Karna Serial: ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!

Published : Dec 02, 2025, 11:37 PM IST

ನಿತ್ಯಾ ಗರ್ಭಿಣಿ ಎಂಬ ಸತ್ಯವನ್ನು ವೈದ್ಯೆಯಾದ ನಿಧಿ ಪತ್ತೆಹಚ್ಚಲು ಯತ್ನಿಸುತ್ತಾಳೆ. ಇವರಿಬ್ಬರ ನಡುವೆ ಸಿಲುಕಿರುವ ಕರ್ಣ, ನಿತ್ಯಾಳಿಗೆ ತನ್ನ ಜೀವನದ ಸತ್ಯವನ್ನು ಹೇಳಲು ನಿರ್ಧರಿಸುತ್ತಾನೆ, ಆದರೆ ಅವನು ಸತ್ಯ ಹೇಳುವಷ್ಟರಲ್ಲಿ ನಿತ್ಯಾ ಮಲಗಿರುವುದರಿಂದ ಅವನ ಪ್ರಯತ್ನ ವಿಫಲವಾಗುತ್ತದೆ.

PREV
18
ಸ್ಯಾಂಡ್​ವಿಚ್​ ಆದ ಕರ್ಣ

ಕರ್ಣ ಸೀರಿಯಲ್​ನಲ್ಲಿ ಇದೀಗ ನಿತ್ಯಾ ಮತ್ತು ನಿಧಿಯ ನಡುವೆ ಸ್ಯಾಂಡ್​ವಿಚ್​ ಆಗಿದ್ದಾನೆ ಕರ್ಣ. ನಿಧಿ ಮತ್ತು ನಿತ್ಯಾ ಇಬ್ಬರನ್ನೂ ಸಮಾಧಾನ ಮಾಡಬೇಕಿದೆ. ನಿಧಿಯ ಗುಟ್ಟನ್ನು ನಿತ್ಯಾ ಬಳಿ ಹೇಳುವಂತಿಲ್ಲ, ನಿತ್ಯಾ ಗುಟ್ಟನ್ನು ಬಯಲು ಮಾಡುವಂತಿಲ್ಲ. ಎಲ್ಲವನ್ನೂ ಒಳಗೇ ಇಟ್ಟುಕೊಂಡು ನೋವನ್ನು ಅನುಭವಿಸುತ್ತಿದ್ದಾನೆ ಕರ್ಣ.

28
ಕೇಳಿಸಿಕೊಂಡಿದ್ದ ನಿಧಿ

ನಿತ್ಯಾಳನ್ನು ಟೆಸ್ಟ್​ ಮಾಡಲು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅಕ್ಕ ಗರ್ಭಿಣಿ ಎನ್ನುವ ವಿಷಯವನ್ನು ನಿಧಿ ಕೇಳಿಸಿಕೊಂಡಿದ್ದಾಳೆ. ಆದರೆ ಅದನ್ನು ನಂಬಲು ಅವಳಿಗೆ ಸಾಧ್ಯವಾಗುತ್ತಿಲ್ಲ. ಆದರೂ ತಾನು ಮೋಸ ಹೋದೆ ಎನ್ನುವ ಭಾವ ಆಕೆಯದ್ದು.

38
ತಲೆ ತಿರುಗುವುದು

ಅದೇ ಇನ್ನೊಂದೆಡೆ ಪದೇ ಪದೇ ಅಕ್ಕ ನಿತ್ಯಾಳಿಗೆ ತಲೆ ತಿರುಗುವುದು ನೋಡಿ ನಿಧಿಗೆ ಡೌಟ್​ ಬರಲು ಶುರುವಾಗಿದೆ. ನಾನೂ ಗರ್ಭಿಣಿ ಇದ್ದಾಗ ಹೀಗೆಯೇ ಆಗಿತ್ತು ಎಂದು ಅತ್ತಿಗೆ ಹೇಳಿದಾಗ ನಿತ್ಯಾಗೆ ಎಲ್ಲಿ ಎಲ್ಲರಿಗೂ ಸತ್ಯ ಗೊತ್ತಾಗತ್ತೋ ಎಂದು ಶಾಕ್​ ಆದರೆ, ಇದನ್ನು ಕೇಳಿದ ನಿಧಿಗೆ ಅಕ್ಕನ ಮೇಲೆ ಡೌಟ್​ ಬಂದಿದೆ.

48
ಹಾರಿಕೆ ಉತ್ತರ

ಹೇಗಾದರೂ ಮಾಡಿ ಅಕ್ಕನ ಸತ್ಯ ತಿಳಿದುಕೊಳ್ಳಬೇಕು ಎಂದುಕೊಂಡಿದ್ದಾಳೆ. ಅದಕ್ಕಾಗಿ ಅಕ್ಕನ ಬಳಿ ಹೋಗಿ ಮಾತನಾಡಿದ್ದಾಳೆ. ಅವಳು ಕೇಳಿದ ಪ್ರಶ್ನೆಗೆಲ್ಲಾ ನಿತ್ಯಾ ಹಾರಿಕೆ ಉತ್ತರ ಕೊಟ್ಟಿದ್ದಾಳೆ.

58
ವೈದ್ಯೆಯಾಗಿರೋ ನಿಧಿ

ಆಗ ಸಂದೇಹ ಬಂದ ನಿಧಿ, ನಿನ್ನ ಕೈಕೊಡು ನೋಡುತ್ತೇನೆ ಎಂದಿದ್ದಾಳೆ. ಅವಳೂ ಡಾಕ್ಟರ್​ ಆಗಿರೋ ಕಾರಣ, ನಾಡಿ ಮಿಡಿತ ನೋಡಿ ಅಕ್ಕ ಗರ್ಭಿಣಿ ಹೌದೋ ಅಲ್ಲವೋ ಎಂದು ಹೇಳಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ.

68
ನಿತ್ಯಾಗೆ ಶಾಕ್​

ತಂಗಿಯ ಮಾತು ಕೇಳಿ ನಿತ್ಯಾಗೆ ಶಾಕ್​ ಆಗಿದೆ. ಯಾಕೆ ಎಂದು ಕೇಳಿದ್ದಾಳೆ. ನಿಧಿ ಒತ್ತಾಯದಿಂದ ಅವಳ ಕೈ ಹಿಡಿದುಕೊಳ್ಳಲು ಹೋದಾಗ ಅವಳು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾಳೆ. ಆದರೆ ಅಕ್ಕ ಗರ್ಭಿಣಿ ಎನ್ನುವ ಸತ್ಯ ಮಾತ್ರ ತಿಳಿದು ಬೇರೆಯದ್ದೇ ಕಲ್ಪಿಸಿಕೊಂಡಿದ್ದಾಳೆ.

78
ಸತ್ಯ ಹೇಳುವ ತೀರ್ಮಾನ

ಇದೀಗ ಹೇಗಾದರೂ ಮಾಡಿ ತನ್ನ ಮತ್ತು ನಿಧಿಯ ಸತ್ಯವನ್ನು ನಿತ್ಯಾಳ ಬಳಿ ಹೇಳುವ ತೀರ್ಮಾನ ಮಾಡಿದ್ದಾನೆ ಕರ್ಣ. ನಿಧಿ ಸೋಫಾದ ಮೇಲೆ ಕುಳಿತಾದ ಎಲ್ಲಾ ವಿಷಯವನ್ನೂ ಹೇಳಿಬಿಟ್ಟಿದ್ದಾನೆ. ನನ್ನ ಲೈಫ್​ನಲ್ಲಿ ಇನ್ನೊಬ್ಬಳು ಇರುವುದು ನಿಜ ಎಂದಿದ್ದಾನೆ.

88
ಎಲ್ಲವೂ ಫ್ಲಾಪ್​

ಆಕೆ ಯಾರು ಎಂದು ಹೇಳಲು ಹತ್ತಿರ ಹೋಗಿದ್ದಾನೆ. ಆದರೆ ಸೋಫಾದ ಮೇಲೆ ಕುಳಿತಿದ್ದ ನಿತ್ಯಾಳ ರೆಸ್​ಪಾನ್ಸ್​ ಬರದಾಗ ಎದುರಿಗೆ ಹೋಗಿ ನೋಡಿದ್ರೆ ಆಕೆ ಮಲಗಿಕೊಂಡಿದ್ದಳು! ಅಲ್ಲಿಗೆ ಎಲ್ಲವೂ ಫ್ಲಾಪ್​ ಆಗಿದೆ.

Read more Photos on
click me!

Recommended Stories