Amruthadhaare Tv Serial: ಲಕ್ಷ್ಮೀಕಾಂತ್ ಮಾವ ಇಷ್ಟುದಿನಗಳಿಂದ ಮದುವೆಯಾಗದೆ, ಮಕ್ಕಳನ್ನು ಮಾಡಿಕೊಳ್ಳದೆ ಸಂಸಾರದ ಬಗ್ಗೆ ಯೋಚನೆ ಮಾಡದೆ, ಶಾಕುಂತಲಾ ಹಾಗೂ ಜಯದೇವ್ ಜೊತೆ ಇದ್ದನು. ಇವರ ಜೊತೆ ಸೇರಿಕೊಂಡು ಅವನು ಮಾಡಿದ ಕೆಟ್ಟ ಕೆಲಸ ಒಂದಲ್ಲ, ಎರಡಲ್ಲ. ಈಗ ಅವನಿಗೆ ಬುದ್ಧಿ ಬಂದಿದೆ.
ಈ ಹಿಂದೆ ಶಕುಂತಲಾ ತಾನು ಮಾಡಿದ ತಪ್ಪಿಗೆ ತನ್ನ ಅಣ್ಣನನ್ನು ಜೈಲಿಗೆ ಕಳಿಸಿದ್ದಳು. ಆದರೆ ಒಮ್ಮೆಯೂ ಅಣ್ಣನನ್ನು ನೋಡಲು ಬರಲಿಲ್ಲ. ಗೌತಮ್‌ನಿಂದ ಅಷ್ಟು ಆಸ್ತಿ ಅನುಭವಿಸುವ ಯೋಗ ಬಂದರೂ ಕೂಡ ಶಕುಂತಲಾ, ಜಯದೇವ್ ಪಾತ್ರ ಲಕ್ಷ್ಮೀಕಾಂತ್ ಕಡೆಗೆ ಮುಖ ಮಾಡಿರಲಿಲ್ಲ, ಯೋಚನೆಯೂ ಮಾಡಿರಲಿಲ್ಲ.
28
ಲಕ್ಷ್ಮೀಕಾಂತ್‌ನನ್ನು ಜೈಲಿನಿಂದ ಬಿಡಿಸಲೇ ಇಲ್ಲ
ಈ ಹಿಂದೆ ಶಕುಂತಲಾ ತಾನು ಮಾಡಿದ ತಪ್ಪಿಗೆ ತನ್ನ ಅಣ್ಣನನ್ನು ಜೈಲಿಗೆ ಕಳಿಸಿದ್ದಳು. ಆದರೆ ಒಮ್ಮೆಯೂ ಅಣ್ಣನನ್ನು ನೋಡಲು ಬರಲಿಲ್ಲ. ಗೌತಮ್‌ನಿಂದ ಅಷ್ಟು ಆಸ್ತಿ ಅನುಭವಿಸುವ ಯೋಗ ಬಂದರೂ ಕೂಡ ಶಕುಂತಲಾ, ಜಯದೇವ್ ಪಾತ್ರ ಲಕ್ಷ್ಮೀಕಾಂತ್ ಕಡೆಗೆ ಮುಖ ಮಾಡಿರಲಿಲ್ಲ, ಯೋಚನೆಯೂ ಮಾಡಿರಲಿಲ್ಲ.
38
ಲಕ್ಷ್ಮೀಕಾಂತ್ ಮಾವನನ್ನು ಬಿಡಿಸಿದ ಗೌತಮ್
ಆದರೆ ಗೌತಮ್ ಮಾತ್ರ ಲಕ್ಷ್ಮೀಕಾಂತ್ ಮಾವನನ್ನು ಬಿಡಿಸಲು ತುಂಬ ಕಷ್ಟಪಟ್ಟಿದ್ದು, 50000 ರೂಪಾಯಿ ದುಡ್ಡು ಕೊಟ್ಟಿದ್ದನು. “ಗೌತಮ್ ತುಂಬ ಕಷ್ಟಪಟ್ಟು 50000 ರೂಪಾಯಿ ಕೊಟ್ಟು, ನಿಮ್ನನ್ನು ಬಿಡಿಸಿದ್ದಾನೆ. ನೀವು ಅವನಿಗೆ ಋಣಿ ಆಗಿರಬೇಕು” ಎಂದು ಆನಂದ್, ಲಕ್ಷ್ಮೀಕಾಂತ್‌ನಿಗೆ ಹೇಳಿದ್ದನು. ಆದರೆ ಲಕ್ಷ್ಮೀಕಾಂತ್ ಆರಂಭದಲ್ಲಿ ಅವನ ಮಾತನ್ನು ನಂಬಿರಲಿಲ್ಲ.
ಈಗ ಮನೆಗೆ ಬಂದಮೇಲೆ ಶಕುಂತಲಾ, ಜಯದೇವ್ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಮಾಡುತ್ತಿರೋದು, ನನ್ನನ್ನು ಕೆಲಸದವರ ಥರ ನೋಡುತ್ತಿರೋದು ನೋಡಿ ಲಕ್ಷ್ಮೀಕಾಂತ್‌ಗೆ ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿಗೆ ಪ್ರಾಯಶ್ಚಿತ ಆಗಿದೆ. ಇವರಿಗೆ ಸಮಾಧಿ ಕಟ್ಟಲು ಲಕ್ಷ್ಮೀಕಾಂತ್ ರೆಡಿ ಆಗಿದ್ದಾನೆ.
58
ತಂಗಿಗೋಸ್ಕರ ಮಾಡಬಾರದ ತಪ್ಪು ಮಾಡಿದೆ
“ಬದುಕು ಒಂದು ನಾಟಕ ರಂಗ, ಆದರೆ ಮೇಕಪ್ ಎಷ್ಟಿರಬೇಕು ಅಂತ ಗೊತ್ತಿರಬೇಕು. ಮೇಕಪ್ ಸಹಜವಾಗಿರಬೇಕು, ಸರಳವಾಗಿರಬೇಕು, ನೋಡಿದೋರು ಓಡಿ ಹೋದರೂ ಪರವಾಗಿಲ್ಲ. ಸ್ವಾಭಿಮಾನ ಬಿಟ್ಟುಕೊಡಬಾರದು, ವ್ಯಕ್ತಿತ್ವ ಬಿಡಬಾರದು. ಈ ಇಳಿ ವಯಸ್ಸಿನಲ್ಲಿ ನನಗೆ ಈ ಸತ್ಯ ಗೊತ್ತಾಯ್ತು. ಕೇವಲ ಮನರಂಜನೆ ಇದ್ದರೆ ಏನೂ ನಡೆಯೋದಿಲ್ಲ, ಬದುಕಿನಲ್ಲಿ ಸ್ವಲ್ಪ ಬೋಧನೆಯೂ ಇರಬೇಕು. ನಾನು ತಂಗಿ, ಮಕ್ಕಳು ಎಂದು ಮಾಡಬಾರದ ತಪ್ಪು ಮಾಡಿದೆ” ಎಂದು ಲಕ್ಷ್ಮೀಕಾಂತ್ ಒಬ್ಬನೇ ಮಾತನಾಡಿಕೊಂಡಿದ್ದಾನೆ.
68
ನನ್ನದು ಒಂದು ಬಾಳಾ?
“ವಿದುರನಾಗಬೇಕಿದ್ದವನು ಶಕುನಿಯಾದ. ನನಗೆ ಏನು ಕಮ್ಮಿ ಇತ್ತು? ಮಾತು, ವಿಚಾರ, ಬುದ್ಧಿಶಕ್ತಿ, ವಿವೇಕ ಎಲ್ಲ ಇತ್ತು. ಆದರೂ ಹಣೆಬರಹ, ಬೇಕಾಗಿದ್ದ ಕಡೆ ಬಳಕೆ ಆಗದೆ, ಬೇಡವಾಗದ ಕಡೆ ಬಳಕೆ ಆಯ್ತು. ನನ್ನ ಹಾಗೆ ಮನೆ ಹಾಳು ಮಾಡುವವರಿಗೆ ಒಳ್ಳೆಯ ಉದಾಹರಣೆ ಆಗಬೇಕು. ನನ್ನ ಥರ ಮಾಡಿದ್ರೆ ಕ್ರಿಮಿ ಆಗ್ತೀರಾ, ಅಂಥ ಬಾಳು ಬೇಕಾ? ಇದು ಒಂದು ಬಾಳಾ?” ಎಂದು ಮಾವ ತನ್ನನ್ನು ತಾನೇ ವಿಮರ್ಶೆ ಮಾಡಿಕೊಂಡಿದ್ದಾನೆ.
78
ಅಷ್ಟು ದುಡ್ಡಿದ್ರೂ 50000 ರೂ ಕೊಡೋಕೆ ಆಗಿಲ್ವಾ?
ʼಒಂಟಿ ಪಿಶಾಚಿ ಥರ ಇಡೀ ಜೀವಮಾನ ತಂಗಿ, ತಂಗಿ ಮಕ್ಕಳಿಗೆ ಸವೆಸಿದೆ, ಎಲ್ಲವನ್ನು ಕಳೆದುಕೊಂಡೆ, ಆಯುಷ್ಯ ಸವೆಸಿದೆ, ಕತ್ತಲೆ ಕೋಣೆಯಲ್ಲಿ ಕಳೆಯುವ ಹಾಗೆ ಮಾಡಿದ್ರು, ಮುದ್ದೆ ಮುರಿಯೋ ಹಾಗೆ ಮಾಡಿದ್ರು, ಇಷ್ಟೆಲ್ಲ ದುಡ್ಡಿದ್ದರೂ ಕೂಡ 50000 ರೂಪಾಯಿ ಕೊಡೋಕೆ ಆಗಲಿಲ್ಲವಾ? ನಿಮ್ಮ ಜೊತೆ ಇದ್ದಿದ್ದಕ್ಕೆ ಇದು ನನಗೆ ಸಿಕ್ಕ ಬಹುಮಾನ” ಎಂದು ಲಕ್ಷ್ಮೀಕಾಂತ್ ಹೇಳಿಕೊಂಡಿದ್ದಾನೆ.
88
ಶಕುಂತಲಾ, ಜಯದೇವ್ ಭಿಕ್ಷೆ ಬೇಡಬೇಕು
“ಅವರಿಂದ ಇಷ್ಟು ದೊಡ್ಡ ಬಹುಮಾನ ಪಡೆದಮೇಲೆ ನೀನು ಕೊಡಬೇಕು ಅಲ್ವಾ ಅವರಿಗೆ. ಕೌರವನ ಜೊತೆ ಶಕುನಿ ಇದ್ದ ಅಲ್ವಾ? ಕೌರವನ ಜೊತೆ ಇದ್ದುಕೊಂಡು ಶಕುನಿ ಹಳ್ಳತೋಡಿದ ಹಾಗೆ ನಿಮ್ಮ ಜೊತೆ ಇದ್ದುಕೊಂಡು ನಿಮ್ಮನ್ನು ಕೂಡ ಹಳ್ಳ ತೋಡಿ ಮಣ್ಣು ಮುಚ್ಚುವೆ. ರೋಡ್ ರೋಡ್‌ನಲ್ಲಿ ಭಿಕ್ಷೆ ಬೇಡುವ ಹಾಗೆ ಮಾಡ್ತೀನಿ” ಎಂದು ಲಕ್ಷ್ಮೀಕಾಂತ್ ಹೇಳಿದ್ದಾರೆ.