ಅಮೃತಧಾರೆ ಸೀರಿಯಲ್‌ನ ಭೂಮಿಕಾ-ಗೌತಮ್ ಯಾವಾಗ ಒಂದಾಗುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಹರಿಹರದಲ್ಲಿ ನಡೆದ ಸಂಕ್ರಾಂತಿ ಸಂಭ್ರಮದಲ್ಲಿ ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಅವರ ನಿಜವಾದ ಪತ್ನಿ ಮತ್ತು ಮಗಳು ವೇದಿಕೆಗೆ ಬಂದಿದ್ದಾರೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಇದೀಗ ಭೂಮಿಕಾ ಮತ್ತು ಗೌತಮ್ ಒಂದಾಗಲು ಯಾವುದೇ ಅಡ್ಡಿ ಇಲ್ಲ. ಎಲ್ಲರಿಗೂ ಎಲ್ಲಾ ಸತ್ಯಗಳೂ ತಿಳಿದಾಗಿವೆ. ಮಕ್ಕಳಿಗೂ ಸತ್ಯ ತಿಳಿದಿದೆ. ಹೀಗಿದ್ದರೂ ಸದ್ಯ ಇಬ್ಬರೂ ದೂರದೂರದಲ್ಲಿಯೇ ವಾಸವಾಗಿದ್ದಾರೆ.
27
ಕಾರಿನ ಬೇಟೆ
ಇಬ್ಬರೂ ಸೇರಿ ಮಗಳನ್ನು ಹುಡುಕುವ ಪ್ರಯತ್ನ ಒಂದೆಡೆಯಾದರೆ, ಕಾರಿನ ಜೊತೆ ಭಾವನಾತ್ಮಕ ನಂಟನ್ನು ಹೊಂದಿರೋ ಗೌತಮ್ ಅದನ್ನು ಕಳೆದುಕೊಂಡಿದ್ದಾನೆ. ಅದನ್ನು ಹುಡುಕಲು ಈಗ ಮಕ್ಕಳ ಸಹಿತ ಭೂಮಿಕಾ ಹೋಗಿದ್ದಾಳೆ. ಶಕುನಿ ಮಾಮಾ ಸಾಥ್ ಕೊಟ್ಟಿದ್ದಾನೆ.
37
ರಿಯಲ್ ಸ್ಟೋರಿ
ಇದು ಸೀರಿಯಲ್ ಸ್ಟೋರಿಯಾದ್ರೆ, ರಿಯಲ್ ಆಗಿ ಅಮೃತಧಾರೆ ಟೀಮ್ ಹರಿಹರದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು. ಅದರ ಪ್ರೊಮೋಗಳು ಇದೀಗ ಬಿಡುಗಡೆಯಾಗುತ್ತಿವೆ.
ಕಾರ್ಯಕ್ರಮಕ್ಕೆ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಎಂಟ್ರಿ ಕೊಟ್ಟಾಗ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಸುರಿಸಿದರು. ನೀವು-ಗೌತಮ್ ಒಂದಾಗೋದು ಯಾವಾಗ? ಶಕುಂತಲಾ ಅತ್ತೆಯ ಕಾಟ ಇನ್ನೆಷ್ಟು ದಿನ ಸಹಿಸಿಕೊಳ್ತೀರಿ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಏನು ಉತ್ತರ ಕೊಟ್ಟಿದ್ದಾರೆ ಎನ್ನೋದನ್ನು ಸದ್ಯ ಸಸ್ಪೆನ್ಸ್ ಇಡಲಾಗಿದೆ.
57
ಗೌತಮ್ ಎಂಟ್ರಿ
ಅದೇ ವೇಳೆ, ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಎಂಟ್ರಿಯಾದಾಗಲೂ ಅಭಿಮಾನಿಗಳು ಸಿಹಿ ತಿನ್ನಿಸಿದ್ದಾರೆ. ಅವರಿಗೂ ಭೂಮಿಕಾ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಅವರ ರಿಯಲ್ ಪತ್ನಿ ಚೈತ್ರಾ ಹಾಗೂ ಮಗಳು ಧ್ವನಿ ರಾಜೇಶ್ ಎಂಟ್ರಿ ಕೊಟ್ಟಿದ್ದಾರೆ.
67
ಆನ್ಸ್ಕ್ರೀನ್ ಲವ್
ಆಗ ಅವರ ಮಗಳಿಗೆ ನಿಮ್ಮ ಅಪ್ಪನ ಆನ್ಸ್ಕ್ರೀನ್ ಲವ್ ಹೇಗೆ ಅನ್ನಿಸ್ತದೆ ಎಂದು ರಾಜೇಶ್ ಅವರ ಪತ್ನಿಯ ಮುಂದೆಯೇ ಕೇಳಲಾಗಿದೆ. ಅದಕ್ಕೆ ಮಗಳು ಸೂಪರ್ ಎನ್ನಿಸುತ್ತದೆ ಎಂದು ಅಮ್ಮನ ಮುಖ ನೋಡಿದ್ದಾರೆ. ಅವರು ಜೋರಾಗಿ ನಕ್ಕಿದ್ದಾರೆ.
77
ಮಗಳ ಬಗ್ಗೆ
ಅಂದಹಾಗೆ ಮಗಳು ಧ್ವನಿ, ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಫಹಾದ್ ಫಾಸಿಲ್ ನಟನೆಯ 'ಪಚುವುಂ ಅದ್ಭುತ ವಿಳಕ್ಕುಂ' ಸಿನಿಮಾದಲ್ಲಿ ಧ್ವನಿ ರಾಜೇಶ್ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಧ್ವನಿ ಮಿಂಚಿದ್ದಾರೆ. ನಿಧಿ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಅಭಿಮಾನಿಗಲ ಹೃದಯ ಗೆದ್ದಿದ್ದಾರೆ. ಈಗಾಗಲೇ ಈ ಸಿನಿಮಾ ರಿಲೀಸ್ ಆಗಿದ್ದು ಮಲಯಾಳಂ ಪ್ರೇಕ್ಷಕರು ಮಾತ್ರವಲ್ಲದೇ ಬೇರ ಬೇರೆ ಭಾಷೆಯ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲೂ ನಿಧಿ ಪಾತ್ರಕ್ಕೆ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ. ಮಲಯಾಳಂ ಗೊತ್ತಿಲ್ಲದಿದ್ದರೂ ನಿಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಧ್ವನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.