Bigg Bossನಲ್ಲಿ ಚೋಟುದ್ದ ಚಡ್ಡಿ ಹಾಕ್ಕೋಬೇಕ್ರಿ- ನಂಗೆಲ್ಲಿ ಬರ್ತೈತ್ರಿ? ಈ ಡ್ರೆಸ್​ ಹೆಂಗೈತ್ರಿ? ಮಲ್ಲಮ್ಮನ ಮಾತು ಕೇಳಿ

Published : Oct 02, 2025, 01:02 PM IST

ಬಿಗ್ ಬಾಸ್ ಮನೆಯಲ್ಲಿ 58 ವರ್ಷದ ಸ್ಪರ್ಧಿ ಮಲ್ಲಮ್ಮ ತಮ್ಮ ಉತ್ತರ ಕರ್ನಾಟಕ ಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸೆಲೆಕ್ಟ್​ ಆಗೋದಕ್ಕೂ ಮುನ್ನ ಇದರ ಬಗ್ಗೆ ಮಲ್ಲಮ್ಮ ಹೇಳಿದ್ದೇನು ಕೇಳಿ. ಇದನ್ನು ಕೇಳಿದ್ರೆ ಬಿದ್ದೂ ಬಿದ್ದೂ ನಗುವಂತಿದೆ! 

PREV
16
Bigg Bossನಲ್ಲಿ ಮಲ್ಲಮ್ಮನ ಹವಾ

Bigg Bossನಲ್ಲಿ ಮಲ್ಲಮ್ಮನ ಹವಾ ಜೋರಾಗಿಯೇ ನಡೆಯುತ್ತಿದೆ. ಉತ್ತರ ಕರ್ನಾಟಕ 58 ವರ್ಷ ವಯಸ್ಸಿನ ಮಲ್ಲಮ್ಮ ಯಾವುದೇ ಟಾಸ್ಕ್​ ಕೊಟ್ಟರೂ ಸೈ ಎನ್ನುವಂತೆ ನಿಂತಿದ್ದಾರೆ. ಆದರೆ, ಭಾಷೆಯ ಸಮಸ್ಯೆಯಿಂದಾಗಿ ಕೆಲವು ನಿಯಮಗಳು ಅರಿಯದೇ ಟಾಸ್ಕ್‌ನಲ್ಲಿ ಎಡವಟ್ಟು ಮಾಡಿಕೊಳ್ತಿದ್ದಾರೆ. ಟಾಸ್ಕ್‌ ನಿಯಮಗಳು ಅರ್ಥವಾಗಲಿ ಎಂಬ ಕಾರಣಕ್ಕೆ ಮಲ್ಲಮ್ಮನಿಗೆ ‘ಬಿಗ್ ಬಾಸ್’ ಪದೇ ಪದೇ ರೂಲ್ಸ್ ಹೇಳಿದರು. ಕೆಲವೊಂದು ಪದಗಳನ್ನ ಬದಲಾಯಿಸಿ ಮಲ್ಲಮ್ಮನಿಗೆ ಅರ್ಥವಾಗುವ ಹಾಗೆ ನಿಯಮಗಳನ್ನ ‘ಬಿಗ್ ಬಾಸ್’ ವಿವರಿಸಿದರು. ಯಾವುದೇ ಸ್ಪರ್ಧಿಗೆ ‘ಬಿಗ್ ಬಾಸ್’ ಹೀಗೆ ಮಾಡಿರುವುದು ಇದೇ ಮೊದಲು ಎಂದೂ ಹೇಳಲಾಗುತ್ತಿದೆ.

26
ಚಡ್ಡಿ ಹಾಕ್ಕೊಂಡ್ರೆ ಛಾನ್ಸ್​ರೀ...

