ರಮೇಶ್‌ನ ಕುತಂತ್ರದಿಂದ ನಿಧಿ ಮತ್ತು ನಿತ್ಯಾ ಕರ್ಣನ ಮನೆ ಸೇರಿದ್ದು, ಇದರಿಂದ ತನ್ನೆಲ್ಲಾ ರಹಸ್ಯಗಳು ಬಯಲಾಗಬಹುದೆಂಬ ಆತಂಕದಲ್ಲಿ ನಯನತಾರಾ ಇದ್ದಾಳೆ. ಗಂಡನ ಸಂಚು ತಿಳಿದರೂ ಕರ್ಣನ ತಾಯಿ ಅಸಹಾಯಕಳಾಗಿದ್ದು, ಕರ್ಣ, ನಿತ್ಯಾ, ನಿಧಿಯ ಮುಂದಿನ ಜೀವನದ ಬಗ್ಗೆ ಕುತೂಹಲವಿದೆ.
ರಮೇಶ್‌ನ ಕುತಂತ್ರದಿಂದ ನಿತ್ಯಾ ಜೊತೆ ನಿಧಿ ಮತ್ತು ಶಾಂತಿ ಮೂವರು ಕರ್ಣನ ಮನೆ ಸೇರಿದ್ದಾರೆ. ಕೊಂಬೆ ಬೀಳಿಸು ಅಂದ್ರೆ ಇಡೀ ಮರವನ್ನೇ ನನ್ನ ಮೇಲೆ ಹಾಕುತ್ತಿದ್ದಾನೆ ಎಂದು ರಮೇಶ್‌ನ ತಂಗಿ ನಯನತಾರಾ ಕೋಪಗೊಂಡಿದ್ದಾಳೆ. ಒಂದೇ ಒಂದು ಸಣ್ಣ ತಪ್ಪಾದ್ರೂ ತಾನು ಬಚ್ಚಿಟ್ಟ ರಹಸ್ಯಗಳೆಲ್ಲಾ ಎಲ್ಲಿ ಬಯಲಾಗುತ್ತೆ ಎಂಬ ಆತಂಕ ನಯನತಾರಾಗೆ ಶುರುವಾಗಿದೆ.
25
ಕರ್ಣ
ಕರ್ಣ ದೇವಸ್ಥಾನ ಅಂತ ನಂಬಿರುವ ಆಸ್ಪತ್ರೆಯನ್ನು ತನ್ನ ಸ್ವಾರ್ಥಕ್ಕಾಗಿ ನಯನತಾರ ಬಳಸಿಕೊಳ್ಳುತ್ತಿದ್ದಾಳೆ. ಈ ಹಿಂದಿನ ಸಂಚಿಕೆಯಲ್ಲಿ ನಿತ್ಯಾ ಮತ್ತು ನಿಧಿ ತಂದೆಯ ಸಾವಿನ ಹಿಂದೆಯೂ ನಯನತಾರಾಳ ಕುತಂತ್ರವಿದೆ ಎಂಬುದನ್ನು ತೋರಿಸಲಾಗಿತ್ತು. ರೌಡಿಗಳ ಮೂಲಕ ಸಾವಿನ ರಹಸ್ಯ ಬಯಲಾಗದಂತೆ ನಯನತಾರಾ ತಡೆದಿದ್ದಳು. ಇದೀಗ ತಾನು ಬಚ್ಚಿಟ್ಟ ಎಲ್ಲಾ ಸತ್ಯಗಳು ತನ್ನ ಸುತ್ತವೇ ಸುಳಿಯುತ್ತಿರೋದರಿಂದ ನಯನಾತಾರಾ ಭಯಗೊಂಡಿದ್ದಾಳೆ.
35
ಕರ್ಣನ ಹುಟ್ಟಿನ ರಹಸ್ಯ
ರಮೇಶ್‌ನಿಗೆ ನಿಧಿ ಮತ್ತು ಶಾಂತಿ ತನ್ನ ಮನೆಯಲ್ಲಿಯೇ ಇರಬೇಕು. ಆದ್ರೆ ನಯನಾತಾರಾಗೆ ಇಬ್ಬರನ್ನು ಮನೆಯಿಂದ ಹೊರಗೆ ಹಾಕಬೇಕಿದೆ. ನಿತ್ಯಾ ಜೊತೆ ಮೂವರು ಮನೆಯಲ್ಲಿದ್ರೆ ರಹಸ್ಯಗಳು ಬಯಲಾಗಬಹುದು. ಹಾಗಾಗಿ ತಾನು ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ನಯನತಾರಾ ಪ್ಲಾನ್ ಮಾಡಿಕೊಂಡಿದ್ದಾಳೆ. ಕರ್ಣನ ಹುಟ್ಟಿನ ರಹಸ್ಯ ನಯನತಾರಾಳ ಒಡಲಿನಲ್ಲಿದೆ.
ಕರ್ಣನ ಮನೆಗೆ ಬರುತ್ತಿದ್ದಂತೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಿತ್ಯಾ-ಕರ್ಣನ ಜೊತೆಯಲ್ಲಿಯೇ ನಿಧಿಯ ಗೃಹಪ್ರವೇಶವಾಗಿದೆ. ತೇಜಸ್ ಯಾಕೆ ಹೀಗೆ ಮಾಡಿದೆ? ನಮ್ಮ ಪ್ರೀತಿಯ ಅರಮನೆ ಯಾಕೆ ಕೆಡವಿದೆ? ನನ್ನ ಮೇಲಿನ ನಂಬಿಕೆ ಈಗ ಶಾಂತಿಗಿಲ್ಲ ಎಂದು ನಿತ್ಯಾ ಕಣ್ಣೀರು ಹಾಕಿದ್ದಾಳೆ. ಮತ್ತೊಂದೆಡೆ ಈ ಎಲ್ಲಾ ದೃಶ್ಯ ನೋಡಿ ಮಗನೊಂದಿಗೆ ರಮೇಶ್ ಖುಷಿಯಾಗಿದ್ದಾನೆ.
ಎಲ್ಲಾ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿರುವ ನಿಧಿಗೆ ಕರ್ಣನ ತಾಯಿ ಸಾಂತ್ವಾನ ಹೇಳಿದ್ದಾರೆ. ಎಲ್ಲವೂ ದೇವರ ಇಚ್ಛೆ ಎಂದಿರುವ ಕರ್ಣನ ತಾಯಿ ಅಸಹಾಯಕಳಾಗಿ ನಿಂತಿದ್ದಾಳೆ. ಇದೆಲ್ಲದರ ಹಿಂದೆ ಗಂಡ ರಮೇಶ್‌ನ ಸಂಚು ಇರೋ ವಿಷಯ ಗೊತ್ತಿದ್ರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಮುಂದೆ ಕರ್ಣ, ನಿತ್ಯಾ ಮತ್ತು ನಿಧಿ ಜೀವನ ಹೇಗಿರುತ್ತೆ ಎಂಬುವುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.