15 ವರ್ಷದ ದಾಂಪತ್ಯಕ್ಕೆ ವಿದಾಯ: ವಿಚ್ಚೇದನದತ್ತ ಮುಖ ಮಾಡಿದ ಕಿರುತೆರೆಯ ಸ್ಟಾರ್ ಜೋಡಿ

Published : Oct 27, 2025, 11:20 AM IST

Jay Bhanushali Mahhi Vij: ಜಯ್ ಭಾನ್ಸುಲಿ ಹಾಗೂ ಮಹಿ ವಿಜ್ ಹಿಂದಿ ಕಿರುತೆರೆ ಲೋಕದ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಅವರಿಬ್ಬರು ಮದುವೆಯಾದಾಗ ಅವರ ಸಾವಿರಾರು ಅಭಿಮಾನಿಗಳು ಸ್ವರ್ಗವೇ ಧರೆಗಿಳಿದಂತೆ ಖುಷಿ ಪಟ್ಟಿದ್ದರು. ಆದರೆ ಈಗ ಈ ದಂಪತಿಗಳು ದೂರಾಗಿದ್ದಾರೆ ಎಂದು ವರದಿಯಾಗಿದೆ.

PREV
16
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಕಿರುತೆರೆಯ ಪ್ರಸಿದ್ಧ ಜೋಡಿ. 2010 ರಲ್ಲಿ ಈ ಜೋಡಿ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ದಾಂಪತ್ಯಕ್ಕೆ 15 ವರ್ಷಗಳೇ ತುಂಬಿವೆ. ಆದರೆ ಅವರು ಈಗ ದೂರಾಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿದೆ. ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಜಯ್ ಮತ್ತು ಮಹಿ ಬಹಳ ಹಿಂದೆಯೇ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

26
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ಜಯ್ ಭಾನುಶಾಲಿ ಅವರಿಗೆ 40 ವರ್ಷವಾಗಿದ್ದರೆ ಮಹಿ ವಿಜ್ ಅವರಿಗೆ 43 ವರ್ಷ ಜಯ್ ಅವರು ತಮ್ಮಗಿಂತ 3 ವರ್ಷ ದೊಡ್ಡವರಾದ ಮಹಿ ಅವರನ್ನು ಪ್ರೀತಿಸಿ ಮದ್ವೆಯಾಗಿದ್ದರು. ಅವರು ಜೊತೆಯಾಗಿ ಬಾಳುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗದೇ ಇದ್ದ ಕಾರಣ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೆಲ ಸಮಯದ ಹಿಂದೆಯೇ ಇಬ್ಬರೂ ಪರಸ್ಪರ ದೂರಾಗಿದ್ದು, 2025ರ ಜುಲೈ ಆಗಸ್ಟ್ ಸಮಯದಲ್ಲಿ ಅವರು ಅಂತಿಮವಾಗಿ ವಿಚ್ಚೇದನ ಪಡೆದು ತಮ್ಮ ಬಾಂಧವ್ಯಕ್ಕೆ ವಿದಾಯ ಹೇಳಿದ್ದಾರೆ.

36
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ಮಹಿ ವಿಜ್‌ಗೆ ತನ್ನ ಪತಿ ಜಯ್ ಭಾನುಶಾಲಿ ಜೊತೆ ನಂಬಿಕೆಯ ಸಮಸ್ಯೆ ಏರ್ಪಟ್ಟಿದ್ದರಿಂದ ಇಬ್ಬರ ಮಧ್ಯೆ ಬಿರುಕು ಶುರು ಆಯ್ತು. ದಂಪತಿಗಳು ತಾವು ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದರು ಕೊನೆಯದಾಗಿ ಜೂನ್ 2024ರಲ್ಲಿ ಅವರು ಜೊತೆಗಿರುವ ಪೋಟೋವನ್ನು ಹಾಕಿದ್ದರು. ಅದರ ನಂತರ ಅವರು ತಾವಿಬ್ಬರು ಜೊತೆಗಿರುವ ಫೋಟೋಗಳನ್ನು ಹಾಕುತ್ತಿರಲಿಲ್ಲ.

46
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ಮಹಿ ವಿಜ್ ಮತ್ತು ಜಯ್ ಭಾನುಶಾಲಿ ಅವರು ಕೊನೆಯ ಬಾರಿಗೆ ಆಗಸ್ಟ್ 2025 ರಲ್ಲಿ ತಮ್ಮ ಮಗಳು ತಾರಾ ಅವರ ಹುಟ್ಟುಹಬ್ಬದಂದು ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಫೋಟೋಗಳಲ್ಲಿ ಅವರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು. ಈ ಮಧ್ಯೆ ಜಯ್ ಅವರು ತನ್ನ ಮಕ್ಕಳ ಜೊತೆ ಮಾತ್ರ ಪ್ರವಾಸ ಹೋಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಅತ್ತ ಮತ್ತೊಂದೆಡೆ ಮಹಿ ಎರಡು ವಾರಗಳ ಹಿಂದೆ ಮಕ್ಕಳೊಂದಿಗೆ ಹೊಸ ಮನೆಗೆ ತೆರಳಿದರು. ಮಹಿ ಕೂಡ ಈಗ ನಟನೆಯನ್ನು ಪುನರಾರಂಭಿಸಿದ್ದು, ಪ್ರಸ್ತುತ ಲಕ್ನೋದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಜುಲೈ 2025 ರಲ್ಲಿ ಅವರು ದೂರಾಗಿರುವ ಬಗ್ಗೆ ತೀವ್ರ ಊಹಾಪೋಹಾಗಳು ಹಬ್ಬಿದ್ದವು. ಆಗ ಮಹಿಯನ್ನು ಮಾಧ್ಯಮಗಳು ಪ್ರಶ್ನಿಸಿದಾಗ ನಾನ್ಯಾಕೆ ನಿಮಗೆ ಹೇಳಬೇಕು ನೀವೇನು ನನ್ನ ಅಂಕಲ್ಲಾ ಎಂದು ಪ್ರಶ್ನಿಸಿದ್ದರು.

56
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ಈ ದಂಪತಿ ತಾವು ಪರಸ್ಪರ ದೂರಾದ ಬಗ್ಗೆ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ ಈ ಸುದ್ದಿ ಮಾತ್ರ ಅವರ ಅಭಿಮಾನಿಗಳನ್ನು ಘಾಸಿಗೊಳಿಸಿದೆ. ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 3 ಶೋದಲ್ಲಿ ಈ ಹಿಂದೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಜಯ್ ಭಾನ್ಸುಲಿ, ಮಹಿ ಜೊತೆ ಪ್ರೀತಿಯಲ್ಲಿ ಬೀಳಲು ಮೂರು ತಿಂಗಳು ಸಾಕು ಎಂದಿದ್ದರು. ಹಾಗೂ ಮೂರು ತಿಂಗಳಲ್ಲಿ ಅವರು ನಟಿಯನ್ನು ಮದುವೆಯೂ ಆಗಿದ್ದರು. 2009 ರಂದು ಜಯ್ ಮಹಿ ಅವರಿಗೆ ಪ್ರಪೋಸ್ ಮಾಡಿದ್ರೆ 2010 ರಲ್ಲಿ ಜೋಡಿ ಹಸೆಮಣೆ ಏರಿದ್ದರು.

66
ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಡಿವೋರ್ಸ್‌

ತಮ್ಮ ಮದುವೆಗೆ ಜಯ್ ಎಲ್ಲರನ್ನೂ ಆಹ್ವಾನಿಸಿದ್ದಾಗಿ ಬಹಿರಂಗಪಡಿಸಿದರು, ಆದರೆ ಯಾರೂ ಬರಲಿಲ್ಲವಂತೆ, ಏಕೆಂದರೆ ಅವರು ಅವನೋರ್ವ ಸ್ತ್ರೀಲೋಲ ಎಂದು ಎಲ್ಲರೂ ಭಾವಿಸಿದ್ದರಂತೆ. ಇಬ್ಬರೂ 2010 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದು, ಅವರಿಗೆ ರಾಜವೀರ್ ಮತ್ತು ಖುಷಿ ಎಂಬ ಇಬ್ಬರು ದತ್ತು ಮಕ್ಕಳಿದ್ದಾರೆ. ಇವರನ್ನು 2017ರಲ್ಲಿ ದತ್ತು ಪಡೆಯಲಾಗಿತ್ತು. 2019ರಲ್ಲಿ ಇವರಿಗೆ ಇವರದ್ದೇ ಆದ ಜೈವಿಕ ಮಗಳು ತಾರಾ ಜನಿಸಿದ್ದಳು.

Read more Photos on
click me!

Recommended Stories