಯೆ ಶ್ರೀಲೀಲಾ, ಮುಟ್ಟನ್ನು ಒಂದು ನೆಪವಾಗಿ ಬಳಸಬಾರದು ಮತ್ತು ಮಹಿಳೆಯರು ಆ ಸಮಯದಲ್ಲಿ ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಹಲವರು ನಟಿಯ ಮಾತನ್ನು ವಿರೋಧಿಸಿದ್ದು ಏಕೆ?

PREV
17
ವೈದ್ಯೆಯಾಗಿ ಸದ್ದು ಮಾಡಿರೋ ಶ್ರೀಲೀಲಾ

ಸ್ಯಾಂಡಲ್‌ವುಡ್‌ ಬೆಡಗಿ ಶ್ರೀಲೀಲಾ ಸದ್ಯ ಸೌತ್‌ ಸಿನಿಮಾರಂಗದ ಬಹುಬೇಡಿಕೆಯ ನಟಿ. ತೆಲುಗಿನಲ್ಲಿ ಟಾಪ್‌ ನಟಿಯಾಗಿ ಮಿಂಚುತ್ತಿರುವ ಶ್ರೀಲೀಲಾ, ಬಾಲಿವುಡ್‌ ಮತ್ತು ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಈಚೆಗೆ ಮಹಾರಾಷ್ಟ್ರದ ಡಿವೈ ಪಾಟೀಲ್ ವಿಶ್ವವಿದ್ಯಾಲಯದಿಂದ MBBS ಪದವಿ ಪೂರ್ಣಗೊಳಿಸಿ ವೈದ್ಯೆಯಾಗಿ ಸುದ್ದಿ ಮಾಡಿದ್ದಾರೆ. ಸಿನಿಮಾಗಳ ನಡುವೆಯೂ, 6 ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ನಟನೆ ಮತ್ತು ವೈದ್ಯಕೀಯ ಶಿಕ್ಷಣವನ್ನು ಬ್ಯಾಲೆನ್ಸ್ ಮಾಡಿರುವುದಾಗಿ ಅವರು ಹೇಳಿದ್ದರು.

27
ಮುಟ್ಟಿನ ಬಗ್ಗೆ ಓಪನ್​ ಮಾತು- ಮೆಚ್ಚುಗೆ

ಇದೀಗ ಅವರು ಹೆಚ್ಚಿನ ಜನರು ಮಾತನಾಡಲು ಬಯಸದ ಮುಟ್ಟಿನ ವಿಷಯದ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡುವುದೇ ದೊಡ್ಡ ಅಪರಾಧ ಎನ್ನುವ ಸ್ಥಿತಿ ಇರುವಾಗ, ಮುಟ್ಟು ಆಗುವುದು ಏನೋ ಒಂದು ಅಪರಾಧ ಎನ್ನುವಂತೆ ಇಂದಿಗೂ ಸಮಾಜ ಬಿಂಬಿಸುತ್ತಿರುವ ಈ ದಿನಗಳಲ್ಲಿ ನಟಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ, ಅವರು ಈ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದ್ದರೂ, ಅವರು ಆಡಿದ ಮಾತಿಗೆ ಸಾಕಷ್ಟು ಮಂದಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

37
ಪರ- ವಿರೋಧಕ್ಕೂ ಕಾರಣ

ಶ್ರೀಲೀಲಾ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ತುಂಬಾ ಮಂದಿ ಮಹಿಳೆಯರು ಸೇರಿದ್ದರು. ಆ ಸಮಯದಲ್ಲಿ, ಋತುಚಕ್ರದ ಬಗ್ಗೆ ನಟಿ ಮಾತನಾಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಪೀರಿಯಡ್ಸ್ ಕಾರಣಕ್ಕೆ ಸಮಸ್ಯೆ ಎದುರಿಸಿದ ಸಂದರ್ಭ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಶ್ರೀಲೀಲಾ ಹೇಳಿರುವ ಮಾತು ಇದೀಗ ಪರ-ವಿರೋಧಕ್ಕೆ ಕಾರಣವಾಗಿದೆ.

47
ಏನಂದ್ರು ನಟಿ?

ಅಷ್ಟಕ್ಕೂ ನಟಿ ಹೇಳಿದ್ದು ಏನೆಂದರೆ, ಮುಟ್ಟು ಎನ್ನುವುದೇ ನಮಗೆ ಸಮಸ್ಯೆ ಆಗಬಾರದು. ನಾನು ಇದುವರೆಗೆ ಮಾಡಿರುವ ಸಾಕಷ್ಟು ಹಿಟ್​ ಸಾಂಗ್​ ವೇಳೆ ನನಗೂ ಋತುಸ್ರಾವ ಆಗಿತ್ತು. ಅಂತಹ ಸಾಂಗ್ಸ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿವೆ. ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

57
ಪುಶ್​ ಮಾಡಬೇಕು ಎಂದ ಶ್ರೀಲೀಲಾ

ಮಹಿಳೆಯರು ತಮ್ಮ ಶಾರೀರಿಕ, ಮಾನಸಿಕ ಸಮಸ್ಯೆಗಳನ್ನು ಮೀರಿ ಮುಂದೆ ಸಾಗಬೇಕು. ಪುರುಷನಿಗೆ ಸಮನಾಗಿ ಮಹಿಳೆಯರಿಗೆ ಅವಕಾಶ, ಸಮಾನ ಅಧಿಕಾರ, ಸಮಾನ ಹಕ್ಕು ಕೇಳುವಾಗ, ಪಿರಿಯಡ್ಸ್ ಸಮಸ್ಯೆ ನೆಪವೊಡ್ಡಿ ಹಿಂದೆ ಉಳಿಯುವುದು ಸರೀನಾ ಎಂದು ಪ್ರಶ್ನಿಸಿರೋ ನಟಿ, ನಮ್ಮ ಶಾರೀರಿಕ, ಮಾನಸಿಕ ಸಮಸ್ಯೆ ಮೀರಿ ಸಾಗಬೇಕು. ನಮ್ಮನ್ನು ನಾವು ಪುಶ್​ ಮಾಡಬೇಕು ಎಂದಿದ್ದಾರೆ.

67
ಓರ್ವ ವೈದ್ಯೆಯಾಗಿ ಇದು ಸರಿಯಲ್ಲ ಎಂದ ನೆಟ್ಟಿಗರು

ನಟಿ ಹೇಳ್ತಿರೋದೇನೋ ಸರಿ. ಆದರೆ ಓರ್ವ ವೈದ್ಯೆಯಾಗಿ ಮಹಿಳೆಯರ ಬಗ್ಗೆ ಈಕೆಗೆ ತಿಳಿದಿರಬೇಕಿತ್ತು. ಅದೆಷ್ಟೋ ಮಂದಿ ಮುಟ್ಟಿನ ಸಮಯದಲ್ಲಿ ಡಾನ್ಸ್​ ಮಾಡುವುದು ದೂರದ ಮಾತು ಆ ಮೂರ್ನಾಲ್ಕು ದಿನಗಳು ಅನುಭವಿಸುವ ಹಿಂಸೆ ದೇವರಿಗೇ ಪ್ರೀತಿ. ಒಬ್ಬೊಬ್ಬರ ದೈಹಿಕ ಬಲ, ದೈಹಿಕ ಶಕ್ತಿ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ಮುಟ್ಟಿನ ಸಮಯದಲ್ಲಿ ಏನೂ ಆಗುವುದಿಲ್ಲ, ಅವರಿಗೆ ಮುಟ್ಟು ಆಗಿರುವುದೇ ತಿಳಿಯುವುದಿಲ್ಲ ಎನ್ನುವುದು ನಿಜವಾದರೂ, ಅದೇ ರೀತಿ ನೀವು ಆರಾಮಾಗಿ ಆ ದಿನಗಳಲ್ಲಿ ಕುಣಿಯುತ್ತೀರಿ ಎಂದು ಎಲ್ಲರ ದೇಹ ಪ್ರಕೃತಿಯೂ ಅದೇ ರೀತಿ ಇರಬೇಕು ಎಂದು ನೀವು ಹೇಳುವುದು ಸರಿಯಲ್ಲ ಎಂದು ನಟಿಯನ್ನು ಸಾಕಷ್ಟು ಮಂದಿ ಟೀಕಿಸಿದ್ದಾರೆ.

77
ಎಲ್ಲರಿಗೂ ಇದು ಸಾಧ್ಯನಾ ಪ್ರಶ್ನಿಸಿಕೊಳ್ಳಿ

ಸಾಮಾನ್ಯರು ಹೇಳುವುದಕ್ಕೂ, ಒಬ್ಬ ಡಾಕ್ಟರ್​ ಎಂದುಕೊಳ್ಳುವ ನೀವು ಮಹಿಳೆಯರ ಬಗ್ಗೆ ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಿಮ್ಮ ಬಗ್ಗೆ, ನಿಮ್ಮ ದೈಹಿಕ ಪ್ರಕೃತಿ ಬಗ್ಗೆ ಎಷ್ಟು ಬೇಕಾದರೂ ಹೊಗಳಿಕೊಳ್ಳಿ. ಆದರೆ ಈ ರೀತಿಯ ಸಂದರ್ಶನದ ವೇಳೆ, ಎಲ್ಲರಿಗೂ ಹೀಗೆ ಮಾಡುವುದು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳುವುದು ವೈದ್ಯೆಯಾಗಿರೋ ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ಪುಶ್​ ಮಾಡಬೇಕು, ನಮ್ಮ ಶಾರೀರಿಕ, ಮಾನಸಿಕ ಸಮಸ್ಯೆ ಮೀರಿ ಸಾಗಬೇಕು ಎನ್ನುವ ಮಾತುಗಳು ವೈದ್ಯೆ ಎನ್ನಿಸಿರುವ ನಿಮ್ಮ ಬಾಯಿಯಿಂದ ಬರುವುದು ಸರಿ ಕಾಣುವುದಿಲ್ಲ, ಸಿನಿಮಾ ರಂಗದಲ್ಲಿ ಇರುವ ನಿಮ್ಮ ಸ್ನೇಹಿತೆಯರನ್ನೇ ಕೇಳಿ ನೋಡಿ ಎಂದು ಹಲವರು ಹೇಳುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories