Jodi No 1 Balu Belagundi: ಜೋಡಿ ನಂ 1 ಸೀಸನ್ 2 ಶೋ ಪ್ರಸಾರ ಆಗ್ತಿದೆ. ಈ ಶೋನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬಾಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಬಗ್ಗೆ ದೂರು ನೀಡಿದ್ದಾರೆ.
ಸದ್ಯ ಜೋಡಿ ನಂ 1 ಸೀಸನ್ 2 ಶೋ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಈ ವೇಳೆ ಬಾಳೆ ಬಾಳೆಗುಂದಿಯಿಂದ ಯಾವ ವಿಷಯದಲ್ಲಿ ಬೇಸರ ಆಗ್ತಿದೆ ಎಂದು ಪತ್ನಿ ಮಾಲಾಶ್ರೀ ಹೇಳಿದ್ದಾರೆ. ಪ್ರತಿ ಕಪಲ್ ರಿಯಾಲಿಟಿ ಶೋನಲ್ಲಿಯೂ ಈ ರೀತಿ ವೈಯಕ್ತಿಕ ವಿಷಯಗಳು ಹೊರಬೀಳುತ್ತವೆ.
24
ಬದುಕು ಜಟಕಾಬಂಡಿ ಆಯ್ತು
“ಹೆಜ್ಜೆ ಹೆಜ್ಜೆಗೂ ಮಾಲಾಶ್ರೀ ಕೋಪ ಮಾಡಿಕೊಳ್ಳುತ್ತಾಳೆ. ಬೆಳಗ್ಗೆಯಿಂದ ನನಗೆ ಬದುಕು ಜಟಕಾಬಂಡಿ ಕಾರ್ಯಕ್ರಮ ನೆನಪಾಗುತ್ತದೆ. ಹೆಣ್ಣು ಮಗಳಿಗೆ ನನ್ನಿಂದ ನೆಮ್ಮದಿಯಿಲ್ಲ” ಎಂದು ಬಾಳು ಹೇಳಿದ್ದಾರೆ.
34
ತುಂಬ ಕೋಪ ಮಾಡಿಕೊಳ್ತಾಳೆ
“ನನಗೆ ಸರಿಯಾಗಿ ಸ್ಪಂದಿಸಿದರೆ ನಾನು ಕೋಪ ಮಾಡಿಕೊಳ್ಳೋದಿಲ್ಲ. ನಮ್ಮ ಮನೆಯವರನ್ನು ಬಿಟ್ಟುಕೊಡಬೇಡ, ನನ್ನೂ ಬಿಟ್ಟುಕೊಡಬೇಡ. ಹೆಣ್ಣು ಮಕ್ಕಳಿಗೆ ತಿಂಗಳಿನಲ್ಲಿ ಮೂರು ದಿನ ರೆಸ್ಟ್ ಬೇಕಾಗುತ್ತದೆ, ಆ ಟೈಮ್‌ನಲ್ಲಿ ನೀನು ಸಹಾಯ ಮಾಡಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ಜೀವನವೇ ಬೇಡ ಎನಿಸುವಾಗ ಮಾತ್ರ..” ಎಂದು ನಟಿ ಮಾಲಾಶ್ರೀ ಹೇಳಿದ್ದಾರೆ.
“ಅವಳ ಮನಸ್ಸಿಗೆ ಬೇಸರ ಆಗುವಂಥ ಪದಗಳನ್ನು ಯಾಕೆ ಬಳಸುತ್ತೀಯಾ ಎಂದು ನಟಿ ಮಾಳವಿಕಾ ಅವರು ಬಾಳು ಬಾಳೆಗುಂದಿ ಬಳಿ ಮಾತನಾಡಿದ್ದಾರೆ” ಎಂದು ನಟಿ ಮಾಳವಿಕಾ ಅವರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ಎಪಿಸೋಡ್‌ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.