ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚು ತಮ್ಮ ಮಗಳು ಎಂದು ಬಂದ ನಕಲಿ ಪೋಷಕರಿಗೆ ಡಿಎನ್ಎ ಪರೀಕ್ಷೆಯ ಭಯ ಶುರುವಾಗಿದೆ. ಗೌತಮ್ ಮತ್ತು ಭೂಮಿಕಾ ಸತ್ಯ ತಿಳಿಯಲು ಪರೀಕ್ಷೆಗೆ ಒತ್ತಾಯಿಸಿದಾಗ, ಜೈದೇವ ಹಣದ ಬಲದಿಂದ ವರದಿಯನ್ನೇ ತಿರುಚುವ ಸಾಧ್ಯತೆಯ ಬಗ್ಗೆ ಕಥೆ ಕುತೂಹಲ ಮೂಡಿಸಿದೆ.
ಅಮೃತಧಾರೆ ಸೀರಿಯಲ್ನಲ್ಲಿ ಸದ್ಯ ಮಿಂಚು ತಮ್ಮ ಮಗಳು ಎಂದುಕೊಂಡು ಬಂದೋರಿಗೆ ಗ್ರಹಚಾರ ಒಕ್ಕರಿಸಿದೆ. ಮಿಂಚು ಫೋಟೋ ಹಿಡಿದು ಇವಳೇ ನಮ್ಮ ಮಗಳು ಎಂದು ಗೌತಮ್ನನ್ನೂ ಜೈಲಿಗೆ ಅಟ್ಟಲಾಗಿತ್ತು.
26
ಜೈದೇವನ ಕೈವಾಡ
ಕೊನೆಗೂ ಇದರ ಹಿಂದೆ ಇರೋದು ಜೈದೇವನ ಕೈವಾಡ ಎನ್ನೋದು ತಿಳಿದಿದೆ. ಗೌತಮ್ ಮತ್ತು ಭೂಮಿಕಾಗೆ ಮಿಂಚು ತಮ್ಮದೇ ಮಗಳು ಎಂದು ತಿಳಿಯದಿದ್ದರೂ, ಮಗಳು ಎಂದು ಹೇಳಿಕೊಂಡು ಬಂದೋರು ಮೋಸಗಾರರು ಎನ್ನೋದು ಚೆನ್ನಾಗಿ ಗೊತ್ತಾಗಿದೆ.
36
ಡಿಎನ್ಎ ಟೆಸ್ಟ್
ಇದೇ ಕಾರಣಕ್ಕೆ ಅವರ ಡಿಎನ್ಎ ಟೆಸ್ಟ್ ಮಾಡುವಂತೆ ಕೋರಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಈ ನಕಲಿ ಅಪ್ಪ-ಅಮ್ಮಂದಿರ ಉಸಿರೇ ನಿಂತೋಗಿದೆ.
ನೇರವಾಗಿ ಜೈದೇವನ ಬಳಿ ಬಂದ ನಕಲಿ ಅಪ್ಪ-ಅಮ್ಮ ನಮ್ಮನ್ನು ಬಿಟ್ಟುಬಿಡಿ ಸರ್, ಡಿಎನ್ಎ ಟೆಸ್ಟ್ ಮಾಡಿಸಲು ಹೇಳ್ತಾ ಇದ್ದಾರೆ. ನಿಜ ಗೊತ್ತಾದ್ರೆ ನಮ್ಮನ್ನು ಜೈಲಿಗೆ ಅಟ್ಟುತ್ತಾರೆ.ನಾವು ಹೋಗ್ತೇವೆ ಎಂದಿದ್ದಾರೆ.
56
ಜೈದೇವ್ ಬಿಡ್ತಾನಾ?
ಆದರೆ, ಗೌತಮ್ ಮತ್ತು ಸಂಪೂರ್ಣ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿರೋ ಜೈದೇವ ಸುಮ್ಮನೇ ಬಿಡ್ತಾನಾ? ಡಿಎನ್ಎ ಟೆಸ್ಟ್ನಲ್ಲಿಯೂ ಅವರು ಪಾಸ್ ಮಾಡುವ ಹಾಗೆ ಮಾಡಿದರೂ ಅಚ್ಚರಿ ಏನಿಲ್ಲ. ಹೇಗಿದ್ದರೂ ಹಣದ ಬಲ ಇದ್ಯಲ್ಲಾ? ಹಣ ಎಂದರೆ ಹೆಣನೇ ಬಾಯಿ ಬಿಡತ್ತಂತೆ. ಇನ್ನು ಡಾಕ್ಟರ್ ಸುಮ್ನೇ ಇರ್ತಾರೆ. ದುಡ್ಡು ಕೊಟ್ಟು ಅದನ್ನೂ ಮಾಡಬಹುದು ಎನ್ನಲಾಗಿದೆ.
66
ಪರೀಕ್ಷೆಯಲ್ಲಿ ಪಾಸ್?
ಏಕೆಂದರೆ, ಗೌತಮ್ಗೆ ಹೆತ್ತ ಮಗಳಿಂದಲೇ ತೊಂದರೆ ಎನ್ನೋದಾಗಿ ಜ್ಯೋತಿಷಿ ಹೇಳಿದ್ದಾರಲ್ಲ. ಈಗ ಸ್ವಲ್ಪ ತೊಂದರೆ ಆಗಿತ್ತಷ್ಟೇ. ಆದರೆ ಇನ್ನು ಮುಂದೆ ಅದೇ ದೊಡ್ಡ ಮಟ್ಟಕ್ಕೆ ಹೋದರೂ ಹೋಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.