'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಐದೇ ಸೆಕೆಂಡಿನಲ್ಲಿ ಉತ್ತರಿಸಿ ಫೇಮಸ್ ಆದ ಐಎಎಸ್ ಆಫೀಸರ್‌!

Published : Feb 18, 2024, 12:05 PM IST

ಐಐಟಿ ಪದವೀಧರೆಯಾಗಿರುವ ಆಶಿಮಾ ಗೋಯಲ್ ಐಎಎಸ್ ಅಧಿಕಾರಿಯಾಗಿದ್ದಾರೆ. ಆದರೆ ಇವರು ಫೇಮಸ್ ಆಗಿದ್ದು, ಹಿಂದಿಯ 'ಕೌನ್ ಬನೇಗಾ ಕರೋಡ್‌ಪತಿ' ರಿಯಾಲಿಟಿ ಶೋನಿಂದ. ಇವರ ಜ್ಞಾನಕ್ಕೆ ಸ್ವತಃ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್‌ ಶಹಬ್ಬಾಸ್ ಅಂದಿದ್ದಾರೆ.

PREV
18
'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಐದೇ ಸೆಕೆಂಡಿನಲ್ಲಿ ಉತ್ತರಿಸಿ ಫೇಮಸ್ ಆದ ಐಎಎಸ್ ಆಫೀಸರ್‌!

ಐಎಎಸ್‌, ಐಪಿಎಸ್‌ ಆಫೀಸರ್‌ ಆಗುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಜ್ಞಾನ, ಶ್ರದ್ಧೆ, ಪರಿಶ್ರಮದ ಅಗತ್ಯವಿದೆ. ಈ ಕಠಿಣವಾದ ಪರೀಕ್ಷೆ ಪಾಸಾಗಲು ಸಾಧ್ಯವಾಗದೆ ಹಲವರು ವರ್ಷಗಳ ಕಾಲ ಕೋಚಿಂಗ್ ತೆಗೆದುಕೊಳ್ಳುತ್ತಾರೆ. ಆದ್ರೆ ಈ ಮಹಿಳೆ ಕೋಚಿಂಗ್ ಇಲ್ಲದೆ ಕೇವಲ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಎಕ್ಸಾಂ ಪಾಸ್ ಆಗಿ ಆಫೀಸರ್ ಆದರು.

28

ಐಐಟಿ ಪದವೀಧರೆಯಾಗಿರುವ ಆಶಿಮಾ ಗೋಯಲ್ ಐಎಎಸ್ ಅಧಿಕಾರಿಯಾಗಿದ್ದಾರೆ. ಆದರೆ ಇವರು ಫೇಮಸ್ ಆಗಿದ್ದು, ಹಿಂದಿಯ 'ಕೌನ್ ಬನೇಗಾ ಕರೋಡ್‌ಪತಿ' ರಿಯಾಲಿಟಿ ಶೋನಿಂದ. ಇವರ ಜ್ಞಾನಕ್ಕೆ ಸ್ವತಃ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್‌ ಶಹಬ್ಬಾಸ್ ಅಂದಿದ್ದಾರೆ.

38

ಹರಿಯಾಣದ ಬಲ್ಲಾಬ್‌ಗಢ್ ಪಟ್ಟಣದ ಸ್ಥಳೀಯರಾದ ಆಶಿಮಾ, ಉತ್ತರಾಖಂಡ್ ಕೇಡರ್‌ನ UPSC 2020 ಬ್ಯಾಚ್‌ನಿಂದ IAS ಆಗಿದ್ದಾರೆ. ಆಶಿಮಾ ಬಾಲ್ಯದಿಂದಲೂ ತಮ್ಮ ಅಧ್ಯಯನದಲ್ಲಿ ಅತ್ಯುತ್ತಮವಾಗಿದ್ದರು. ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿದ್ದರು. ಆಶಿಮಾಳ ತಂದೆ ಸೈಬರ್ ಕೆಫೆಯನ್ನು ನಿರ್ವಹಿಸುತ್ತಿದ್ದರು.ಆಕೆಯ ತಾಯಿ ಗೃಹಿಣಿ. ಅಕ್ಕ ಚಾರ್ಟರ್ಡ್ ಅಕೌಂಟೆಂಟ್.

48

ಆಶಿಮಾ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ತಂತ್ರಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಎಂ ಟೆಕ್ ಕೋರ್ಸ್ ಜೊತೆಗೆ UPSCಗೆ ತಯಾರಿ ಮಾಡಲು ಆಯ್ಕೆ ಮಾಡಿಕೊಂಡರು.
 

58

ಕಾಲೇಜು ಮುಗಿದ ನಂತರ, ಆಶಿಮಾ ಬೆಂಗಳೂರಿನಲ್ಲಿ ಹೆಚ್ಚಿನ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ಪಡೆದರು. 2018ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆ ಬರೆದರು. ಅದರ ನಂತರ, ಎಕ್ಸಾಂ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಲು ಕೆಲಸವನ್ನು ತೊರೆದರು. ತರಬೇತಿಯಿಲ್ಲದೆ ಯುಪಿಎಸ್‌ಸಿ ಎಕ್ಸಾಂಗೆ ವರ್ಷಗಳ ಕಾಲ ತಯಾರಿ ನಡೆಸಿದರು. 2019ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 65ನೇ ರ್ಯಾಂಕ್‌ನೊಂದಿಗೆ ಐಎಎಸ್ ಆದರು.

68

ಕೆಮಿಕಲ್ ಇಂಜಿನಿಯರಿಂಗ್ ಓದುವಾಗ ಆಶಿಮಾ ತಮ್ಮ ಅಧ್ಯಯನಕ್ಕೆ 9-10 ಗಂಟೆಗಳನ್ನು ಮೀಸಲಿಟ್ಟಿದ್ದರು. ಮೊದಲ ಪ್ರಯತ್ನದಲ್ಲಿ ವಿಫಲವಾದ ನಂತರ UPSC ಪಠ್ಯಕ್ರಮದಲ್ಲಿ ತಮ್ಮ ದುರ್ಬಲ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದರು. ಅಂತಿಮವಾಗಿ ತಮ್ಮ ಕನಸನ್ನು ನನಸಾಗಿಸಿಕೊಂಡರು.

78

ಆಶಿಮಾ ಅವರನ್ನು ಆರಂಭದಲ್ಲಿ ಕೇರಳ ಕೇಡರ್‌ನಲ್ಲಿ ನೇಮಕಾತಿಯ ಮೇರೆಗೆ ನಿಯೋಜಿಸಲಾಗಿತ್ತು. 2022ರಲ್ಲಿ ಐಎಫ್‌ಎಸ್ ಅಧಿಕಾರಿ ರಾಹುಲ್ ಮಿಶ್ರಾ ಅವರೊಂದಿಗಿನ ವಿವಾಹದ ನಂತರ ಅವರು ಇಂಟರ್-ಕೇಡರ್ ವರ್ಗಾವಣೆಯನ್ನು ತೆಗೆದುಕೊಂಡರು. ಅವರನ್ನು ಉತ್ತರಾಖಂಡ್ ಕೇಡರ್‌ಗೆ ವರ್ಗಾಯಿಸಲಾಯಿತು.

88

ಪ್ರಸಿದ್ಧ ಹಿಂದಿ ದೂರದರ್ಶನ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಿಂದ ಪ್ರಸಿದ್ಧಿಯನ್ನು ಪಡೆದರು, ಅಲ್ಲಿ ಅವರು ಅಭಿನವ್ ಸಿಂಗ್ ಎಂಬ ಸ್ಪರ್ಧಿಗೆ ಸಹಾಯ ಮಾಡಲು ವೀಡಿಯೊ ಕರೆ ಮೂಲಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಪ್ರಶ್ನೆಗೆ ಕೇವಲ ಐದೇ ಸೆಕೆಂಡ್‌ಗಳಲ್ಲಿ ಉತ್ತರಿಸಿ ಬಿಗ್‌ಬಿ ಅಚ್ಚರಿಗೆ ಕಾರಣವಾದರು. ಅಮಿತಾಬ್ ಬಚ್ಚನ್‌ ಆಶಿಮಾ ಪ್ರತಿಭೆಯನ್ನು ಹೊಗಳಿ ಗೌರವ ಸೂಚಿಸಿದರು.

Read more Photos on
click me!

Recommended Stories