ತನ್ನ ಹಿಡಿತದಲ್ಲಿದ್ದ ಶಿವು ತಾಯಿ ಶಾರದಮ್ಮಾ ಕೈ ತಪ್ಪಿದ್ದರಿಂದ ಭಯಗೊಂಡ ವೀರಭದ್ರ ಪಾರ್ಶ್ವವಾಯುಗೆ ಒಳಗಾದವನಂತೆ ನಾಟಕ ಮಾಡುತ್ತಿದ್ದಾನೆ. ವೈದ್ಯೆಯಾಗಿರುವ ಪಾರು ಸಹ ವೀರಭದ್ರನ ನಾಟಕ ನಂಬಿದ್ದಳು. ಇದೀಗ ಪಾರು ಕೊಟ್ಟ ಶಾಕ್ ಟ್ರೀಟ್ಮೆಂಟ್‌ಗೆ ಮಾರಿಗುಡಿ ದೇವರು ವೀರಭದ್ರ ಪತರಗುಟ್ಟಿದ್ದಾನೆ.
25
ಸತ್ಯ ಪಾರುಗೆ ಗೊತ್ತಿಲ್ಲ
ವೀರಭದ್ರನಿಂದ ಬಂಧನಕ್ಕೊಳಗಾಗಿದ್ದ ಶಾರದಮ್ಮ ಸದ್ಯ ಮಗಳು ರಶ್ಮಿ ಮನೆಯಲ್ಲಿ ಶಾಂತಮ್ಮಳಾಗಿ ಆಶ್ರಯ ಪಡೆದುಕೊಂಡಿದ್ದಾಳೆ. ಸೊಸೆ ಪಾರುಳನ್ನು ಭೇಟಿಯಾದ್ರೂ ವೀರಭದ್ರನ ಯಾವ ಸತ್ಯವನ್ನು ಸಹ ಶಾರದಮ್ಮ ಹೇಳಿಲ್ಲ. ನನಗೆ ಯಾವುದು ನೆನಪಿಲ್ಲ ಎಂದು ಪಾರು ಮುಂದೆ ಸುಳ್ಳು ಹೇಳಿದ್ದಾಳೆ. ಶಾರದಮ್ಮಳೇ ತಾನು ಹುಡುಕುತ್ತಿರುವ ಅತ್ತೆ ಎಂಬ ಸತ್ಯ ಪಾರುಗೆ ಗೊತ್ತಿಲ್ಲ.
35
ಕರೆಂಟ್ ಶಾಕ್
ಪಾರ್ಶ್ವವಾಯು ಅಂತ ಮನೆಯಲ್ಲಿರೋ ವೀರಭದ್ರನ ಭೇಟಿಗೆ ಶಿವು ಜೊತೆ ಪಾರು ಬಂದಿದ್ದಾಳೆ. ಈ ಹಿಂದೆ ಬಿಸಿ ಕಾಫಿ ಎಸೆಯಲು ಹೋದರೂ ವೀರಭದ್ರ ಹಾಸಿಗೆಯಿಂದ ಮಿಸುಕಾಡಿರಲಿಲ್ಲ. ಇದೀಗ ನೀಚ ದುಷ್ಟ ವೀರಭದ್ರನಿಗೆ ಕರೆಂಟ್ ಶಾಕ್ ನೀಡಲು ಪಾರು ಮುಂದಾಗಿದ್ದಾಳೆ. ಕರೆಂಟ್ ಶಾಕ್ ಅಂತ ಹೇಳುತ್ತಲೇ ಮಲಗಿದ್ದ ವೀರಭದ್ರ ನನಗೇನೂ ಆಗಿಲ್ಲ ಅಂತ ಎದ್ದು ಕುಳಿತಿದ್ದಾನೆ.
ನಿನ್ನಂತ ನೀಚ ಇಲ್ಲ. ಅದೆಷ್ಟು ಅಂತ ನಾಟಕ ಆಡ್ತೀಯಾ ಅಪ್ಪ. ಶಾಕ್ ಟ್ರೀಟ್ಮೆಂಟ್ ಕೊಟ್ರೆ ಬೇಗ ಎದ್ದು ಜಿಂಕೆ ಮರಿ ರೀತಿ ಓಡಾಡ್ತಿಯಾ ಎಂದು ಅಪ್ಪನಿಗೆ ಪಾರು ಹೇಳುತ್ತಾಳೆ. ವೀರಭದ್ರನ ಬೆರಳಿಗೆ ವಯರ್ ಸುತ್ತಿ, ಮತ್ತೊಂದು ತುದಿಯನ್ನು ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್‌ಗೆ ಹಾಕಿದ್ದಾಳೆ. ಇನ್ನೇನು ಬಟನ್ ಆನ್ ಮಾಡುವಷ್ಟರಲ್ಲಿ ವೀರಭದ್ರ ಎದ್ದು ನನಗೇನು ಆಗಿಲ್ಲ ಅಂತ ಹೇಳಿದ್ದಾನೆ.
ಅಪ್ಪ ವೀರಭದ್ರ ಎದ್ದು ಕುಳಿತುಕೊಳ್ಳುತ್ತಿದ್ದಂತೆ ಪಾರು, ಮನೆ ಮಂದಿಯೆಲ್ಲರನ್ನು ಕರೆದುಕೊಂಡು ಬಂದಿದ್ದಾಳೆ. ವೀರಭದ್ರನನ್ನು ನೋಡಿ ಶಿವು ಸೇರಿದಂತೆ ಮನೆ ಮಂದಿಯೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಸೂಪರ್ ಪ್ಲಾನ್. ಪಾರು ಅಕ್ಕ ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.