MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • 'ಥೂ ನಾಚಿಕೆ ಆಗ್ಬೇಕು ಅವರಿಗೆ' ಎನ್ನುತ್ತಲೇ Bigg Boss ಪೇಮೆಂಟ್​ ಬಗ್ಗೆ ರಿವೀಲ್​ ಮಾಡಿದ Vinay Gowda

'ಥೂ ನಾಚಿಕೆ ಆಗ್ಬೇಕು ಅವರಿಗೆ' ಎನ್ನುತ್ತಲೇ Bigg Boss ಪೇಮೆಂಟ್​ ಬಗ್ಗೆ ರಿವೀಲ್​ ಮಾಡಿದ Vinay Gowda

ಬಿಗ್​ಬಾಸ್​ 10ರ ನಂತರ ಸಖತ್ ಬೇಡಿಕೆಯಲ್ಲಿರುವ ನಟ ವಿನಯ್ ಗೌಡ, ಶೋನ ಸಂಭಾವನೆ ಕುರಿತ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಬಿಗ್​ಬಾಸ್​ನಿಂದ ತಮಗೆ ಪೇಮೆಂಟ್​ ಬಂದಿಲ್ಲ ಎಂದು ಹೇಳುತ್ತಿರುವವರಿಗೆ ಚಾಟಿ ಬೀಸಿರೋ ನಟ ವಿನಯ್​ ಹೇಳಿದ್ದೇನು ಕೇಳಿ… 

2 Min read
Author : Suchethana D
Published : Sep 25 2025, 05:07 PM IST
Share this Photo Gallery
  • FB
  • TW
  • Linkdin
  • Whatsapp
17
ಡಿಮಾಂಡ್​ನಲ್ಲಿರೋ ವಿನಯ್​ ಗೌಡ
Image Credit : our own

ಡಿಮಾಂಡ್​ನಲ್ಲಿರೋ ವಿನಯ್​ ಗೌಡ

ಬಿಗ್​ಬಾಸ್​​ 10ರ ಖ್ಯಾತಿಯ ವಿನಯ್​ ಗೌಡ ಬಿಗ್​ಬಾಸ್​ನಿಂದ ಬಂದ ಮೇಲೆಯೂ ಸಕತ್​ ಡಿಮಾಂಡ್​ ಕುದುರಿಸಿಕೊಂಡಿದ್ದಾರೆ. ಬಿಗ್​ಬಾಸ್​ನಲ್ಲಿ ಸದಾ ಜಗಳದಿಂದಲೇ ಫೇಮಸ್​ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್​ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೇ ರನ್ನರ್​ ಅಪ್​ ಆಗಿ ಮಿಂಚಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಗರಂ ಆದ ವಿನಯ್​ ಗೌಡ
Image Credit : our own

ಗರಂ ಆದ ವಿನಯ್​ ಗೌಡ

ಬಿಗ್​ಬಾಸ್​ಗೆ ಹೋದವರಿಗೆ ಸರಿಯಾದ ದುಡ್ಡು ಕೊಡುವುದಿಲ್ಲ ಎಂದು ಕೆಲವರು ಮಾತನಾಡುವುದು ಇದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿನಯ್​ ಗೌಡ ಅವರು ಈ ರೀತಿ ಹೇಳುವವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.ಹೀಗೆ ಮಾತನಾಡುವವರಿಗೆ ಕಾಮನ್​ ಸೆನ್ಸ್​ ಎನ್ನೋದೇ ಇಲ್ಲ. ಅದರಿಂದಲೇ ಫೇಮಸ್​ ಆಗಿದ್ದಾರೆ ಎನ್ನುವ ತಲೆ ಕೂಡ ಇರುವುದಿಲ್ಲ. ಇಂಥವರಿಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ ಎಂದು ಗರಂ ಆಗಿದ್ದಾರೆ.

Related Articles

Related image1
Vinay Gowda & Mokshita Pai: ಗುಡ್​ನ್ಯೂಸ್ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ- ಮೋಕ್ಷಿತಾ ಪೈ!
Related image2
10 ನಟಿಯರನ್ನು ತರಲು ವಿಜಯ್​ ಸೂರ್ಯಗೆ Bigg Boss Offer! ನಟ ಆಯ್ಕೆ ಮಾಡಿದ್ದು ಯಾರನ್ನು ನೋಡಿ
37
ಕಾಂಟ್ರಾಕ್ಟ್​ ಪ್ರಕಾರವೇ ಎಲ್ಲವೂ...
Image Credit : our own

ಕಾಂಟ್ರಾಕ್ಟ್​ ಪ್ರಕಾರವೇ ಎಲ್ಲವೂ...

ನಾವು ಬಿಗ್​ಬಾಸ್ ಮನೆಯೊಳಕ್ಕೆ ಹೋಗುವಾಗ ಯಾವ ರೀತಿ ಕಾಂಟ್ರಾಕ್ಟ್​ಗೆ ಸಹಿ ಹಾಕಿರುತ್ತೇವೋ ಅವೆಲ್ಲವೂ ಸಿಗುತ್ತದೆ. ಪೇಮೆಂಟ್​ ಕೂಡ ಸರಿಯಾಗಿಯೇ ಸಿಗುತ್ತದೆ. ಪೇಮೆಂಟ್​ ಸಿಗುವುದು ಸ್ವಲ್ಪ ವಿಳಂಬ ಆಗಬಹುದು ಅಷ್ಟೇ ಬಿಟ್ಟರೆ, ಹಣದ ವಿಷಯದಲ್ಲಿ ಯಾವುದೇ ರೀತಿಯ ಮೋಸ ಮಾಡುವುದಿಲ್ಲ. ಅಲ್ಲಿಂದಲೇ ಬಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ ವಿನಯ್ ಅವರು.

