ಬಿಗ್ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಯವರ ಕನ್ನಡ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರು ಉದ್ದೇಶಪೂರ್ವಕವಾಗಿ ಅರ್ಧಂಬರ್ಧ ಕನ್ನಡ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ಮನೆಯಿಂದ ಹೊರಬಂದಿರುವ ಸ್ಪರ್ಧಿ ಅಶ್ವಿನಿ SN ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಬಿಗ್ಬಾಸ್ (Bigg Boss)ನಲ್ಲಿ ರಕ್ಷಿತಾ ಶೆಟ್ಟಿಯ ಹವಾ ಜೋರಾಗಿಯೇ ಇದೆ. ಕೆಲ ದಿನಗಳ ಹಿಂದೆ ಇವರ ವೈಯಕ್ತಿಕ ನಿಂದನೆ ಮಾಡುವ ಮೂಲಕ ಜಾನ್ವಿ ಮತ್ತು ಅಶ್ವಿನಿ ಗೌಡ ಸುದೀಪ್ ಅವರಿಂದ ತರಾಟೆಗೆ ಒಳಗಾಗಿದ್ದರ ಜೊತೆಗೆ ವೀಕ್ಷಕರಿಂದಲೂ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಇದೀಗ ಈ ಬಗ್ಗೆ ಖುದ್ದು ಜಾನ್ವಿ ಕೂಡ ಮಾಡಿರೋದು ತಪ್ಪಾಗಿದೆ ಎಂದು ಕಣ್ಣೀರು ಇಟ್ಟಿದ್ದಾರೆ.
26
ಕನ್ನಡದ ಬಗ್ಗೆ ಸುಳ್ಳು ಹೇಳ್ತಿದ್ದಾರಾ ರಕ್ಷಿತಾ?
ಇದರ ನಡುವೆಯೇ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಬಂದರೂ ಸುಳ್ಳು ಹೇಳ್ತಿರೋದಾಗಿ ಬಿಗ್ಬಾಸ್ ಮನೆಯಲ್ಲಿ ಗುಸುಗುಸು ಶುರುವಾಗಿತ್ತು. ತುಳು ನಾಡಿನ ರಕ್ಷಿತಾ ಶೆಟ್ಟಿ ಅವರು ಅರ್ಧಂಬರ್ಧ ಕನ್ನಡ ಮಾತನಾಡುತ್ತಲೇ ಸಕತ್ ಫೇಮಸ್ ಆದವರು. ಇವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವುದಕ್ಕೂ ಒಂದು ಇದೇ ಕಾರಣ.
36
ಅವಕಾಶ ಸಿಕ್ಕಿದ್ದೂ ಇದಕ್ಕಾಗಿಯೇ
ಅಷ್ಟೇ ಅಲ್ಲದೇ ಇವರಿಗೆ ಇದೇ ಅರ್ಧಂಬರ್ಧ ಕನ್ನಡದ ಖ್ಯಾತಿಯೇ ಬಿಗ್ಬಾಸ್ ಮನೆಯೊಳಕ್ಕೂ ಹೋಗಲು ಅವಕಾಶ ಕಲ್ಪಿಸಿದೆ. ಕನ್ನಡ ಭಾಷೆ ಅಲ್ಲದಿದ್ದರೂ ಕನ್ನಡವನ್ನು ಕಲಿತು ಇಷ್ಟಾದರೂ ಮಾತನಾಡುತ್ತಾರೆ ಎಂದು ಅವರ ಅಭಿಮಾನಿಗಳೂ ಅಂದುಕೊಳ್ಳುವುದು ಇದೆ. ಆದರೆ ನಿಜಕ್ಕೂ ಇವರು ಫೇಕ್ ಮಾಡ್ತಿದ್ದಾರಾ?
ರಕ್ಷಿತಾ ಶೆಟ್ಟಿಯ ಕನ್ನಡದ ಬಗ್ಗೆ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಒಂದು ಹಂತದಲ್ಲಿ ಚರ್ಚೆಯಾಗಿತ್ತು. ಆಕೆ ಫೇಕ್ ಮಾಡುತ್ತಿದ್ದಾಳೆ ಎಂದಿದ್ದರು ಕೆಲವರು. ಇದೀಗ ಬಿಗ್ಬಾಸ್ನಿಂದ ಹೊರಬಂದಿರುವ ಅಶ್ವಿನಿ SN (Bigg Boss Ashwini SN) ಈ ಬಗ್ಗೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
56
ಜಗಳ ಮಾಡುವಾಗ...
ಜಗಳ ಮಾಡುವಾಗ ರಕ್ಷಿತಾ ಕನ್ನಡವನ್ನು ಫ್ಲುಯೆಂಟ್ ಆಗಿಯೇ ಮಾತನಾಡ್ತಾರೆ, ಬೇರೆ ಸಮಯದಲ್ಲಿ ಅರ್ಧಂಬರ್ಧ ಮಾತನಾಡ್ತಾರೆ. ಸೋ ಒಂದು ಹಂತದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ನಿಜ ಎಂದಿದ್ದಾರೆ.
66
ತುಂಬಾ ದಿನ ಫೇಕ್ ಆಗಲ್ಲ
ಆದರೆ ಯಾರದ್ದೇ ಮಾತೃಭಾಷೆ ಕನ್ನಡ ಆಗಿದ್ದರೆ, ಅವರು ತುಂಬಾ ದಿನ ಫೇಕ್ ಮಾಡಲು ಆಗುವುದಿಲ್ಲ. ಒಂದಿಲ್ಲೊಂದು ದಿನ ಅದು ಬಹಿರಂಗವಾಗಲೇಬೇಕು. ಆದ್ದರಿಂದ ರಕ್ಷಿತಾ ಶೆಟ್ಟಿ ಅವರು ಫೇಕ್ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿದ್ದಾರೆ ಅಶ್ವಿನಿ SN