ಇದಕ್ಕೂ ಮೊದಲು ಬಿಗ್​ಬಾಸ್​​ಗೆ ನೀವು ಸೆಲೆಕ್ಟ್​ ಆಗ್ತೀರಾ ಎಂದು ಅವರಿಗೆ ಕೇಳಿದಾಗ, ಮಲ್ಲಮ್ಮ ನನ್ನಂಥವರನ್ನು ಯಾಕೆ ಆಯ್ಕೆ ಮಾಡ್ತಾರ್ರಿ... ಚೋಟುದ್ದ ಚಡ್ಡಿ ಹಾಕ್ಕೋಳೋರಿಗೆ ಮಾತ್ರ ಆಯ್ಕೆ ಮಾಡೋದು ಎಂದು ತಮ್ಮದೇ ಆದ ಭಾಷೆಯಲ್ಲಿ ಹೇಳಿದ್ದಾರೆ. ಕೊನೆಯಲ್ಲಿ ನನ್ನನ್ನು ನಂಬ್ತೀರಾ? ನೀವು ಆಯ್ಕೆ ಆಗಿದ್ದೀರಿ ಎಂದಾಗ ಖುಷಿಯಿಂದ ತೇಲಾಡಿದ್ದಾರೆ ಮಲ್ಲಮ್ಮ.

36
ಹೊಲಿಗೆಯೇ ಮಲ್ಲಮ್ಮನವರ ಜೀವನಾಧಾರ

ಹೊಲಿಗೆಯೇ ಮಲ್ಲಮ್ಮನವರ ಜೀವನಾಧಾರ. ಬಿಗ್​ಬಾಸ್​​ಗೆ ಹೋಗಿ ಬಂದ ಮೇಲೆ ಇದನ್ನು ಮುಂದುವರೆಸ್ತೀರಿ ಎಂದು ಕೇಳಿದಾಗ ಮಲ್ಲಮ್ಮ, ಹೌದ್ರಿ ಮತ್ತ. ಇದೇ ನಮಗೆ ಅನ್ನ ಕೊಟ್ಟಿರೋದು ಎನ್ನುತ್ತಾ ಫ್ರಾಕ್​ ಒಂದನ್ನು ತೋರಿಸಿ ಇದು ಬೇಕಾದ್ರೆ ನಾನು ಹಾಕ್ಕೋತ್ತೇನೆ ನೋಡಿ, ಸುದೀಪ್​ ಅವರನ್ನು ಸ್ವಾಗತಿಸ್ತೇನೆ ಎಂದಿದ್ದಾರೆ!

46
ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗೆ

ಸೀರಿಯಲ್​ಗೆ ಬೇಕಾದ್ರೆ ಹೋಗ್ತೇನೆ. ಅದರಲ್ಲಿಯೂ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗೆ ಹೋಗ್ತೇನೆ. ಭಾರ್ಗವಿಗೆ ತೊಂದರೆ ಕೊಡೋರ ಕಪಾಳಕ್ಕೆ ಹೊಡೆಯಬೇಕು, ಅದಕ್ಕೇ ಎಂದಿದ್ದಾರೆ ಮಲ್ಲಮ್ಮ! ಮಲ್ಲಮ್ಮ  ಟಾಕ್ಸ್​ ಇನ್​ಸ್ಟಾ ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ. 

