ಮತ್ತೊಂದು ಅಚ್ಚರಿಗೆ ಕಾರಣವಾಗಲಿದೆ ಕರ್ಣ ಸೀರಿಯಲ್; ನಿರ್ದೇಶಕರ ತಲೇಲಿ ಇನ್ನು ಏನೇನಿದೆಯೋ?

Published : Jun 10, 2026, 12:29 PM IST

ಕರ್ಣ ಧಾರಾವಾಹಿಯಲ್ಲಿ, ಸೊಸೆ ನಿಧಿ ತನ್ನ ಅತ್ತೆ ಮಾಲತಿಯ ಪೈಲಟ್ ಆಗುವ ಬಾಲ್ಯದ ಕನಸನ್ನು ಕೇಳಿ ತಿಳಿಯುತ್ತಾಳೆ. ಅತ್ತೆಯ ಹಿಂಜರಿಕೆಯ ನಡುವೆಯೂ, ಆ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ನಿಧಿ ಹೊತ್ತುಕೊಳ್ಳುತ್ತಾಳೆ, ಇದು ಕಥೆಯಲ್ಲಿ ಹೊಸ ರೋಚಕ ತಿರುವಿಗೆ ಕಾರಣವಾಗಿದೆ.

PREV
15
ಕರ್ಣ ಸೀರಿಯಲ್ ಕಥೆ

ಕರ್ಣ ಸೀರಿಯಲ್ ಕಥೆ ಹಲವು ಬದಲಾಣೆ ಜೊತೆ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇದೀಗ ಕರ್ಣ ಸೀರಿಯಲ್ ಮತ್ತೊಂದು ಅಚ್ಚರಿಗೆ ಕಾರಣವಾಗುವ ಸಾಧ್ಯತೆಗಳಿವೆ. ಈ ಹಿಂದೆ ಎಲ್ಲರನ್ನೂ ಚಕಿತಗೊಳಿಸಿದ್ದ ನಿಧಿ, ಮತ್ತೊಮ್ಮೆ ಹೊಸ ಸಾಹಸಕ್ಕೆ ಮುಂದಾಗಿದ್ದಾಳೆ. ಈ ವಿಷಯ ತಿಳಿದ ವೀಕ್ಷಕರು, ನಿರ್ದೇಶಕರ ತಲೆಯಲ್ಲಿ ಇನ್ನು ಏನೇನು ಓಡ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

25
ಸೊಸೆ ನಿಧಿ ಮತ್ತು ಅತ್ತೆ ಮಾಲತಿ ನಡುವಿನ ಸಂಭಾಷಣೆ

ಇಂದು ಬಿಡುಗಡೆಯಾದ ಕರ್ಣ ಸೀರಿಯಲ್ ಪ್ರೋಮೋದಲ್ಲಿ, ಸೊಸೆ ನಿಧಿ ಮತ್ತು ಅತ್ತೆ ಮಾಲತಿ ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ಮನೆಯಲ್ಲಿರುವ ಸಮಸ್ಯೆಗಳ ಜೊತೆ ಬದುಕೋದನ್ನು ಕಲಿತಿದ್ದೇನೆ ಎಂದು ಸೊಸೆ ನಿಧಿಗೆ ಅತ್ತೆ ಮಾಲತಿ ಹೇಳುತ್ತಾಳೆ. ಅಮ್ಮಾ ಇದು ನಿಮ್ಮ ಜೀವನ. ಅಂದುಕೊಂಡಂತೆ ಬದುಕಿಲ್ಲ ಅಂದ್ರೆ ಜೀವನ ನರಕ ಆಗುತ್ತೆ ಎಂದು ಅತ್ತೆಗೆ ನಿಧಿ ಹೇಳುತ್ತಾಳೆ.

35
ಪೈಲಟ್ ಕನಸು ಹೇಳಿಕೊಂಡ ಕರ್ಣನ ತಾಯಿ

ಚಿಕ್ಕ ವಯಸ್ಸಿನಲ್ಲಿ ನನಗೆ ತುಂಬಾ ಕನಸುಗಳಿದ್ದವು. ನನಗೆ ಪೈಲಟ್ ಆಗಬೇಕೇಂಬ ಕನಸು ಇತ್ತು ಎಂದು ಸೊಸೆ ಮುಂದೆ ಮಾಲತಿ ಹೇಳಿಕೊಳ್ಳುತ್ತಾಳೆ. ಈ ವಿಷಯ ಕೇಳಿದ ನಿಧಿ, ಯಾಕೆ ಈಗ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಾರದು ಎಂದು ನಿಧಿ ಹೇಳುತ್ತಾಳೆ. ಇದಕ್ಕೆ ಮಾಲತಿ, ನನಗೆ ಸರಿಯಾಗಿ ಟೂ ವ್ಹೀಲರ್ ಬ್ಯಾಲೆನ್ಸ್ ಮಾಡೋದಕ್ಕೆ ಬರಲ್ಲ ಎಂದು ಹೇಳಿ ನಗುತ್ತಾಳೆ.

45
ಪೈಲಟ್ ಆಗೋದು ಅಂದ್ರೆ ಸುಮ್ನೇನಾ?

ಅತ್ತೆ ಮಾಲತಿ ಪ್ರ್ಯಾಕ್ಟಿಕಲ್ ಆಗಿ ಮಾತನಾಡಿದ್ರೂ, ನಿಧಿ ಮಾತ್ರ ಡ್ರೈವರ್ ಸೀಟ್‌ನಲ್ಲಿ ಕೂರಿಸೋದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದ್ದಾಳೆ. ಈ ಪ್ರೋಮೋ ನೋಡಿದ ವೀಕ್ಷಕರು, ಪೈಲಟ್ ಆಗೋದು ಅಂದ್ರೆ ಸುಮ್ನೇನಾ? ಈ ಹಿಂದೆ ಡಾಕ್ಟರ್ ನಿಧಿ, ಲಾಯರ್ ಆಗಿ ಅಚ್ಚರಿ ಮೂಡಿಸಿದ್ದರು. ಇದೀಗ ಅತ್ತೆಯನ್ನು ಪೈಲಟ್ ಮಾಡುವ ಮೂಲಕ ಮತ್ತೊಂದು ಅಚ್ಚರಿ ಸೃಷ್ಟಿಸಲು ಮುಂದಾಗಿರುವ ನಿಧಿಗೆ ಆಲ್‌ ದಿ ಬೆಸ್ಟ್ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪತಿ ಬಾಳು ಬೆಳಗುಂದಿ ನನ್ನ ಸಮಸ್ಯೆಗೆ ಸ್ಪಂದಿಸ್ತಿಲ್ಲ: Jodi No 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು

55
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ

ನೀವು ಪೈಲೆಟ್ ಆಗ್ತಿರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಸೀರಿಯಲ್ ಮುಗಿಯೋವರೆಗೂ ನಿಮ್ಮ ನಿರ್ದೇಶಕರು ನಮ್ಮ ತಲೆ ಮೇಲೆ ಫ್ಲೈಟ್ ಹಾರಿಸುತ್ತಲೇ ಇರ್ತಾರೆ ಎಂಬ ತಮಾಷೆ ಕಮೆಂಟ್ ಬಂದಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀರಿಯಲ್, ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕರ್ಣ ಸಹ ಒಂದಾಗಿದೆ.

ಇದನ್ನೂ ಓದಿ: ಡಿವೋರ್ಸ್ ವಿಚಾರ, ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಶುಭಾ ಪೂಂಜಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories