ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದು, ಇದಕ್ಕಾಗಿ ಜೋಡಿ ಟಾಸ್ಕ್ ನೀಡಲಾಗಿದೆ. ಈ ಆಟದ ವೇಳೆ ಸ್ಪರ್ಧಿಯೊಬ್ಬರ ಕಾಲಿಗೆ ಗಾಯವಾಗಿದ್ದು, ಅಶ್ವಿನಿ ಮತ್ತು ರಘು ಈ ವಾರ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮುಂದಿನ ವಾರ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದಾರೆ. ಹಾಗಾಗಿ ಈ ವಾರ ಸ್ಪರ್ಧಿಗಳು ಜೋಡಿಗಳಾಗಿ ಆಟವಾಡಬೇಕು. ಧ್ರುವಂತ್ ಅವರನ್ನು ಜೋಡಿಯನ್ನಾಗಿ ಮಾಡಿಕೊಳ್ಳಲು ಯಾವ ಮಹಿಳಾ ಸ್ಪರ್ಧಿಯೂ ಒಪ್ಪಂದ ಹಿನ್ನೆಲೆ ಒಂಟಿಯಾಗಿ, ಆಟದ ಉಸ್ತುವಾರಿ ಮಾಡುತ್ತಿದ್ದಾರೆ.
25
ಸದ್ಯ ಮನೆಯಲ್ಲಿ ರಚನೆಯಾಗಿರುವ ಜೋಡಿಗಳು ಈ ರೀತಿಯಾಗಿವೆ.
ಕಾವ್ಯಾ ಶೈವ ಮತ್ತು ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ
ರಾಶಿಕಾ ಶೆಟ್ಟಿ & ಸೂರಜ್ ಸಿಂಗ್
ಅಭಿಷೇಕ್ ಶ್ರೀಕಾಂತ್ ಮತ್ತು ಸ್ಪಂದನಾ ಸೋಮಣ್ಣ
ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್
35
ಜೋಡಿ ಟಾಸ್ಕ್
ಜೋಡಿ ಸ್ಪರ್ಧಿಗಳು ಜೊತೆಯಾಗಿ ಒಂದು ಕಾಲಿಗೆ ದಾರ ಕಟ್ಟಿಕೊಂಡು ಮುಂದಿರುವ ಬಾಲ್‌ಗಳನ್ನು ಶೇಖರಿಸಬೇಕು. ಕಡಿಮೆ ಬಾಲ್ ಸಂಗ್ರಹಿಸುವ ಜೋಡಿ ಆಟದಿಂದ ಹೊರಗುಳಿಯುತ್ತದೆ. ಮೊದಲ ಸುತ್ತಿನಲ್ಲಿ ಚೈತ್ರಾ ಮತ್ತು ರಜತ್ ಆಟದಿಂದ ಹೊರಗೆ ಉಳಿದ್ರೆ, ರಕ್ಷಿತಾ-ಮಾಳು ಅತಿ ಹೆಚ್ಚು ಬಾಲ್ ಸಂಗ್ರಹಿಸಿದ್ದಾರೆ.
ಈ ವಾರ ಅಶ್ವಿನಿ ಗೌಡ ಮತ್ತು ರಘು ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರುವ ಚೈತ್ರಾ ಕುಂದಾಪುರ ಮತ್ತು ರಜತ್ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ. ಇನ್ನುಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.