56
ಭಾಷೆ ಅರಿಯದೇ ಪೇಚಲ್ಲಿ ಮಲ್ಲಮ್ಮ

ಇನ್ನು ಬಿಗ್​ಬಾಸ್​ ಮನೆಯಲ್ಲಿ ಮಲ್ಲಮ್ಮ (Bigg Boss Mallamma) ಪವಾಡ ಜೋರಾಗಿಯೇ ನಡೆದಿದೆ. ಒಂಟಿ-ಜಂಟಿ ಟಾಸ್ಕ್​ ಮಲ್ಲಮ್ಮ ಅವರನ್ನು ಪೇಚಿಗೆ ಸಿಲುಕಿಸಿದೆ. ದಿನಸಿ ಸಾಮಗ್ರಿ ಪಡೆಯಲು Bigg Boss ವಿಶೇಷ ಟಾಸ್ಕ್ ನೀಡಿದ್ದರು. ತಮಗೆ ಬೇಕಾದ ದಿನಸಿ ಆಯ್ಕೆ ಮಾಡುವ ಹಕ್ಕು ಒಂಟಿಗಳಿಗೆ ಮಾತ್ರ ಇತ್ತು. ಹೀಗಾಗಿ, ಒಂಟಿ ತಂಡದ ಸದಸ್ಯರು ಒಬ್ಬೊಬ್ಬರೇ ಆಕ್ಟಿವಿಟಿ ಏರಿಯಾಗೆ ಹೋಗಿ ದಿನಸಿ ಸಾಮಗ್ರಿಗಳಿರುವ ಜೋಡಿ ಬಾಸ್ಕೆಟ್‌ ಪೈಕಿ ತಮ್ಮ ಇಚ್ಛೆಯ ಒಂದು ಬ್ಯಾಸ್ಕೆಟ್ ಅನ್ನು ಆಯ್ಕೆ ಮಾಡಿ ಪಕ್ಕದ ಟೇಬಲ್‌ನಲ್ಲಿ ಇರಿಸಬೇಕಿತ್ತು.

ಪ್ರತಿ ಒಂಟಿ ಸದಸ್ಯರು ಎರಡು ಬಾಸ್ಕೆಟ್‌ ಆಯ್ಕೆ ಮಾಡುವ ಅವಕಾಶ ಇತ್ತು. ಇದನ್ನ 30 ಸೆಕೆಂಡ್‌ಗಳಲ್ಲಿ ಮಾಡಿ ಮುಗಿಸಬೇಕಿತ್ತು. ಆಯ್ಕೆ ಮಾಡದೇ ಬಿಟ್ಟ ಬಾಸ್ಕೆಟ್‌ ಜಂಟಿಗಳ ಪಾಲಾಗುತ್ತಿತ್ತು. 30 ಸೆಕೆಂಡ್‌ಗಳ ಒಳಗೆ ಟೇಬಲ್‌ ಮೇಲೆ ಬಾಸ್ಕೆಟ್‌ಗಳು ಇಡದೇ ಇದ್ದಲ್ಲಿ, ದಿನಸಿಯನ್ನ ಬಿಗ್ ಬಾಸ್ ವಾಪಸ್ ಪಡೆಯುತ್ತಾರೆ. ಆ ದಿನಸಿ ಸಾಮಾಗ್ರಿ ಯಾರಿಗೂ ದಕ್ಕುವುದಿಲ್ಲ ಅಂತ ‘ಬಿಗ್ ಬಾಸ್’ ಘೋಷಿಸಿದ್ದರು.

66
ಮಲ್ಲಮ್ಮನ ಭಾಷೆಯಲ್ಲೇ ಮಾತು

ಆದರೆ ಭಾಷೆ ಅರ್ಥವಾಗದೇ ಪೇಚಿಗೆ ಸಿಲುಕಿದ್ದರು ಮಲ್ಲಮ್ಮ. ಕೊನೆಗೆ ಅವರದ್ದೇ ಭಾಷೆಯಲ್ಲಿ ವಿವರಿಸಿ ಹೇಳಿ ಮತ್ತೊಂದು ಛಾನ್ಸ್​ ನೀಡಲಾಗಿತ್ತು. ಈ ರೀತಿ ಮಾಡಿರೋದು ಬಿಗ್​ಬಾಸ್​ ಇತಿಹಾಸದಲ್ಲಿಯೇ ಮೊದಲ ಬಾರಿ ಎನ್ನಲಾಗಿದೆ.

ಇದನ್ನೂ ಓದಿ: 'ಥೂ ನಾಚಿಕೆ ಆಗ್ಬೇಕು ಅವರಿಗೆ' ಎನ್ನುತ್ತಲೇ Bigg Boss ಪೇಮೆಂಟ್​ ಬಗ್ಗೆ ರಿವೀಲ್​ ಮಾಡಿದ Vinay Gowda

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories