ಗಿಲ್ಲಿ ಗೆಲುವಿನ ಸಂಭ್ರಮ ಜೊತೆ ಮಹತ್ವದ ಸಂದೇಶ ರವಾನಿಸಿದ ಕಾವ್ಯ, ಫ್ಯಾನ್ಸ್ ಸಂಭ್ರಮ ಡಬಲ್

Published : Jan 19, 2026, 11:14 PM IST

ಗಿಲ್ಲಿ ಗೆಲುವಿನ ಸಂಭ್ರಮ ಜೊತೆ ಮಹತ್ವದ ಸಂದೇಶ ರವಾನಿಸಿದ ಕಾವ್ಯ, ಗಿಲ್ಲಿ ನಟನ ಗೆಲುವನ್ನು ಕಾವ್ಯ ಸಂಭ್ರಮಿಸಿದ್ದಾರೆ. ಇದೇ ವೇಳೆ ಮತ್ತೊಂದು ಹಾರೈಕೆಯನ್ನು ಮಾಡಿದ್ದಾರೆ. ಇದು ಗಿಲ್ಲಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ

PREV
15
ಗಿಲ್ಲಿ ಗೆಲುವು ಸಂಭ್ರಮಿಸಿದ ಕಾವ್ಯ

ಬಿಗ್ ಬಾಸ್ 12ರ ಸೀಸನ್ ಅದ್ಧೂರಿಯೊಂದಿಗೆ ಅಂತ್ಯಗೊಂಡಿದೆ. ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗಿಲ್ಲಿ ನಟನ ಗೆಲುವನ್ನು ಇಡೀ ಕರ್ನಾಟಕ ಸಂಭ್ರಮಿಸಿದೆ. ಗಿಲ್ಲಿಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ಈ ಮಟ್ಟಿನ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಮಾತ್ರವಲ್ಲ, ಪ್ರತಿಸ್ಪರ್ಧಿಯಾಗಿ ಭಾರಿ ಗಮನಸೆಳೆದಿರುವ ಕಾವ್ಯ ಕೂಡ ಗಿಲ್ಲಿ ಗೆಲುವನ್ನು ಸಂಭ್ರಮಿಸಿದ್ದಾರೆ.

25
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ

ಗಿಲ್ಲಿ ನಟನ ಗೆಲುವಿನ ಫೋಟೋ ಪೋಸ್ಟ್ ಮಾಡಿರುವ ಕಾವ್ಯ ಶೈವ, ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದು ಬರೆದುಕೊಂಡಿದ್ದಾರೆ. ಈ ಗೆಲುವಿಗೆ ಗಿಲ್ಲಿ ಅರ್ಹ, ಅಭಿನಂದನೆಗಳು ಎಂದು ಕಾವ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ಬಡತನದಿಂದ ಬಂದ ಪ್ರತಿಭೆ ಗಿಲ್ಲಿ ಬಿಗ್ ಬಾಸ್ ಟ್ರೋಫಿ ಗೆಲುವು ಅತ್ಯಂತ ಅರ್ಹತೆಯಿಂದ ಪಡೆದು ಗೆಲುವು ಎಂದು ಕಾವ್ಯ ಹೇಳಿದ್ದಾರೆ.

35
ಝೀರೋದಿಂದ ಹೀರೋ

ಗಿಲ್ಲಿ ಗೆಲುವಿನ ಫೋಟೋ ಜೊತೆಗೆ ಗಿಲ್ಲಿ ಜೊತೆಗಿನ ಫೋಟೋ ಹಂಚಿಕೊಂಡಿರು ಕಾವ್ಯ ಝೀರೋ ದಿಂದ ಹೀರೋ ಆದ ಸಾಧಕ ಎಂದು ಗಿಲ್ಲಿ ಪಯಣವನ್ನು ಗುಣಗಾನ ಮಾಡಿದ್ದಾರೆ. ಇದೇ ರೀತಿ ಹಲವು ಯಶಸ್ಸುಗಳು ಹುಡುಕಿಕೊಂಡು ಬರಲಿ ಎಂದು ಕಾವ್ಯ ಶೈವ ಹಾರೈಸಿದ್ದಾರೆ.

45
ಕಾವ್ಯ ಪೋಸ್ಟ್‌ನಿಂದ ಗಿಲ್ಲಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದ್ದು ಯಾಕೆ

ಕಾವ್ಯ ಶೈವ ಮಾಡಿದ ಪೋಸ್ಟ್‌ನಿಂದ ಗಿಲ್ಲಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಲು ಕಾರಣವೂ ಇದೆ. ಈ ಪೋಸ್ಟ್‌ನ ಕೊನೆಯಲ್ಲಿ ಆದಷ್ಟು ಬೇಗ ಆ್ಯಕ್ಷನ್ ಕಟ್ ಹೇಳೋ ಆಗೆ ಆಗಲಿ ಎಂದು ಕಾವ್ಯ ಶುಭಹಾರೈಸಿದ್ದಾರೆ. ಈ ಮೂಲಕ ಗಿಲ್ಲಿ ನಟ ಆದಷ್ಟು ಬೇಗ ಸಿನಿಮಾದಲ್ಲಿ ನಾಯಕನ ನಟನಾಗಿ ಕಾಣಿಸಿಕೊಳ್ಳುವ ಹಾಗೆ ಆಗಲಿ ಎಂದಿದ್ದಾರೆ.

55
ಕಾವ್ಯಗೆ 3ನೇ ರನ್ನರ್ ಅಪ್ ಸ್ಥಾನ

ಬಿಗ್ ಬಾಸ್ 12ರ ಫಿನಾಲೆ ಪ್ರವೇಶಿಸಿ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಸ್ಪರ್ಧಿ ಕಾವ್ಯ ಶೈವ. ಆದರೆ ಕಾವ್ಯ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಗಿಲ್ಲಿ ವಿನ್ನರ್ ಆದರೆ, ಮೊದಲ ರನ್ನರ್ ಅಪ್ ಸ್ಥಾನ ರಕ್ಷಿತಾ ಶೆಟ್ಟಿ ಪಾಲಾಗಿದೆ. ಇನ್ನು ಎರಡನೇ ರನ್ನರ್ ಅಪ್ ಸ್ಥಾನ ಅಶ್ವಿನಿ ಗೌಡ ಪಾಲಾದರೆ, ಮೂರನೇ ಸ್ಥಾನ ಕಾವ್ಯ ಪಾಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories