ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು: ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ

Published : Oct 22, 2025, 09:43 PM IST

ಕರ್ಣನ ಸಂತೋಷವನ್ನು ಕಸಿದುಕೊಳ್ಳಲು ರಮೇಶ್ ಮಾಡಿದ ಪ್ಲಾನ್ ವಿಫಲವಾಗಿದೆ. ಪತ್ನಿ ನಿಧಿ ಮತ್ತು ಅನಿರೀಕ್ಷಿತವಾಗಿ ತಾಳಿ ಕಟ್ಟಿದ ನಿತ್ಯಾ ಇಬ್ಬರೂ ಒಂದೇ ಸೂರಿನಡಿ ಬಂದರೂ, ಕರ್ಣನ ಮುಖದಲ್ಲಿನ ನಗು ಮಾಸಿಲ್ಲ. 

PREV
15
ಕರ್ಣನ ಮುಖದಲ್ಲಿನ ನಗು

ಎಡಗಡೆ ಹೆಂಡ್ತಿ, ಬಲಗಡೆ ಪ್ರೇಯಸಿ ನಿಂತ್ರೆ ಕರ್ಣನ ಮುಖದಲ್ಲಿನ ನಗು ಶಾಶ್ವತವಾಗಿ ನಿಂತು ಹೋಗುತ್ತೆ ಎಂದು ರಮೇಶ್ ಪ್ಲಾನ್ ಮಾಡಿದ್ದ. ಈ ಪ್ಲಾನ್ ಪ್ರಕಾರ, ನಿಧಿ ಮನೆಗೆ ಬೆಂಕಿ ಹಾಕಿ ಎಲ್ಲರೂ ತನ್ನ ಮನೆಗೆ ಬರುವಂತೆ ಮಾಡಿದ್ದಾನೆ. ಆರಂಭದಲ್ಲಿ ನಿಧಿ ಮತ್ತು ಶಾಂತಿ ಒಪ್ಪಿರಲ್ಲ. ಕರ್ಣನ ಅಜ್ಜಿಯ ಬಲವಂತಕ್ಕೆ ಎಲ್ಲರೂ ಬರುತ್ತಾರೆ.

25
ಅಚ್ಚರಿ ಬೆಳವಣಿಗೆಗೆ ರಮೇಶ್ ಕಾರಣ

ಮದುವೆ ಮನೆಯಲ್ಲಾದ ಅಚ್ಚರಿ ಬೆಳವಣಿಗೆಗೆ ರಮೇಶ್ ಕಾರಣವಾದ್ರೂ, ಆತನಿಗೂ ತಿಳಿಯದ ಹಲವು ರಹಸ್ಯಗಳು ನಿತ್ಯಾ ಮತ್ತು ಕರ್ಣನ ನಡುವೆಯೇ ಉಳಿದುಕೊಂಡಿವೆ. ನಿತ್ಯಾ ಕೊರಳಲ್ಲಿ ತಾಳಿ ನೋಡಿದ ಅಜ್ಜಿಯರು ಕರ್ಣನೇ ಕಟ್ಟಿದ್ದಾನೆ ಎಂದು ತಿಳಿದುಕೊಂಡು, ಮುಂದಿನ ಮದುವೆ ಶಾಸ್ತ್ರಗಳನ್ನು ಮಾಡಿಸಿದ್ದಾರೆ. ಪ್ರಿಯಕರನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ನಿಧಿ, ತುಂಬಾ ತಾಳ್ಮೆಯಿಂದ ನಡೆದುಕೊಂಡಿದ್ದಾಳೆ.

35
ಸಂಕಷ್ಟದಲ್ಲಿ ನಯನತಾರಾ

ರಮೇಶ್‌ ತನ್ನ ಎಲ್ಲಾ ಪ್ಲಾನ್‌ಗಳು ಸಕ್ಸಸ್ ಅಗಿರುವ ಖುಷಿಯಲ್ಲಿದ್ರೆ, ಅಣ್ಣನ ಕುತಂತ್ರ ಆಟದಿಂದ ನಯನತಾರಾ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಕರ್ಣನ ಹುಟ್ಟು, ನಿಧಿ-ನಿತ್ಯಾ ಪೋಷಕರ ಸಾವಿನ ರಹಸ್ಯ ಒಂದಕ್ಕೊಂದು ಥಳಕು ಹಾಕಿಕೊಂಡಿದೆ. ಈ ಎರಡು ವಿಷಯಗಳ ಹಿಂದೆ ನಯನತಾರಾಳ ಕೈವಾಡವಿದ್ದು, ಒಂದೇ ಒಂದು ಸಣ್ಣ ತಪ್ಪಾದ್ರೂ ತನ್ನ ಮೇಲೆ ಪ್ರಭಾವ ಬೀರಲಿದೆ ಎಂಬ ಆತಂಕದಲ್ಲಿದ್ದಾಳೆ.

45
ರಮೇಶ್‌ಗೆ ಭ್ರಮನಿರಸನ

ನಿತ್ಯಾ, ನಿಧಿ ಮತ್ತು ಶಾಂತಿ ಮೂವರು ಮನೆಗೆ ಬಂದಾಯ್ತು. ಅನಿರೀಕ್ಷಿತ ಮದುವೆ ಸೇರಿದಂತೆ ನಡೆದ ಎಲ್ಲಾ ಘಟನೆಗಳಿಂದ ಕರ್ಣನ ಮುಖದಲ್ಲಿ ನಗು ಇರಲ್ಲ, ಆತ ಶೋಕದಲ್ಲಿರುತ್ತಾನೆ ಎಂದುಕೊಂಡಿದ್ದ ರಮೇಶ್‌ಗೆ ಭ್ರಮನಿರಸನ ಆಗಿದೆ. ಎಂದಿನಂತೆ ಬೆಳಗ್ಗೆ ಬೇಗ ಎದ್ದಿರುವ ಕರ್ಣ ತನ್ನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ. ಇದನ್ನು ನೋಡಿ ರಮೇಶ್ ಮತ್ತು ಸಂಜಯ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Amruthadhaare: ಕಳೆದುಕೊಂಡ ಪ್ರೀತಿ ಪಡೆದುಕೊಳ್ಳಲು ಗೌತಮ್‌ಗೆ ಸಲಹೆ: ಈಗ ಮಜಾ ಬಂತು ಎಂದ ವೀಕ್ಷಕರು

55
ಕರ್ಣನ ನಗು

ರಮೇಶ್ ಅಂದುಕೊಂಡಿದ್ದೇ ಒಂದು, ಆಗಿದ್ದು ಮತ್ತೊಂದು. ಕರ್ಣನ ನಗುವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಬಿಸಿ ಬಿಸಿ ಕಾಫಿ ಮಾಡಿ ನಿಧಿ ಮತ್ತು ರಮೇಶ್‌ಗೆ ನೀಡಿದ್ದಾನೆ. ನೋವು ತರುವಂತಹ ಘಟನೆಗಳನ್ನು ಮರೆಯಬೇಕು ಎಂದು ಕರ್ಣ ಹೇಳಿದ್ದಾನೆ.

ಇದನ್ನೂ ಓದಿ: Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

Read more Photos on
click me!

Recommended Stories