ಗೌತಮ್‌ನಿಂದ ದೂರವಿರಲು ಬೆಂಗಳೂರಿಗೆ ಬಂದ ಭೂಮಿಕಾ, ಆತ ವಾಸವಿರುವ ವಠಾರದಲ್ಲೇ ಮನೆ ಮಾಡುತ್ತಾಳೆ. ಸಾಮಾನ್ಯನಂತೆ ಬದುಕುತ್ತಿರುವ ಗೌತಮ್‌ನನ್ನು ಕಂಡು ಆಘಾತಕ್ಕೊಳಗಾದ ಭೂಮಿಕಾ, ಆತನ ಮೌನ ಮತ್ತು ಮಿಂಚು ಎಂಬ ಹುಡುಗಿಯ ಆಗಮನದಿಂದ ಮತ್ತಷ್ಟು ಗೊಂದಲಕ್ಕೊಳಗಾಗಿದ್ದಾಳೆ.
ಭೂಮಿಕಾ ತನ್ನಿಂದ ದೂರವಾಗಿದ್ದೇಕೆ ಎಂಬುದರ ಬಗ್ಗೆ ಇದುವರೆಗೂ ಗೌತಮ್‌ಗೆ ಸ್ಪಷ್ಟತೆ ಇಲ್ಲ. ದಿವಾನ್ ಮನೆತನದಿಂದ ದೂರವಾದ ಭೂಮಿಕಾಳನ್ನು ಹುಡುಕಲು ಗೌತಮ್‌ಗೆ ಐದು ವರ್ಷ ಬೇಕಾಗಿತ್ತು. ಕುಶಾಲನಗರದಲ್ಲಿ ಭೂಮಿಕಾಳನ್ನು ಹುಡುಕಿದ ಗೌತಮ್‌ಗೆ ನಿರಾಸೆ ಎದುರಾಗಿತ್ತು. ತನ್ನಿಂದ ದೂರ ಹೋಗುವಂತೆ ಹೇಳಿದ್ಮೇಲೆ ಗೌತಮ್ ಸಹ ಕುಶಾಲನಗರದಿಂದ ಬೆಂಗಳೂರಿಗೆ ಬಂದಿದ್ದನು.
25
ಗೊಂದಲದಲ್ಲಿ ಸಿಲುಕಿದ ಭೂಮಿಕಾ
ಇತ್ತ ಕುಶಾಲನಗರದಲ್ಲಿದ್ರೆ ಮತ್ತೆ ಗೌತಮ್ ಬರಬಹುದು ಎಂದು ಭೂಮಿಕಾ ಬೆಂಗಳೂರಿಗೆ ಶಿಫ್ಟ್ ಆಗಿದ್ದಾಳೆ. ಮಲ್ಲಿ ಮತ್ತು ಕಾವೇರಿಯ ಪ್ಲಾನ್‌ನಿಂದ ಗೌತಮ್ ವಾಸವಾಗಿರುವ ವಠಾರದಲ್ಲಿಯೇ ಭೂಮಿಕಾಗೆ ಬಾಡಿಗೆ ಮನೆ ಸಿಕ್ಕಿದೆ. ನೂರಾರು ಕೋಟಿ ಒಡೆಯನನ್ನು ವಠಾರದಲ್ಲಿ ನೋಡಿ ಭೂಮಿಕಾ ಶಾಕ್ ಆಗಿದ್ದಾಳೆ. ಎಲ್ಲವನ್ನು ತೊರೆದು ಭೂಮಿಕಾಳ ಹಿಂದೆಯೇ ಗೌತಮ್ ಬಂದಿದ್ದನು. ಆದರೆ ಈ ವಿಷಯ ತಿಳಿಯದೇ ಭೂಮಿಕಾ ಗೊಂದಲದಲ್ಲಿದ್ದಾಳೆ.
35
ಭೂಮಿಕಾಗೆ ಗೊತ್ತಿಲ್ಲ ವಿಷಯ
ದಿವಾನ್ ಅರಮನೆಯಿಂದ ಹೊರ ಬಂದಿರುವ ಗೌತಮ್, ಸಾಮಾನ್ಯ ವ್ಯಕ್ತಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಠಾರದಲ್ಲಿರುವ ಜನರಿಗೂ ಗೌತಮ್ ಓರ್ವ ಕಾರ್ ಡ್ರೈವರ್ ಅಂತಾ ಮಾತ್ರ ಗೊತ್ತಿದೆ. ಇಡೀ ಬೆಂಗಳೂರು ಖರೀದಿಸುವ ಶಕ್ತಿ ಇರೋ ಗೌತಮ್ ದಿವಾನ್ ವಠಾರದಲ್ಲಿ ಏನು ಮಾಡ್ತಿದ್ದೀರಿ ಎಂದು ಭೂಮಿಕಾ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಭೂಮಿಕಾಳ ಯಾವುದೇ ಪ್ರಶ್ನೆಗೆ ಉತ್ತರ ನೀಡದೇ ಗೌತಮ್ ತೆರಳಿದ್ದಾನೆ. ತನ್ನನ್ನು ಹಿಂಬಾಲಿಸಿಕೊಂಡು ಬಂದಿರಬಹುದು ಎಂದು ಭೂಮಿಕಾ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ.
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಭೂಮಿಕಾ ಪ್ರಶ್ನೆಗೆ ಉತ್ತರಿಸದ ಗೌತಮ್ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಕಳೆದುಕೊಂಡ ಭೂಮಿಕಾ ಪ್ರೀತಿ ನಿಮಗೆ ಸಿಗಬೇಕಾದ್ರೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬೇಡಿ. ಆಗ ಕುತೂಹಲದಿಂದ ಭೂಮಿಕಾ ತಾನೇ ನಿಮ್ಮ ಹತ್ತಿರ ಬರ್ತಾರೆ ಎಂದು ಗೌತಮ್‌ಗೆ ಸಲಹೆ ನೀಡಿದ್ದಾರೆ.
ಭೂಮಿಕಾ ಪ್ರಿನ್ಸಿಪಾಲ್ ಆಗಿರುವ ಶಾಲೆಗೆ ಮಿಂಚುಳನ್ನು ಸೇರಿಸಲು ಗೌತಮ್ ಬಂದಿದ್ದಾನೆ. ನನಗೆ ಅಪ್ಪ-ಅಮ್ಮಾ ಎಲ್ಲಾ ಗೌತಮ್ ಎಂದು ಮಿಂಚು ಹೇಳಿದ್ದಾಳೆ. ಹಾಗಾದ್ರೆ ಈ ಹುಡುಗಿ ಯಾರು ಎಂಬ ಕುತೂಹಲ ಭೂಮಿಕಾಳಲ್ಲಿ ಮೂಡಿದೆ. ಮುಂದೆ ಈ ಕಥೆ ಹೇಗೆ ಸಾಗುತ್ತೆ ಎಂದು ತಿಳಿಯಲು ವೀಕ್ಷಕರು ಕಾತುರರಾಗಿದ್ದಾರೆ.