- Home
- Entertainment
- TV Talk
- Varthur Santhosh announcement: ಬಿಗ್‌ಬಾಸ್ 12 ರನ್ನರ್‌ಅಪ್‌ಗೆ ವರ್ತೂರು ಸಂತೋಷ್ 10 ಲಕ್ಷ ಘೋಷಣೆ! ಹಳ್ಳೀಕಾರ್ ಏನಂದ್ರು ನೋಡಿ
Varthur Santhosh announcement: ಬಿಗ್‌ಬಾಸ್ 12 ರನ್ನರ್‌ಅಪ್‌ಗೆ ವರ್ತೂರು ಸಂತೋಷ್ 10 ಲಕ್ಷ ಘೋಷಣೆ! ಹಳ್ಳೀಕಾರ್ ಏನಂದ್ರು ನೋಡಿ
ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್, ವಿವಾದಗಳ ನಡುವೆಯೂ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಬಿಗ್‌ಬಾಸ್ 12ರ ರನ್ನರ್ ಅಪ್‌ಗೆ 10 ಲಕ್ಷ ರೂ. ಬಹುಮಾನ ಘೋಷಿಸಿರುವ ಅವರು, ತಮ್ಮ 8 ಕೋಟಿಯ ಹೊಸ ಮನೆ ಹಾಗೂ ಶೀಘ್ರದಲ್ಲೇ ಸಂಬಂಧಿ ಯುವತಿಯೊಂದಿಗೆ ಎರಡನೇ ಮದುವೆಯಾಗುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹಳ್ಳಿಕಾರ್ ಎಂದೇ ಫೇಮಸ್ ಆದ ವರ್ತೂರು ಸಂತೋಷ್
ಬಿಗ್‌ಬಾಸ್ 10ರಲ್ಲಿ ಕೊನೆಯವರೆಗೂ ಮಿಂಚಿದ ವರ್ತೂರು ಸಂತೋಷ್ (Varthur Santhosh) ಹಳ್ಳಿಕಾರ್ ಎಂದೇ ಫೇಮಸ್ ಆದವರು. ಇವರು ಇನ್ನಷ್ಟು ಫೇಮಸ್ ಆಗಲು ಕಾರಣ, ಇವರು ಧರಿಸಿದ್ದ ಹುಲಿಯ ಪೆಂಡೆಂಟ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರಿಂದ. ಬಿಗ್‌ಬಾಸ್ ಮನೆಯಿಂದ ಜೈಲಿಗೂ ಹೋಗಿ ರಾಜಕೀಯ ವಲಯದಲ್ಲಿಯೂ ಕೋಲಾಹಲ ಸೃಷ್ಟಿಸಿದ್ದು ಈಗ ಎಲ್ಲವೂ ಇತಿಹಾಸ. ಇಂತಿಪ್ಪ ವರ್ತೂರು ಫೇಮಸ್ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.
ವಿವಾದದಲ್ಲಿ ವರ್ತೂರು
ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.
ಬಿಗ್‌ಬಾಸ್ 12ರ ರನ್ನರ್ ಅಪ್‌ಗೆ ಗಿಫ್ಟ್
ಇಂತಿಪ್ಪ ವರ್ತೂರು ಸಂತೋಷ್ ಅವರು ಇದೀಗ ಬಿಗ್‌ಬಾಸ್ 12ರ ರನ್ನರ್ ಅಪ್‌ಗೆ ಸಕತ್ ಖುಷಿ ಆಗೋ ಸುದ್ದಿ ನೀಡಿದ್ದಾರೆ. ಅದೇನೆಂದರೆ ಏನಿಲ್ಲವೆಂದರೂ ಹತ್ತು ಲಕ್ಷ ರೂಪಾಯಿಗಳಷ್ಟು ಬಹುಮಾನವನ್ನು ತಮ್ಮ ಕೈಯಿಂದ ನೀಡುವುದಾಗಿ ಅವರು ಘೋಷಿಸಿದ್ದಾರೆ. ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ ಅಂಥವರಿಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ. ಹತ್ತು ಲಕ್ಷ ಅಲ್ಲದಿದ್ದರೂ ನನ್ನ ಕೈಲಾದಷ್ಟು ಹಣವನ್ನು ಸಹಾಯ ಮಾಡುತ್ತೇನೆ ಎಂದಿದ್ದಾರೆ ವರ್ತೂರು.
ಹಳ್ಳಿಕಾರ್ ಹಸು ಪ್ರದರ್ಶನ
ಇದೇ ವೇಳೆ ಹಳ್ಳಿಕಾರ್ ಹಸುಗಳನ್ನು ಬಿಗ್‌ಬಾಸ್‌ನಲ್ಲಿ ಪ್ರದರ್ಶನ ಮಾಡುವ ಆಸೆ ಇತ್ತು. ಆದರೆ ನಾನು ಸ್ಪರ್ಧಿಸಿದ್ದ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ವಾಹಿನಿ ಜೊತೆ ಮಾತನಾಡಿ ಅದನ್ನು ತೆಗೆದುಕೊಂಡು ಹೋಗುತ್ತೇನೆ. ಅದರ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಕಾಂಪ್ರಮೈಸ್ ಆಗಲಿಲ್ಲ ಎಂದಿದ್ದ ವರ್ತೂರು
ಕೆಲವು ದಿನಗಳ ಹಿಂದೆ ಸಂತೋಷ್ ಅವರು, ತಮ್ಮ ಎಂಟು ಕೋಟಿ ರೂಪಾಯಿಯ ಮನೆಯನ್ನು ವೀಕ್ಷಕರಿಗೆ ತೋರಿಸಿದ್ದರು. ಇದಕ್ಕೆ ಏಳೆಂಟು ಕೋಟಿಯ ತಮ್ಮ ಮನೆಗೆ ಖರ್ಚಾಗಿದೆ ಎಂದಿದ್ದ ವರ್ತೂರು, ಇದನ್ನು ನನ್ನ ಅಮ್ಮನ ಆಸೆಯಂತೆ ಕಟ್ಟಿದ್ದೇನೆ. ಇಂಟೀರಿಯರ್ ಸೇರಿದಂತೆ ಡಿಸೈನ್ ಎಲ್ಲವೂ ಅಮ್ಮನ ಆಸೆಯಂತೆಯೇ ಇದೆ. ಯಾವುದರಲ್ಲಿಯೂ ಕಾಂಪ್ರಮೈಸ್ ಆಗಲಿಲ್ಲ ಎಂದಿದ್ದರು. ಗುಣಮಟ್ಟದ ವಸ್ತುಗಳನ್ನೇ ಬಳಸಲಾಗಿದೆ. ಸಂಪೂರ್ಣ ಟೀಕ್ವುಡ್ನಿಂದ ಮಾಡಲಾಗಿದೆ. ಅದರಲ್ಲಿಯೂ ದೇವರ ಮನೆಯನ್ನು ವಿಶೇಷ ರೀತಿಯಲ್ಲಿ ಕಟ್ಟಲಾಗಿದೆ ಎಂದು ದೇವರ ಮನೆಯನ್ನು ತೋರಿಸಿದ್ದರು.
ಇನ್ನೊಬ್ಬಳ ಎಂಟ್ರಿ?
ಇಂಥ ಬೃಹತ್ ಮನೆಯಲ್ಲಿ, ಅಮ್ಮ-ಮಗ ಇಬ್ಬರೇ ಇರುವ ಕಾರಣ, ಬೇಗ ಇನ್ನೊಬ್ಬಳ ಎಂಟ್ರಿ ಆಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಇದಾಗಲೇ ವರ್ತೂರು ಸಂತೋಷ್ ಅವರು, ಈ ಹಿಂದಿನ ಸಂದರ್ಶನವೊಂದರಲ್ಲಿ ತಾವು ಶೀಘ್ರದಲ್ಲಿ ಮತ್ತೊಂದು ಮದುವೆಯಾಗುವ ಬಗ್ಗೆ ತಿಳಿಸಿದ್ದರು.
ಮದುವೆ ಬಗ್ಗೆ ಸಂತೋಷ್
ನನ್ನ ಜೀವನದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇನೋ ಹೇಳ್ತಾರಲ್ಲ, ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ ಎಂದು. ಹಾಗೆ ಆಗಿದೆ ನನ್ನ ಜೀವನ. ಆದರೆ ನಾನು ಮುಂದಿನ ಹೆಜ್ಜೆ ಇಡುತ್ತಿದ್ದೇನೆ. ಮತ್ತೊಂದು ಮದುವೆಗೆ ಸಿದ್ಧನಾಗಿದ್ದೇನೆ. ಹುಡುಗಿಯೂ ನಮ್ಮ ಸಂಬಂಧಿಕಳೇ. ಅವಳ ಜೊತೆ ಒಡನಾಟವಿದೆ. ಶೀಘ್ರದಲ್ಲಿಯೇ ಮದುವೆಯಾಗುತ್ತೇವೆ ಎಂದಿದ್ದರು.