ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ಮಾತೇ ಶಕ್ತಿ

Published : Feb 17, 2024, 10:41 AM IST

ಈಕೆ 30ನೇ ವಯಸ್ಸಿನಲ್ಲೇ ತನ್ನ ಒಳ್ಳೆಯ ಸಂಬಳದ ಕೆಲಸ ಬಿಟ್ಟು ಹುಟ್ಟು ಹಾಕಿದ ಸ್ಟಾರ್ಟಪ್ ಕೇವಲ ನಾಲ್ಕೇ ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ. ಉದ್ಯಮದಲ್ಲಿ ಇಂಥ ಹೆಣ್ಮಕ್ಕಳ ಸಂಖ್ಯೆ ಹೆಚ್ಚಬೇಕು. 

PREV
110
ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ಮಾತೇ ಶಕ್ತಿ

ನಿರ್ಧಾರಗಳೇ ಹಾಗೆ, ಅವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡರೆ ಅವು ಕೂಡಾ ಸರಿಯಾದ ರೀತಿಯಲ್ಲಿ ಫಲ ಕೊಡುತ್ತವೆ. ಅಹಾನಾ ತನ್ನ 30ನೇ ವಯಸ್ಸಿಗೆ ಉತ್ತಮ ಸಂಬಳದ ಉದ್ಯೋಗ ತೊರೆಯಲು ನಿರ್ಧರಿಸಿದಾಗ ಕುಟುಂಬದವರು ಆಕೆಗೆ ಎಲ್ಲರಂತೆ ಬೇಡ ಎಂದಿದ್ದರೆ, ಮದುವೆ ವಯಸ್ಸು, ಬೇರೆಲ್ಲ ಹುಚ್ಚಾಟ ಬಿಟ್ಟು ಮದುವೆಯಾಗು ಎಂದಿದ್ದರೆ, ಅವಳು ಕೂಡಾ ಅನುಮಾನದಲ್ಲೇ ಸಮಯ ತಳ್ಳಿದ್ದರೆ- ಇಂದು ಆಕೆ 100 ಕೋಟಿ ವಹಿವಾಟು ನಡೆಸುವ ಕಂಪನಿಯ ಒಡತಿ ಎಂಬ ಹೆಮ್ಮೆ ಪಡಲು ಸಾಧ್ಯವಾಗುತ್ತಿರಲಿಲ್ಲ.

210

ಹೌದು, ರಾಜಸ್ಥಾನದ ಭರತ್‌ಪುರದಲ್ಲಿ ಬೆಳೆದ ಅಹಾನಾ ಗೌತಮ್‌ ಇಂದು 100 ಕೋಟಿ ವಹಿವಾಟು ನಡೆಸುವ ಕಂಪನಿಯ ಮಾಲಕಿ. ಇದಕ್ಕೆ ಕಾರಣ ಆಕೆಯ ಸಾಮರ್ಥ್ಯದ ಮೇಲೆ ಆಕೆಯ ತಾಯಿಗಿದ್ದ ನಂಬಿಕೆ.

310

ಕೇವಲ 30ನೇ ವಯಸ್ಸಿನಲ್ಲಿ, ಅಹಾನಾ ಗೌತಮ್ ತನ್ನ ಲಾಭದಾಯಕ ಕೆಲಸವನ್ನು ತೊರೆದು ಆರೋಗ್ಯಕರ ತಿಂಡಿಗಳ ಮೇಲೆ ಕೇಂದ್ರೀಕರಿಸುವ ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಳು.

410

ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಐಐಟಿ-ಬಾಂಬೆ ಹಳೆಯ ವಿದ್ಯಾರ್ಥಿಯಾದ ಆಕೆ, ತನ್ನ ಆರೋಗ್ಯಕರ ಸ್ನ್ಯಾಕ್ಸ್ ಸ್ಟಾರ್ಟ್ಅಪ್ 'ಓಪನ್ ಸೀಕ್ರೆಟ್' ಅನ್ನು ಪ್ರಾರಂಭಿಸುವಾಗ ಕೊಂಚ ಆತಂಕದಲ್ಲೇ ಇದ್ದಳು. ಆದರೆ, ಅವಳ ತಾಯಿಯ ನಂಬಿಕೆಯು ಅವಳಿಗೆ ಧೈರ್ಯವನ್ನು ನೀಡಿತು.

510

ಈ  'ಓಪನ್ ಸೀಕ್ರೆಟ್' ಕಂಪನಿಯು ಭಾರತೀಯ ತಿಂಡಿಗಳನ್ನು 'ಅನ್‌ಜಂಕಿಂಗ್' ಮಾಡುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಈ ಐಡಿಯಾವನ್ನು ಅವರು ಹಾರ್ವರ್ಡ್‌ನಲ್ಲಿ ಎಂಬಿಎ ಓದುತ್ತಿರುವಾಗ ಪಡೆದುಕೊಂಡರು. ಅಲ್ಲಿನ  ಹೋಲ್ ಫುಡ್ಸ್ ಸ್ಟೋರ್‌ಗೆ ಭೇಟಿ ನೀಡಿದಾಗ ಅಲ್ಲಿ ಅಧಿಕ ತೂಕದ ಮಹಿಳೆಯೊಬ್ಬರು ಗುಜಿಯಾ ತಿನ್ನುತ್ತಿದ್ದರು. ಆಗ ತಿಳಿಯಿತು, ಆ ಅಂಗಡಿಯಲ್ಲಿ ಕೇವಲ ಆರೋಗ್ಯಕರ ಆಹಾರವಿರುವುದು ಎಂದು. ಯಾವುದೇ ಜಂಕ್ ಉತ್ಪನ್ನಗಳಿಲ್ಲದ ಆ ಅಂಗಡಿಯಲ್ಲಿ ಜನರು ಇಷ್ಟಪಡುವ ಆಹಾರವನ್ನು ಆರೋಗ್ಯಕರವಾಗಿಯೇ ತಯಾರಿಸಿ ಇಡಲಾಗಿತ್ತು. ಇಲ್ಲಿಂದ ನನ್ನ ಸ್ಟಾರ್ಟಪ್ ಪರಿಕಲ್ಪನೆ ಹುಟ್ಟಿತು ಎನ್ನುತ್ತಾರೆ ಅಹಾನಾ. 

610

ಇಂದು ಅವರ ಕಂಪನಿಯ ಉತ್ಪನ್ನಗಳು ಕೂಡಾ ಕ್ರಂಚಿಯಾಗಿ, ಜನರಿಗೆ ಜಂಕ್ ಫುಡ್‌ಗಳ ರುಚಿಯನ್ನೇ ನೀಡುವುದಾದರೂ ಅವನ್ನು ಹೆಲ್ದಿಯಾಗಿ ತಯಾರಿಸಲಾಗಿದೆ. ಎಣ್ಣೆಯಲ್ಲಿ ಕರಿಯದೆ, ಮೈದಾ ಇತ್ಯಾದಿ ಬೇಡದ ಪದಾರ್ಥ ಬಳಸದೆ ಆರೋಗ್ಯಕರ ತಿನಿಸುಗಳನ್ನು ನೀಡುತ್ತವೆ.

710

IIT-ಬಾಂಬೆಯಿಂದ Btech (ರಾಸಾಯನಿಕ ಇಂಜಿನಿಯರಿಂಗ್‌ನಲ್ಲಿ) ಮತ್ತು ನಂತರ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಮುಗಿಸಿದ ನಂತರ, ಅಹಾನಾ ತನ್ನ ವೃತ್ತಿಜೀವನವನ್ನು ಪ್ರಾಕ್ಟರ್ & ಗ್ಯಾಂಬಲ್ (P&G) ನಲ್ಲಿ ಪ್ರಾರಂಭಿಸಿದಳು, ನಂತರ ಅವಳು ಜನರಲ್ ಮಿಲ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್‌ನಲ್ಲಿಯೂ ಕೆಲಸ ಮಾಡಿದಳು.

810

ನಂತರ ಸ್ಟಾರ್ಟಪ್ ಪ್ರಾರಂಭಿಸುವ ಬಗ್ಗೆ ಗೊಂದಲದಲ್ಲಿದ್ದ ಆಕೆಗೆ ತಾಯಿ ಹೇಳಿದರಂತೆ, 'ನೀನು ಹುಡುಗನೋ ಹುಡುಗಿಯೋ ಎಂಬುದು ಮುಖ್ಯವಲ್ಲ, ಹಳ್ಳಿಯಿಂದ ಬಂದಿದಿದೀಯೋ ನಗರದಿಂದಲೋ ಎಂಬುದೂ ಮುಖ್ಯವಲ್ಲ. ಆದರೆ, ಉತ್ತಮ ಶಿಕ್ಷಣೊಂದಿದ್ದರೆ ನೀನು ಜಗತ್ತನ್ನೇ ಬದಲಾಯಿಸಬಹುದು' ಎಂದು .  ತಾಯಿಯ ಈ ಮಾತುಗಳು ಆಕೆಗೆ ಸ್ಪೂರ್ತಿ ನೀಡಿತು. ಈ ಮಾತುಗಳ ಪ್ರೇರಣೆಯಿಂದಲೇ ಆಕೆ ಚೆನ್ನಾಗಿ ಓದಿ ಐಐಟಿ-ಬಾಂಬೆ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ಗೆ ಹೋಗಲು ಸಾಧ್ಯವಾಯಿತಂತೆ. 

910

ಒಮ್ಮೆ ನೀವು ಆರ್ಥಿಕವಾಗಿ ಸ್ವತಂತ್ರರಾದರೆ, ನಿಮ್ಮ ಜೀವನದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬಹುದು ಎನ್ನುವ ಅಹಾನಾ, ಕೋವಿಡ್ ಎರಡನೇ ಅಲೆಗೆ ತಾಯಿಯನ್ನು ಕಳೆದುಕೊಂಡರು. 

1010

ಎಲ್ಲರೂ ಆಕೆಯ ಮದುವೆ ಬಗ್ಗೆ ಮಾತಾಡುತ್ತಿದ್ದಾಗಲೂ ತಾಯಿ ಮಾತ್ರ ನಿನ್ನ ಕನಸನ್ನು ನನಸು ಮಾಡುವುದರತ್ತ ಗಮನ ಹರಿಸು ಎಂದು ಸ್ಪೂರ್ತಿ ತುಂಬಿದರಂತೆ. ಜೊತೆಗೆ, ತಮ್ಮ ಸೇವಿಂಗ್ಸ್ ದುಡ್ಡನ್ನೇ ಮಗಳಿಗೆ ಬಂಡವಾಳವಾಗಿ ನೀಡಿದರಂತೆ. ತಾಯಿಯ ಈ ಧೈರ್ಯ ಮಗಳನ್ನಿಂದು ದೊಡ್ಡ ಉದ್ಯಮಿಯಾಗಿಸಿತು. ಈಗ ಆಕೆ ಹಲವಾರು ಮಹಿಳೆಯರಿಗೆ ತನ್ನ ಕಂಪನಿಯಲ್ಲಿ ಕೆಲಸ ನೀಡಿದ್ದಾಳೆ. 

Read more Photos on
click me!

Recommended Stories