ಕರ್ಣನ ಮೇಲಿನ ದ್ವೇಷಕ್ಕೆ ಕಾರಣ ಏನು? ರಮೇಶ್ ಮನದಲ್ಲಿಡಗಿದ್ದ ರಹಸ್ಯ ರಿವೀಲ್, ಇನ್ಮುಂದೆ ನಿತ್ಯಾ ಸೇಫ್!

Published : Jan 20, 2026, 08:31 AM IST

ಕರ್ಣನು ತನ್ನ ಸ್ವಂತ ಮಗನಲ್ಲ ಎಂಬ ಕಾರಣಕ್ಕೆ ರಮೇಶ್ ದ್ವೇಷಿಸುತ್ತಾನೆ ಎಂಬ ಸತ್ಯ ಬಯಲಾಗಿದೆ. ಇದೇ ಕಾರಣಕ್ಕೆ, ಬೇರೆಯವರ ಮಗುವನ್ನು ಸಾಕುವ ನೋವು ಕರ್ಣನಿಗೆ ತಿಳಿಯಲೆಂದು ರಮೇಶ್ ನಿತ್ಯಾಳ ಮಗುವನ್ನು ರಕ್ಷಿಸುತ್ತಿದ್ದಾನೆ. ಜೊತೆಗೆ, ಸಂಜಯ್ ಮತ್ತು ತಾರಾ ಅವರ ದ್ವೇಷದ ಹಿಂದಿನ ಕಾರಣಗಳೂ ಸಹ ಬಹಿರಂಗಗೊಂಡಿವೆ.

PREV
15
ಕರ್ಣ ಸೀರಿಯಲ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳೊಂದಿಗೆ ಪ್ರಸಾರವಾಗುತ್ತಿದೆ. ಕರ್ಣ ಅಂದ್ರೆ ಮನೆಯಲ್ಲಿ ಎಲ್ಲರಿಗೂ ಇಷ್ಟ. ತಂದೆ ರಮೇಶ್, ಸೋದರ ಸಂಜಯ್ ಮತ್ತು ಅತ್ತೆ ತಾರಾ ಮಾತ್ರ ಕರ್ಣನನ್ನು ದ್ವೇಷಿಸಿಸುತ್ತಾರೆ. ಈ ಮೂವರು ಕರ್ಣನನ್ನು ದ್ವೇಷಿಸಲು ಬೇರೆ ಬೇರೆ ಕಾರಣಗಳಿವೆ.

25
ರಮೇಶ್‌ಗೆ ಯಾಕಿಷ್ಟು ದ್ವೇಷ

ಇದೀಗ ಕರ್ಣನ ಮೇಲಿನ ರಮೇಶ್‌ಗೆ ಯಾಕಿಷ್ಟು ದ್ವೇಷ ಎಂಬ ಸತ್ಯ ರಿವೀಲ್ ಆಗಿದೆ. ಈ ಒಂದು ಕಾರಣದಿಂದಲೇ ನಿತ್ಯಾ ಹೊಟ್ಟೆಯಲ್ಲಿರುವ ಮಗುವಿಗೆ ರಮೇಶ್ ರಕ್ಷಕನಾಗಿ ನಿಂತಿದ್ದಾನೆ. ಈ ಹಿಂದೆ ನಿತ್ಯಾಳಿಗೆ ಸಂಜಯ್ ಗರ್ಭಪಾತವಾಗುವಂತೆ ಔಷಧಿ ನೀಡಿದ್ದಾಗ ರಮೇಶ್ ಕೆಂಡಾಮಂಡಲನಾಗಿದ್ದನು. ಆ ಸಮಯದಲ್ಲಿಯೂ ರಮೇಶ್ ಒಗಟಾಗಿ ಮಾತನಾಡಿದ್ದನು.

