ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವನ ಕಿರಿಯ ಸೊಸೆ ದೀಪಿಕಾ ಪಾತ್ರದಲ್ಲಿ ನಟಿಸಿದ ನಟಿ ಹಾಗೂ ಕೊರಿಯೋಗ್ರಾಫರ್ ದರ್ಶಿನಿ ಡೆಲ್ಟಾ ಸಖತ್ ಬೋಲ್ಡ್ ಆಗಿ ಸೀರೆಯುಟ್ಟು ಇಂಟರ್ನೆಟ್ಟಲ್ಲಿ ಕಿಚ್ಚು ಹಚ್ಚಿದ್ದಾರೆ. ಸದ್ಯ ಅವರ ಫೋಟೊಗಳು ವೈರಲ್ ಆಗುತ್ತಿವೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ ಮಾಧವನ ಮಗ ಅಭಿಯ ಪತ್ನಿ ದೀಪಿಕಾ ಪಾತ್ರದಲ್ಲಿ, ಆರಂಭದಲ್ಲಿ ನೆಗೆಟಿವ್ ಶೇಡ್ ನಲ್ಲಿ ಬಳಿಕ, ಪಾಸಿಟಿವ್ ಪಾತ್ರದಲ್ಲಿ ನಟಿಸಿದ ನಟಿ ದರ್ಶಿನಿ ಡೆಲ್ಟಾ.
26
ವೃತ್ತಿಯಲ್ಲಿ ಕೊರಿಯೋಗ್ರಾಫರ್
ಕನ್ನಡದ ಜೊತೆ ಜೊತೆಗೆ ತೆಲುಗು ಸೀರಿಯಲ್ ಗಳಲ್ಲೂ ನಟಿಸುತ್ತಿರುವ ದರ್ಶಿನಿ ಡೆಲ್ಟಾ, ವೃತ್ತಿಯಲ್ಲಿ ಕೊರಿಯೋಗ್ರಾಫರ್. ಈ ಹಿಂದೆ ಅಸಿಸ್ಟಂಟ್ ಕೊರಿಯೋಗ್ರಾಫರ್ ಆಗಿದ್ದ ಈ ಬೆಡಗಿ ಉಪಾಧ್ಯಕ್ಷ ಸಿನಿಮಾ ಮೂಲಕ ಕೊರಿಯೋಗ್ರಾಫರ್ ಆಗಿ ತಮ್ಮ ಕನಸನ್ನು ನನಸಾಗಿಸಿಕೊಂಡರು.
36
ಸಖತ್ ಬೋಲ್ಡ್ ಬೆಡಗಿ
ದರ್ಶಿನಿ ಡೆಲ್ಟಾ ತುಂಬಾನೆ ಬೋಲ್ಡ್ ಆಗಿದ್ದು, ಇವರು ರೀಲ್ ನಲ್ಲೂ ರಿಯಲ್ ನಲ್ಲೂ ಸಖತ್ ಬೋಲ್ಡ್ ಅವತಾರಗಳಲ್ಲೇ ಕಾಣಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಶೇರ್ ಮಾಡಿದ್ದು, ಸದ್ಯ ಈ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ರಿಯಲ್ ಆಗಿ ಗ್ಲಾಮರಸ್ ಆಗಿರುವ ದರ್ಶಿನಿ ಇದೀಗ ಸಾಂಪ್ರದಾಯಿಕ ಸೀರೆಯನ್ನು ತುಂಬಾನೆ ಗ್ಲಾಮರಸ್ ಆಗಿ ಧರಿಸಿದ್ದು, Depth of my eyes speaks lots of truth! ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳು ಇದೀಗ ಸಖರ್ ವೈರಲ್ ಆಗುತ್ತಿದ್ದು, ನಟಿಯ ಬೋಲ್ಡ್ ಲುಕ್ ನೋಡಿ ಪಡ್ಡೆಗಳು ಶಾಕ್ ಆಗಿದ್ದಾರೆ.
56
ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ್ರ ನಟಿ
ದರ್ಶಿನಿಯ ಹೊಸ ಫೋಟೊ ಶೂಟ್ ನೆಟ್ಟಿಗರು ಕಿಡಿಕಾರಿದ್ದಾರೆ. ನಿಮಗೆ ಈ ಥರ ಫೋಟೊ ಶೂಟ್ ಮಾಡಿದಬೇಕು ಅಂತ ಇದ್ರೆ ಸೀರೆ ಯಾಕೆ ಆಯ್ಕೆ ಮಾಡಿದ್ದೀರಿ? ತುಂಡು ಬಟ್ಟೆಯ ತೊಡಬಹುದಿತ್ತಲ್ವಾ? ಸೀರೆಗೆ ಯಾಕೆ ಅವಮಾನ ಮಾಡ್ತಿದ್ದೀರಿ ಎಂದು ಕೇಳಿದ್ದಾರೆ. ಇನ್ನೂ ಹಲವರು ಫೈರ್ ಇಮೋಜಿ ಹಾಕಿ ಸೂಪರ್ ಅಂತಾನು ಹೇಳಿದ್ದಾರೆ.
66
ಡ್ಯಾನ್ಸ್ ಮೂಲಕ ಕಿಡಿ ಹಚ್ಚಿದ ಡೆಲ್ಟಾ
ಕೊರಿಯೋಗ್ರಾಫರ್ ಆಗಿರುವ ದರ್ಶಿನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಸಹ ತುಂಬಾನೆ ಆಕ್ಟಿವ್ ಆಗಿದ್ದು, ಹಲವಾರು ಹಿಂದಿ, ಕನ್ನಡ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಯಾಯಿರೇ ಯಾಯಿರೇ ವಿಡಿಯೋ ಸಿಕ್ಕಾಪಟ್ತೆ ವೈರಲ್ ಆಗುತ್ತಿದೆ.