'ಹೆಣ್ಮಕ್ಕಳ ದೇಹದ್ ಬಗ್ಗೆ ಕಾಮೆಂಟ್ ಮಾಡೋ..' ಬಾಡಿ ಶೇಮ್ ಮಾಡಿದವ್ನಿಗೆ ಸರಿಯಾಗಿ ಜಾಡಿಸಿದ ಬುಮ್ರಾ ಪತ್ನಿ ಸಂಜನಾ

Published : Feb 13, 2024, 05:32 PM IST

ಪ್ರತಿ ಬಾರಿ ಆನ್‌ಲೈನ್ ಶೇಮಿಂಗ್ ಅಥವಾ ಟ್ರೋಲಿಂಗ್‌ಗೆ ಬಂದಾಗ, ಬುಮ್ರಾ ಪತ್ನಿ ಸಂಜನಾ ಗಣೇಶನ್ ಹಿಂದೆ ಮುಂದೆ ನೋಡದೆ ಜಾಡಿಸುವುದನ್ನು ತಪ್ಪಿಸುವುದಿಲ್ಲ.  ಈ ಬಾರಿಯೂ ಆಕೆಯನ್ನು ದಪ್ಪ ಎಂದವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

PREV
19
'ಹೆಣ್ಮಕ್ಕಳ ದೇಹದ್ ಬಗ್ಗೆ ಕಾಮೆಂಟ್ ಮಾಡೋ..' ಬಾಡಿ ಶೇಮ್ ಮಾಡಿದವ್ನಿಗೆ ಸರಿಯಾಗಿ ಜಾಡಿಸಿದ ಬುಮ್ರಾ ಪತ್ನಿ ಸಂಜನಾ

ಕ್ರೀಡಾ ನಿರೂಪಕಿ ಮತ್ತು ಭಾರತೀಯ ಸ್ಪೀಡ್‌ಸ್ಟರ್ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಬಾಡಿಶೇಮಿಂಗ್‌ಗೆ ಖಡಕ್ ರಿಪ್ಲೈ ಕೊಟ್ಟಿದ್ದಾರೆ.

29

ಜನಪ್ರಿಯ ಬ್ಯೂಟಿ ಬ್ರ್ಯಾಂಡ್ ಲೋರಿಯಲ್ ಸಹಭಾಗಿತ್ವದಲ್ಲಿ ತನ್ನ ಪತಿ ಬುಮ್ರಾ ಜೊತೆಗಿದ್ದ ಪ್ರೇಮಿಗಳ ದಿನದ ಪೋಸ್ಟೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಸಂಜನಾ ಹಾಕಿದ್ದರು.

39

ಇದಕ್ಕೆ ವ್ಯಕ್ತಿಯೊಬ್ಬ 'ಬಾಬಿ ಮೋಟಿ ಲಗ್ ರಹೀ ಹೈ(ಅತ್ತಿಗೆ ದಪ್ಪವಾಗಿ ಕಾಣುತ್ತಿದ್ದಾರೆ)' ಎಂದು ಕಾಮೆಂಟ್ ಹಾಕಿದ್ದ. ಈ ಪ್ರತಿಕ್ರಿಯೆಗೆ ಸಂಜನಾ ಫುಲ್ ಗರಂ ಆಗಿದ್ದಾರೆ.

 

49

ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ನಿನ್ನ ಶಾಲೆಯ ವಿಜ್ಞಾನ ಪಠ್ಯಪುಸ್ತಕಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲದವನು ನೀನು. ಇಲ್ಲಿ ಬಂದು ಸ್ತ್ರೀ ದೇಹಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದಿಯಾ, ಹೋಗತ್ಲಾಗೆ' ಎಂದು ಸಂಜನಾ ದಬಾಯಿಸಿದ್ದಾರೆ.

59

ಬಾಡಿ ಶೇಮಿಂಗಿಗೆ ಸಂಜನಾ ಕೊಟ್ಟ ಪ್ರತಿಕ್ರಿಯೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಂಜನಾ ಕೊಟ್ಟ ರಿಪ್ಲೈ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

69

ಸಂಜನಾ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ದೇಶ ಮತ್ತು ವಿದೇಶಗಳಲ್ಲಿ ಭಾರತದ ಕ್ರಿಕೆಟ್ ಸರಣಿಯ ಸಮಯದಲ್ಲಿ ಟಿವಿ ಕ್ರೀಡಾ ನಿರೂಪಕಿಯಾದ ನಂತರ ಅವರ ಜನಪ್ರಿಯತೆಯು ಹೆಚ್ಚಾಗಿದೆ.

79

ಆದರೆ ಪ್ರತಿ ಬಾರಿ ಆನ್‌ಲೈನ್ ಶೇಮಿಂಗ್ ಅಥವಾ ಟ್ರೋಲಿಂಗ್‌ಗೆ ಬಂದಾಗ, ಸಂಜನಾ ಹಿಂದೆ ಮುಂದೆ ನೋಡದೆ ಜಾಡಿಸುವುದನ್ನು ತಪ್ಪಿಸುವುದಿಲ್ಲ. 

 

89

ಬುಮ್ರಾ ಮತ್ತು ಸಂಜನಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿಗೆ ಪೋಷಕರಾದರು. ಗರ್ಭಾವಸ್ಥೆಯಲ್ಲಿ ವಿರಾಮದಲ್ಲಿದ್ದ ಸಂಜನಾ ಐಸಿಸಿಯ ಡಿಜಿಟಲ್ ಇನ್ಸೈಡರ್ ಆಗಿ ಇತ್ತೀಚೆಗೆ ಮುಕ್ತಾಯಗೊಂಡ ಅಂಡರ್-19 ವಿಶ್ವಕಪ್‌ನಲ್ಲಿ ಕೆಲಸಕ್ಕೆ ಮರಳಿದ್ದಾರೆ.

99

ಇನ್ನು  ಬುಮ್ರಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ವಿತೀಯ ಪ್ರದರ್ಶನ ನೀಡಿದವರಲ್ಲಿ ಒಬ್ಬರಾಗಿದ್ದಾರೆ. ಇದುವರೆಗೆ ಕೇವಲ ಎರಡು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಬುಮ್ರಾ ಮೈದಾನಕ್ಕೆ ಮರಳಲಿದ್ದಾರೆ.
 

Read more Photos on
click me!

Recommended Stories