35
ಕರ್ಣನಿಗೆ ರಮೇಶ್ ಸ್ವಂತ ಅಪ್ಪ ಅಲ್ಲ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಮೇಶ್‌ನ ದ್ವೇಷಕ್ಕಿರುವ ಕಾರಣವನ್ನು ತೋರಿಸಲಾಗಿದೆ. ಕರ್ಣನಿಗೆ ರಮೇಶ್ ಸ್ವಂತ ಅಪ್ಪ ಅಲ್ಲ. ರಮೇಶ್‌ನ ತಂದೆ ತೆಗೆದುಕೊಂಡು ಬಂದ ಅನಾಥ ಮಗುವನ್ನು ರಮೇಶ್‌ನಿಗೆ ಸಾಕುವ ಅನಿವಾರ್ಯ ಎದುರಾಗಿತ್ತು. ಯಾರದ್ದೋ ಮಗುವನ್ನು ಸಾಕಲು ರಮೇಶ್ ಆರಂಭದಿಂದಲೂ ಒಪ್ಪಿರಲಿಲ್ಲ. ಹಾಗಾಗಿಯೇ ತನ್ನನ್ನು ಕರ್ಣ ಅಪ್ಪಾ ಅಂತ ಕರೆದಾಗಲೆಲ್ಲಾ ರಮೇಶ್ ಸಿಡಿಮಿಡಿಗೊಳ್ಳುತ್ತಿದ್ದನು.

45
ಸತ್ಯ ಹೇಳಿದ ರಮೇಶ್

ಇದೀಗ ಕರ್ಣನಿಗೆ ಇನ್ಯಾರದ್ದೋ ಮಗುವಿಗೆ ಕರ್ಣ ಅಪ್ಪ ಆಗುತ್ತಿದ್ದಾನೆ. ಬೇರೆಯವರ ಮಗು ತನ್ನನ್ನು ಅಪ್ಪಾ ಎಂದು ಕರೆದಾಗ ಆಗುವ ಕರ್ಣನಿಗೆ ಗೊತ್ತಾಗಬೇಕು ಎಂದು ರಮೇಶ್ ಹೇಳಿದ್ದಾನೆ. ಈ ಕಾರಣದಿಂದಲೇ ನಿತ್ಯಾಳನ್ನು ರಮೇಶ್ ಕಾಪಾಡುವ ಕೆಲಸ ಮಾಡುತ್ತಿದ್ದಾನೆ. ಹೀಗಾಗಿಯೇ ತೇಜಸ್-ನಿತ್ಯಾ ಮದುವೆ ನಿಲ್ಲುವಂತೆ ಮಾಡಿದ್ದನು.

ಇದನ್ನೂ ಓದಿ: BBK 12: ಸೈಲೆಂಟ್ ಅಲ್ಲ, ವೈಲೆಂಟ್ ಆಗಿ ಬರ್ತೀನಿ: ಟ್ರೋಫಿ ಇಲ್ಲದೇ ಹೋದ ಅಶ್ವಿನಿ ಗೌಡ ಲೈವ್ ಟಾಕ್

55
ಕರ್ಣನ ಮೇಲೆ ಯಾರಿಗೆ ಯಾಕೆ ದ್ವೇಷ?

ರಮೇಶ್‌ನ ತಂದೆ ತಮ್ಮ ಎಲ್ಲಾ ಆಸ್ತಿಯನ್ನು ಕರ್ಣನ ಹೆಸರಿಗೆ ಮಾಡಿರೋದು ದ್ವೇಷಕ್ಕೆ ಕಾರಣವಾಗಿದೆ. ಇನ್ನು ಸಂಜಯ್‌ಗೆ ತನಗೆ ಸಿಗಬೇಕಿದ್ದ ಎಲ್ಲಾ ಪ್ರೀತಿ ಕರ್ಣನಿಗೆ ಸಿಗುತ್ತೆ ಎಂದು ದ್ವೇಷ ಮಾಡ್ತಾನೆ. ಇನ್ನು ಅತ್ತೆ ತಾರಾಳಿಗೆ ಕರ್ಣನ ಜನ್ಮ ರಹಸ್ಯ ತಿಳಿದಿದೆ. ಹಾಗಾಗಿ ಇಡೀ ಆಸ್ಪತ್ರೆ ತನ್ನ ಹಿಡಿತದಲ್ಲಿರಬೇಕೆಂದು ಬಯಸುತ್ತಾಳೆ. ಹಾಗೆಯೇ ನಿಧಿ-ನಿತ್ಯಾಳ ಪೋಷಕರ ಸಾವಿಗೂ ತಾರಾಳಿಗೂ ಲಿಂಕ್ ಇದೆ ಎಂಬುದನ್ನು ತೋರಿಸಲಾಗಿದೆ.

ಇದನ್ನೂ ಓದಿ: ತನ್ನದೇ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕಿದ ಕರ್ಣ; ತುಪ್ಪ ಸುರಿದು ನಿತ್ಯಾ ಜೀವನ ಹಾಳಾಗಲು ಕಾರಣಳಾದ ನಿಧಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories