ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರದ ತಿರುವು ಸಿಕ್ಕಿದ್ದು, ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇಲ್ಲಿಯ ಋಣ ಮುಗಿದಿದೆ. ಮತ್ತೆ ವಾಪಸ್ ನಾನು ಈ ಮನೆಗೆ ಬರಲ್ಲ ಎಂದು ಹೇಳಿ ಜಾನು ಹೊರ ನಡೆದಿದ್ದಾಳೆ. ಚಿನ್ನುಮರಿಯನ್ನು ಹುಡುಕಿಕೊಂಡು ಬಂದಿರುವ ಸೈಕೋ ಜಯಂತ್ ಮನೆಯೊಳಗೆ ಬರುವಷ್ಟರಲ್ಲಿ ಜಾನು ಹೋಗಿದ್ದಾಳೆ.