ಗಿಲ್ಲಿ ನಟ, ರಕ್ಷಿತಾ TO ಅಶ್ವಿನಿ ಗೌಡ, ಈ ಬಾರಿಯ ಬಿಗ್ ಬಾಸ್ ಲೈಫ್ ಜಿಂಗಾಲಾಲ

Published : Jan 19, 2026, 08:56 PM IST

ಗಿಲ್ಲಿ ಸೇರಿ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಅತೀ ದೊಡ್ಡ ಪಾಠ, ಗಿಲ್ಲಿ ಗೆಲುವಿನೊಂದಿಗೆ ಬಿಗ್ ಬಾಸ್ 12 ಅಂತ್ಯಗೊಂಡಿದೆ. ಸಂಭ್ರಮಾಚರಣೆ ಜೋರಾಗಿದೆ. ಈ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಪಾಠ ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ. ಏನದು? 

PREV
17
ಮನರಂಜನೆ ಜೊತೆ ಜೀವನ ಪಾಠ

ಬಿಗ್ ಬಾಸ್ 12ನೇ ಆವೃತ್ತಿ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದಿದೆ. ಪ್ರಮುಖವಾಗಿ ಗಿಲ್ಲಿ ನಟನ ಗೆಲುವನ್ನು ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಪ್ರತಿ ಬಿಗ್ ಬಾಸ್ ಆವೃತ್ತಿ ಹಲವು ಕಾರಣಗಳಿಂದ ಗಮನಸೆಳೆಯುತ್ತದೆ. ಆದರೆ ಈ ಬಾರಿ ಜನಸಾಮಾನ್ಯರಿಂದ ಹಿಡಿದು ಎಲ್ಲರನ್ನೂ ಬಿಗ್ ಬಾಸ್ ಹಿಡಿದಿಟ್ಟುಕೊಂಡಿತ್ತು. ಪ್ರತಿ ಸ್ಪರ್ಧಿಗಳಿಗೆ ಕ್ಷಣ ಕ್ಷಣಕ್ಕೂ ಅಭಿಮಾನಿಗಳ ಬಳಗ ಹೆಚ್ಚಾಗುತ್ತಾ ಹೋಗಿತ್ತು. ಈ ಬಿಗ್ ಬಾಸ್ ಸ್ಪರ್ಧಿಗಳ ಆಟದ ಜೊತೆಗೆ ಪ್ರತಿಯೊಬ್ಬರಿಗೂ ಜೀವನ ಪಾಠ ಹೇಳಿದೆ.

27
ಗಿಲ್ಲಿ ನಟ

ಗಿಲ್ಲಿ ನಟನ ಆಟ ಎಲ್ಲರಿಗೂ ಇಷ್ಟವಾಗಿದೆ. ಮಾತು, ಕೌಂಟರ್, ಹಾಸ್ಯ ಎಲ್ಲವೂ ಸೂಪರ್. ಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತದೆ. ಯಾವುದಕ್ಕೂ ಎದೆಗುಂದುವ ಅಗತ್ಯವಿಲ್ಲ. ಧೈರ್ಯವಾಗಿ ಎದುರಿಸಬೇಕು.ಜೀವನದಲ್ಲಿ ಯಶಸ್ಸು ಗಳಿಸಲು ತುಂಬಾ ಗಂಭೀರವಾಗಿರಬೇಕು ಎಂದಿಲ್ಲ. ನಮ್ಮತನ ಇರಬೇಕು, ನಾವು ಎಲ್ಲಿಂದ ಬಂದಿದ್ದೇವೆ, ಹೇಗೆ ಬಂದಿದ್ದೇವೆ ಅನ್ನೋದು ಮರೆಯಬಾರದು. ಕಷ್ಟ-ಸುಖ ಎರಡನ್ನು ಸಂತೋಷದಿಂದ ಸ್ವೀಕರಿಸುತ್ತಾ, ಖುಷಿ ಖುಷಿಯಾಗಿರಬೇಕು. ಪರಿಸ್ಥಿತಿಗಳು ಏನೇ ಇರಲಿ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಲು, ಸವಾಲುಗಳನ್ನು ಸ್ವೀಕರಿಸುತ್ತಾ ಜೀವನವನ್ನು ಮತ್ತಷ್ಟು ಸುಂದರಗೊಳಿಸಲು ಗಿಲ್ಲಿ ನಟನ ಬಿಗ್ ಬಾಸ್ ಪಯಣ ಸ್ಪೂರ್ತಿಯಾಗಿದೆ.

37
ಅಶ್ವಿನಿ ಗೌಡ (ಜೀವನ ಒಂದು ಪಾಠಶಾಲೆ)

ಅಶ್ವಿನಿ ಗೌಡ ಆಟ ಕಲಿಸಿದ ಅತೀ ದೊಡ್ಡ ಪಾಠ ಎಂದರೆ ನಿಮಗೆ ಯಾರು ಏನು ಕಲಿಸುತ್ತಾರೆ ಅನ್ನೋದು ವಯಸ್ಸು ನಿರ್ಧರಿಸುವುದಿಲ್ಲ. ಜೀವನದಲ್ಲಿ ಕಲಿಕೆ ನಿರಂತರ. ಅದು ಸಣ್ಣವರಿಂದ ಆಗಿರಬಹುದು, ದೊಡ್ಡವರಿಂದ ಆಗಿರಬಹುದು. ಆದರೆ ತಪ್ಪುಗಳನ್ನು ಸರಿಪಡಿಸಿಕೊಂಡು, ಕಲಿಯುತ್ತಾ, ಏಳು ಬೀಳುಗಳಿಂದ ಪಾಠ ಕಲಿಯುತ್ತಾ ಮುಂದೆ ಸಾಗುವುದೇ ಜೀವನ ಅನ್ನೋದು ಅಶ್ವಿನಿ ಗೌಡ ಬಿಗ್ ಬಾಸ್ ಪಯಣ ಎಲ್ಲರಿಗೂ ತಿಳಿ ಹೇಳಿದೆ.

47
ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ರಕ್ಷಿತಾ ಬಿಗ್ ಬಾಸ್ ಪಯಣ ನಮಗೆ, ಓರ್ವ ವ್ಯಕ್ತಿ ಪರಿಪಕ್ವಗೊಳ್ಳಲು ವಯಸ್ಸಿನ ಮಿತಿ ಇಲ್ಲ, ಜೀವನ ಅರ್ಥಮಾಡಿಕೊಳ್ಳಬೇಕು, ನಿಮ್ಮಲ್ಲಿನ ಕುಂದು ಕೊರತೆಗಳಿಗೆ ಕೊರಗುವುದಕ್ಕಿಂತ ಅದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಹೋರಾಡಬೇಕು.

57
ಕಾವ್ಯ

ಬದುಕಿನಲ್ಲಿ ತಾಳ್ಮೆ ಅತೀ ಮುಖ್ಯ. ಕಾಲೆಳೆಯುವವರು, ಹೀಯಾಳಿಸುವವರು, ಟೀಕಿಸುವವರು, ವಿರೋಧ ಸೇರಿದಂತೆ ಹಲವು ಅಡೆ ತಡೆಗಳು ಬದುಕಿನಲ್ಲಿ ಸಹಜ. ಆದರೆ ಗುರಿಯತ್ತ ಫೋಕಸ್ ಆಗಿದ್ದರೆ ಎಲ್ಲಾ ಸವಾಲು ಗೆಲ್ಲಬಹುದು ಅನ್ನೋದು ಕಾವ್ಯ ತೋರಿಸಿಕೊಟ್ಟಿದ್ದಾರೆ.

67
ಮ್ಯೂಟೆಂಟ್ ರಘು

ಮ್ಯೂಟೆಂಟ್ ರಘು

ಬಾಹ್ಯವಾಗಿ ಹೇಗಿದ್ದಾರೆ ಅನ್ನೋದರಲ್ಲಿ ಒರ್ವ ವ್ಯಕ್ತಿಯನ್ನು ಜಡ್ಜ್ ಮಾಡಲು ಸಾಧ್ಯವಿಲ್ಲ. ಹೊರಗೆ ಕಠಿಣ, ಕಠೋರವಾಗಿ ಕಂಡರೂ ಒಳಗೆ ಮೃದ ಹೃದಯ, ಒಳ್ಳೆೇ ಮನಸ್ಸು, ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಂಡ ಅದೆಷ್ಟೋ ಮಂದಿ ಇದ್ದಾರೆ. ಪ್ರತಿಯೊಬ್ಬರನ್ನು ಜಡ್ಜ್ ಮಾಡುವಾಗ ಅಂತರಂಗ ಅರಿತು ಮಾಡಬೇಕು.

77
ಧನುಷ್

ಎಲ್ಲಾ ಕಡೆ ಮಾತನಾಡಬೇಕು ಎಂದಿಲ್ಲ, ಹಲವೆಡೆ ಮೌನವೇ ಉತ್ತರ. ಅಗತ್ಯ ಬಿದ್ದಾಗ ಮಾತನಾಡಬೇಕು. ನಮ್ಮ ನಮ್ಮ ಮಿತಿಯಲ್ಲಿ ನಾವಿರಬೇಕು. ಇಲ್ಲ ಸಲ್ಲದ ವಿಚಾರಗಳಲ್ಲಿ ಮೂಗು ತೂರಿಸಬಾರದು ಅನ್ನೋದು ಧನುಷ್ ಕಲಿಸಿದ ಪಾಠ.

ಧನುಷ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories