ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು
Amruthadhaare TV Serial Malli s marriage: 'ಅಮೃತಧಾರೆ' ಖ್ಯಾತಿಯ ಕಿರುತೆರೆ ನಟಿ ಅನ್ವಿತಾ ಸಾಗರ್ ತಮ್ಮ ಮದುವೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಆಸೆಯನ್ನು ಅನ್ವಿತಾ ಸಾಗರ್ ಹಂಚಿಕೊಂಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಿರುತೆರೆ ಕಲಾವಿದೆ
ಕಿರುತೆರೆ ಕಲಾವಿದೆ ಅನ್ವಿತಾ ಸಾಗರ್ ಮದುವೆ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅನ್ವಿತಾ ಸಾಗರ್ ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಮಲ್ಲಿಯಾಗಿ ಕಾಣಿಸಿಕೊಂಡಿರುವ ಅನ್ವಿತಾ ಸಾಗರ್, ಈ ಹಿಂದೆ ಗಟ್ಟಿಮೇಳ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ಮೂವರು ಸೋದರರ ಮುದ್ದಿನ ತಂಗಿಯ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಎಂಬ ಧಾರವಾಹಿಯಲ್ಲಿ 'ಜ್ಯೋತಿ' ಎಂಬ ಪಾತ್ರದಲ್ಲಯೂ ಅನ್ವಿತಾ ಕಾಣಿಸಿಕೊಂಡಿದ್ದಾರೆ.
ಅನ್ವಿತಾ ಸಾಗರ್
ಅನ್ವಿತಾ ಸಾಗರ್ ಮೂಲತಃ ಶಿವಮೊಗ್ಗ ಮೂಲದವರಾಗಿದ್ದು, ಕಿರುತೆರೆ ಜೊತೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಮೃತಧಾರೆಯಲ್ಲಿ ಮಲ್ಲಿಯಾಗಿ ಮೊದಲು ನಟಿ ರಾಧಾ ಭಗವತಿ ನಟಿಸುತ್ತಿದ್ದರು. ರಾಧಾ ಅಮೃತಧಾರೆಯಿಂದ ಹೊರ ಬಂದಿದ್ದರಿಂದ ಆ ಸ್ಥಾನಕ್ಕೆ ಅನ್ವಿತಾ ಸಾಗರ್ ಬಂದಿದ್ದು, ಮಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮದುವೆಯಾಗುವ ಹುಡುಗ ಹೇಗಿರಬೇಕು?
ಇತ್ತೀಚೆಗೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಅನ್ವಿತಾ ಸಾಗರ್ ಹೇಳಿಕೊಂಡಿದ್ದಾರೆ. ಹುಡುಗ ಮಂಡ್ಯದವನಾಗಿದ್ದು, ರೈತನಾಗಿರಬೇಕು. ಶುಗರ್ ಕೇನ್‌ನಂತೆ ದೈಹಿಕವಾಗಿ ಶಕ್ತಿವಂತನಾಗಿರಬೇಕೆಂದು ಅನ್ವಿತಾ ಹೇಳಿಕೊಂಡಿದ್ದಾರೆ. ಈ ಕುರಿತ ಬರಹವುಳ್ಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನಮೋ ವೆಂಕಟೇಶ್ ಸಿನಿಮಾ
ಮದುವೆ ಕುರಿತು ಕಿರುತೆರೆ ಕಲಾವಿದೆ ಅನ್ವಿತಾ ಸಾಗರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿಲ್ಲ. ಮದುವೆ ಕುರಿತ ಪೋಸ್ಟ್‌ಗಳು ಮಾತ್ರ ವೈರಲ್ ಆಗುತ್ತಿವೆ. 5ನೇ ಸೆಪ್ಟೆಂಬರ್ ಅನ್ವಿತಾ ಸಾಗರ್ ನಟನೆಯ ನಮೋ ವೆಂಕಟೇಶ್ ಸಿನಿಮಾ ಬಿಡುಗಡೆಯಾಗಿತ್ತು.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸಿಗುತ್ತೋ ಇಲ್ಲೋ ಗೊತ್ತಿರಲಿಲ್ಲ, 5 ಗ್ಲಾಸ್ ಕುಡಿದು ಬಂದೆ ಎಂದ ಸ್ಪರ್ಧಿ
ತುಳು ಸಿನಿಮಾಗಳಲ್ಲಿಯೂ ನಟನೆ
ಬಣ್ಣ ಬಣ್ಣದ ಬದುಕು, ಸ್ನೇಹ ಚಕ್ರ, ಜೀವನ ಯಜ್ಞ, ಮಾಯಾ ಕನ್ನಡಿ, ವಿರಾಟ ಪರ್ವ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಂಡ್, ಪೆಟ್ಕಮ್ಮಿ, ಬಲೆ ಪುದರ್ ದೀಕ್ ಈ ಪ್ರೀತಿಗ್, ತಂಬಿಲ್ ಎಂಬ ತುಳು ಸಿನಿಮಾಗಳಲ್ಲಿಯೂ ಅನ್ವಿತಾ ನಟಿಸಿದ್ದಾರೆ.
ಇದನ್ನೂ ಓದಿ: ಪೀರಿಯಡ್ಸ್ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!