47
ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಸಿಕ್ಕಿದೆ...
Image Credit : our own

ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಸಿಕ್ಕಿದೆ...

ನನಗಂತೂ ಅವರು ಹೇಳಿದ್ದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚಿಗೇ ಹಣ ಸಿಕ್ಕಿದೆ ಎಂದು ವಿನಯ್​ ಗೌಡ ರಿವೀಲ್​ ಮಾಡಿದ್ದಾರೆ. ಪ್ರತಿ ವಾರವೂ ಹಣದ ಸಂದಾಯ ಆಗುತ್ತದೆ. ಅಷ್ಟೇ ಅಲ್ಲದೇ ಕ್ಯಾಶ್ ಪ್ರೈಸ್ ಗೆಲ್ಲುವ ಅವಕಾಶ ಇರುತ್ತದೆ, ಇದರ ಜೊತೆಗೆ ಪ್ರಾಯೋಜಿತ (Sponsored) ಕಾರ್ಯಕ್ರಮದಿಂದಲೂ ಸಾಕಷ್ಟು ದುಡ್ಡು ಬರುತ್ತದೆ ಎಂದಿರುವ ನಟ, ನಿಯಮದ ಪ್ರಕಾರ, TDS ಕಟ್​ ಆಗಿ ಬರುತ್ತದೆ ಅಷ್ಟೇ. ಅದನ್ನು ಬಿಟ್ಟರೆ ಪೂರ್ಣ ಹಣ ನಮ್ಮ ಕೈ ಸೇರುತ್ತದೆ ಎಂದಿದ್ದಾರೆ.

57
ವಿನಯ್ ಗೌಡ ಕುರಿತು...
Image Credit : our own

ವಿನಯ್ ಗೌಡ ಕುರಿತು...

ಇನ್ನು, ವಿನಯ್ ಗೌಡ (Bigg Boss Vinay Gowda) ಅವರಿಗೆ ಬಿಗ್​ಬಾಸ್​ನಿಂದ ಬಂದ ಮೇಲೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ.

67
ತೆಲುಗಿನ ಚಿತ್ರದಲ್ಲೂ ಮಾತುಕತೆ
Image Credit : our own

ತೆಲುಗಿನ ಚಿತ್ರದಲ್ಲೂ ಮಾತುಕತೆ

ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್​ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.

77
ವೆಬ್​ ಸೀರಿಸ್​ನಲ್ಲಿಯೂ ನಟನೆ
Image Credit : Instagram

ವೆಬ್​ ಸೀರಿಸ್​ನಲ್ಲಿಯೂ ನಟನೆ

ಕೆಲ ದಿನಗಳ ಹಿಂದೆ ಇವರು ಇದೇ ಬಿಗ್​ಬಾಸ್​​ನ ಮೋಕ್ಷಿತಾ ಪೈ (Mokshita Pai) ಜೊತೆ ಮಾಡುತ್ತಿರುವ ವೆಬ್​ಸೀರಿಸ್ ಕುರಿತು ಮಾತನಾಡಿದ್ದರು. ಧೃತಿ ಕ್ರಿಯೇಷನ್ಸ್​ನಲ್ಲಿ ನಿರ್ಮಾಣವಾಗುತ್ತಿರುವ ವೆಬ್​ ಸೀರಿಸ್​ ಇದಾಗಿದೆ. ಈಗಾಗಲೇ ಇವರ ಚಿಕ್ಕ ಕ್ಲಿಪ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕನ್ನಡ ಧಾರಾವಾಹಿ
ರಿಯಾಲಿಟಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
Entertainment: ₹2,000 ಸಂಬಳದಿಂದ ಸೂಪರ್‌ಸ್ಟಾರ್ ಪಟ್ಟಕ್ಕೆ! ಟಾಕ್ಸಿಕ್ ಚಿತ್ರದಲ್ಲೂ ಕಮಾಲ್ ಮಾಡಲಿದ್ದಾರೆ ಈ ಬಾಕ್ಸ್ ಆಫೀಸ್ ಕ್ವೀನ್!
Recommended image2
ಸಂಗೀತ ಸಮರದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಯಾರು? ಕೊನೆಗೂ ಹೊರಬಿತ್ತು ಉತ್ತರ!
Recommended image3
ಬಿಗ್ ಬಾಸ್ ಕರಿಬಸಪ್ಪ ಸಾಮಾನ್ಯ ವ್ಯಕ್ತಿಯಲ್ಲ ಸರ್ಕಾರಿ ನೌಕರ; 33ನೇ ವರ್ಷದ ಸೇವೆಗೆ ಕಾಲಿಟ್ಟ ಬಾಡಿ ಬಿಲ್ಡರ್!
Related Stories
Recommended image1
Vinay Gowda & Mokshita Pai: ಗುಡ್​ನ್ಯೂಸ್ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ- ಮೋಕ್ಷಿತಾ ಪೈ!
Recommended image2
10 ನಟಿಯರನ್ನು ತರಲು ವಿಜಯ್​ ಸೂರ್ಯಗೆ Bigg Boss Offer! ನಟ ಆಯ್ಕೆ ಮಾಡಿದ್ದು ಯಾರನ್ನು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved