Bigg Boss ಡಾಗ್​ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?

Published : Oct 27, 2025, 12:56 PM IST

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಹರ್ಷನನ್ನು ಇಂಡಿಯಾದ ನಂಬರ್ 2 ಹೀರೋ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಅಪ್ಪನ ದೊಡ್ಡ ಮಾತುಗಳಿಗೆ ನಾಚಿಕೆ ಸ್ವಭಾವದ ಹರ್ಷ ಪ್ರತಿಕ್ರಿಯಿಸಿದ್ದು, ಅಪ್ಪನಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

PREV
17
ಡಾಗ್​ ಸತೀಶ್​ ಹವಾ

ಬಿಗ್​ಬಾಸ್​​ (Bigg Boss)ನಲ್ಲಿ ಇದ್ದ ಮೂರೇ ವಾರಗಳಲ್ಲಿ ಸಕತ್​ ಹವಾ ಸೃಷ್ಟಿಸಿದವರು ಡಾಗ್​ ಸತೀಶ್​. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಸಾಕುವ ಮೂಲಕ ಅವರ ಫೇಮಸ್​ ಆಗಿದ್ದಾರೆ. ಸಹಜವಾಗಿ ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ಅವರ ಲೆವೆಲ್​ ಇನ್ನೂ ಒಂದು ಹಂತ ಮೇಲೆ ಹೋಗಿದೆ.

27
ದಾಂಪತ್ಯ ಕಲಹ

ಪ್ರತಿ ಸಂದರ್ಶನದಲ್ಲಿಯೂ ಡಾಗ್​ ಸತೀಶ್​ ಅವರು ತಮ್ಮನ್ನು ತಾವು ಹ್ಯಾಂಡ್​ಸಮ್​. ವಯಸ್ಸಾಗುತ್ತಾ ಇನ್ನೂ ಚಿಕ್ಕವನಾಗುತ್ತಿದ್ದೇನೆ. ಇದಕ್ಕಾಗಿಯೇ ತುಂಬಾ ಹುಡುಗಿಯರು ನನ್ನ ಹಿಂದೆ ಇಂದಿಗೂ ಬೀಳ್ತಿದ್ದಾರೆ ಎನ್ನುತ್ತಲೇ ಇದ್ದಾರೆ. ಅಂದಹಾಗೆ, ಇವರ ಮತ್ತು ಪತ್ನಿಯ ನಡುವಿನ ಕೇಸ್​ ಕೋರ್ಟ್​ನಲ್ಲಿ ಬಾಕಿ ಇದೆ. ನಾನು ನೋಡಲು ತುಂಬಾ ಸ್ಮಾರ್ಟ್​ ಆಗಿರುವ ಬೇರೆ ಮದ್ವೆಯಾಗುತ್ತೇನೆ ಎಂದು ಅವಳು ಡಿವೋರ್ಸ್​ ಕೊಡಲ್ಲ, ಆದರೆ ಕೋಟಿ ಕೋಟಿ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾಳೆ ಎಂದಿದ್ದಾರೆ ಡಾಗ್​ ಸತೀಶ್​.

37
ಮಗನ ಬಗ್ಗೆ ದೊಡ್ಡ ಕನಸು

ಅದೇ ಇನ್ನೊಂದೆಡೆ, ಮಗ ಡಾಗ್​ ಸತೀಶ್​ ಬಳಿಯೇ ಇದ್ದು, ಆತನ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದಾರೆ ಅಪ್ಪ. ನನ್ನ ಮಗನೇ ನನಗೆ ಜೀವ, ತಾಯಿ ಇಲ್ಲದಿದ್ರೂ ಅವನನ್ನ ಅಷ್ಟು ಚೆನ್ನಾಗಿ ಸಾಕಿದ್ದೇನೆ. ಅವನನ್ನು ಇಂಡಿಯಾಕ್ಕೆ ನಂಬರ್ 2 ಹೀರೋ ಮಾಡಬೇಕು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

47
ಮಿಸ್ಟರ್ ಹ್ಯಾಡ್​ಸಮ್

ನಂಬರ್ ಒನ್ ಮಾಡಿದ್ರೆ ದುರಹಂಕಾರ ಬರುತ್ತೆ, ಹಾಗಾಗಿ ನಂಬರ್ 2 ಹೀರೋ ಮಾಡ್ತೇನೆ. ಅವನಿಗೆ ಈಗಾಗಲೇ ಲಕ್ಷ ಲಕ್ಷ ಹುಡುಗಿಯರು ಫ್ಯಾನ್ಸ್​ ಇದ್ದಾರೆ. ಅವನಿಗೆ ಮಿಸ್ಟರ್ ಹ್ಯಾಡ್​ಸಮ್ ಅಂತ ಅವಾರ್ಡ್ ಎಲ್ಲ ಬಂದಿದೆ ಎಂದು ಹೇಳಿದ್ದಾರೆ. ಇದೀಗ ಈ ಬಗ್ಗೆ ಖುದ್ದು ಮಗ ಹರ್ಷನನ್ನು ಮಾತನಾಡಿಸಿದ್ದಾರೆ ಆ್ಯಂಕರ್​ ಪೂಜಾ.

57
ನಾಚಿಕೆ ಸ್ವಭಾವ

ಹರ್ಷ ತುಂಬಾ ನಾಚಿಕೆ ಸ್ವಭಾವದವ ಎಂದು ತಿಳಿಯುತ್ತದೆ. ತನ್ನನ್ನು ಹಾಡಿ ಹೊಗಳಿ ಅಪ್ಪ ಹೇಳಿದ ಮಾತುಗಳು ಬಹುಶಃ ಹರ್ಷ ಕೇಳಿಸಿಕೊಂಡ ಹಾಗಿಲ್ಲ. ಆದ್ದರಿಂದ ಲಕ್ಷ ಲಕ್ಷ ಹುಡುಗಿಯರ ಫ್ಯಾನ್ಸ್​, ಅದೂ ಇದೂ ಹೇಳಿದಾಗ ತಬ್ಬಿಬ್ಬಾಗಿದ್ದಾರೆ.

67
ನಂ.2 ಹೀರೋ ಆಗಿ ಎಂಟ್ರಿ

ಕೊನೆಗೆ ನಂ.2 ಹೀರೋ ಆಗಿ ಮಾಡುತ್ತೇನೆ ಎಂದಿದ್ದಾರೆ, ಏನನಿಸುತ್ತದೆ ಹೇಳಿದಾಗ, ನಾನು ಆ ಬಗ್ಗೆ ಟ್ರೈ ಮಾಡುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿ, ಅಪ್ಪನಿಗೆ ಒಳ್ಳೆಯ ಹೆಸರು ತರುತ್ತೇನೆ ಎಂದಿದ್ದಾರೆ. ತನ್ನ ಫೆಮರೆಟ್​ ಹೀರೋ ಯಶ್​ ಎಂದಿರೋ ಹರ್ಷ, ಅಪ್ಪನನ್ನು ಪ್ರೌಡ್​ ಮಾಡುತ್ತೇನೆ ಎಂದಿದ್ದಾರೆ.

77
ಹುಡುಗಿಯರ ಬಗ್ಗೆ ಹೇಳಿದ್ದೇನು?

ಎಷ್ಟೋ ಲಕ್ಷ ಹುಡುಗಿಯರು ಹಿಂದೆ ಬಿದ್ದಿದ್ದಾರೆ ಅಂತ ಅಪ್ಪ ಹೇಳಿದ್ರು ಹೌದಾ ಎಂದಾಗ ಹರ್ಷ, ಹಾಗೇನಿಲ್ಲ. ಕಾಂಪ್ಲಿಮೆಂಟ್ಸ್​ ಸಿಗತ್ತೆ ಅಷ್ಟೇ. ಕಾಲೇಜ್​ ಅಂದ ಮೇಲೆ ಅದೆಲ್ಲಾ ಇರುತ್ತೆ ಎಂದು ಸ್ವಲ್ಪ ಇರುಸು ಮುರುಸಿನಲ್ಲಿಯೇ ಉತ್ತರಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories