ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ

Published : Jan 15, 2026, 09:03 AM IST

ಗರ್ಭಿಣಿ ನಿತ್ಯಾಳ ಬಗ್ಗೆಕರ್ಣ ತೋರಿದ ಅತಿಯಾದ ಕಾಳಜಿಮತ್ತು ರಮೇಶ್‌ನ ಮಾತುಗಳಿಂದ ತೇಜಸ್ ಅನುಮಾನಗೊಂಡಿದ್ದಾನೆ. ಇದರಿಂದ ನಿತ್ಯಾಳೊಂದಿಗಿನ ಮದುವೆಯನ್ನೇ ನಿಲ್ಲಿಸಿ, ಮಗುವಿನ ತಂದೆ ಯಾರೆಂದು ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾನೆ. 

PREV
15
ಕರ್ಣ ಪಾತ್ರ

ಕರ್ಣ ಪಾತ್ರವನ್ನು ಆರಂಭದಿಂದಲೂ ತುಂಬಾ ಪರೋಪಕಾರಿ ಅಂತ ತೋರಿಸಲಾಗಿದೆ. ತನಗೆ ಎಷ್ಟೇ ನೋವಾದ್ರೂ ಬೇರೆಯವರಲ್ಲಿ ಕಾಣುವ ನಗುವಿನಲ್ಲಿ ಕರ್ಣ ತನ್ನ ಖುಷಿಯನ್ನು ಕಂಡುಕೊಳ್ಳುತ್ತಿದ್ದನು. ನಿಜಜೀವನದಲ್ಲಿ ಈ ರೀತಿಯ ವ್ಯಕ್ತಿತ್ವ ಇದ್ರೆ ಏನಾಗುತ್ತೆ ಎಂಬುದನ್ನು ನಿನ್ನೆಯ ಸಂಚಿಕೆಯಲ್ಲಿ ತೋರಿಸಲಾಗಿದೆ.

25
ನಿತ್ಯಾ ಗರ್ಭಿಣಿ

ನಿತ್ಯಾ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಆಕೆಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಕರ್ಣ. ಇದೀಗ ಇದೇ ಕಾಳಜಿ ಕರ್ಣನಿಗೆ ಉರುಳಾಗಿ ಪರಿಣಮಿಸಿದೆ. ತೇಜಸ್ ಸಿಗುತ್ತಿದ್ದಂತೆ ಆತನೊಂದಿಗೆ ನಿಧಿ ಮದುವೆ ಮಾಡಿಸಬೇಕು. ಮನೆಯವರ ಮುಂದೆ ನಿಧಿ ಜೊತೆಗಿನ ಪ್ರೇಮವನ್ನು ಹಂಚಿಕೊಳ್ಳಬೇಕು ಅನ್ನೋದು ಕರ್ಣನ ಪ್ಲಾನ್ ಆಗಿತ್ತು. ಇದೀಗ ರಮೇಶ್ ಊದಿದ ಒಂದೇ ಗಾಳಿಮಾತಿಗೆ ಮದುವೆಯೇ ನಿಂತಿದೆ.

35
ಎಲ್ಲದಕ್ಕೂ ಕರ್ಣ

ತೇಜಸ್-ನಿತ್ಯಾ ಮದುವೆ ಮಾಡಿಸಲು ಸಕಲೇಶಪುರಕ್ಕೆ ನಿಧಿ ಜೊತೆ ಕರ್ಣ ಬಂದಿದ್ದನು. ತೇಜಸ್‌ಗಿಂತಲೂ ನಿತ್ಯಾಳನ್ನು ಕರ್ಣನೇ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದನು. ಪ್ರಯಾಣದ ವೇಳೆ ನಿತ್ಯಾಗಾಗಿ ಊಟ ತೆಗೆದುಕೊಂಡು ಬಂದಿದ್ದನು. ನಿತ್ಯಾಗಾಗಿ ಐಸ್‌ಕ್ರೀಂ ತಂದಿರೋದು, ಮೆಹೆಂದಿಯನ್ನು ಸಹ ಕರ್ಣನೇ ಹಾಕಿದ್ದನು.

45
ನಿತ್ಯಾ ತೀರ್ಮಾನ

ತನ್ನ ನಡವಳಿಕೆ ತೇಜಸ್‌ಗೆ ಇಷ್ಟವಾಗಿರೋದನ್ನು ಕರ್ಣ ಸಹ ಗಮನಿಸಿದ್ದನು. ಹಾಗಾಗಿ ಇಬ್ಬರಿಂದಲೂ ಕರ್ಣ ಕೊಂಚ ಅಂತರ ಕಾಯ್ದುಕೊಳ್ಳುತ್ತಿದ್ದನು. ಆದ್ರೆ ನಿಧಿ ಮಾತ್ರ ಎಲ್ಲದಕ್ಕೂ ಕರ್ಣನನ್ನು ಕರೆದುಕೊಂಡು ಬರುತ್ತಿದ್ದಳು. ಇಷ್ಟು ಮಾತ್ರವಲ್ಲ ನಿತ್ಯಾ ಸಹ ತೇಜಸ್ ಮುಂದೆ ಪದೇ ಪದೇ ಕರ್ಣನ ಗುಣಗಾನ ಮಾಡುತ್ತಿದ್ದನು. ಹುಟ್ಟುವ ಮಗು ಗಂಡು ಆದ್ರೆ ಕರ್ಣನ ಹೆಸರಿಡಲು ನಿತ್ಯಾ ತೀರ್ಮಾನ ಮಾಡಿಕೊಂಡಿದ್ದಳು.

ಇದನ್ನೂ ಓದಿ: BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ

55
ಕರ್ಣನಿಗೆ ಮತ್ತೆ ಸಂಕಷ್ಟ

ಈ ಎಲ್ಲಾ ಬೆಳವಣಿಗೆ ಮತ್ತು ರಮೇಶ್‌ನ ಬಿತ್ತಿದ ವಿಷ ಮಾತು ತೇಜಸ್‌ನಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಹಾಗಾಗಿ ನಿತ್ಯಾಳ ಹೊಟ್ಟೆಯಲ್ಲಿರುವ ಮಗುವಿನ ತಂದೆ ಯಾರು ಎಂದು ತಿಳಿದುಕೊಳ್ಳಲು ತೇಜಸ್ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾನೆ. ಇದರಿಂದ ನಿತ್ಯಾ -ತೇಜಸ್ ಮದುವೆ ನಿಂತಿದ್ದು, ಇತ್ತ ತನ್ನದೇ ತಪ್ಪುಗಳಿಂದ ಕರ್ಣ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ: ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ಕೇಳಿ ದಿಗಿಲುಬಿದ್ದ ಕರ್ಣ-ನಿಧಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories