BBK 12: ಅಭಿಷೇಕ್ ಕಾಲೆಳೆಯೋಕೆ ಬಂದ ಕರಿಬಸಪ್ಪಗೆ ನೀತಿ ಪಾಠ ಹೇಳಿದ ಅಶ್ವಿನಿ

Published : Oct 02, 2025, 12:48 PM IST

Bigg Boss team task loss: ಬಿಗ್‌ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ನಲ್ಲಿ ಜಂಟಿ ತಂಡ ಸೋತಿದ್ದಕ್ಕೆ ಕರಿಬಸಪ್ಪ ಮತ್ತು ಅಭಿಷೇಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಸೋಲಿನ ಹತಾಶೆಯಿಂದ ಅಭಿಷೇಕ್ ವಿರುದ್ಧ ಕೊಂಕು ನುಡಿದ ಕರಿಬಸಪ್ಪಗೆ, ಅಶ್ವಿನಿ ಮಧ್ಯ ಪ್ರವೇಶಿಸಿ ಬುದ್ಧಿವಾದ ಹೇಳಿದ್ದಾರೆ.

PREV
15
ಎರಡು ಗುಂಪು

ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪುಗಳಿದ್ದು, ಇವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಗುಂಪು ಆಟದ ಜೊತೆಯಲ್ಲಿ ವೈಯಕ್ತಿಕವಾಗಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ. ಈಗಾಗಲೇ ಬಿಗ್‌ಬಾಸ್ ನೀಡಿದ ಮೂರು ಟಾಸ್ಕ್‌ಗಳಲ್ಲಿ ಜಂಟಿ ತಂಡ ಎರಡರಲ್ಲಿ ಸೋತಿದೆ. ಮೂರನೇ ಟಾಸ್ಕ್‌ ಫಲಿತಾಂಶ ಇಂದು ತಿಳಿಯಲಿದೆ.

25
ಬಿಗ್‌ಬಾಸ್ ಟಾಸ್ಕ್

ಈ ಹಿಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳು ಡ್ರಮ್ ಮೇಲೆ ನಿಂತುಕೊಂಡು ಹಗ್ಗದ ಸಹಾಯದಿಂದ ಅಂಚಿಗೆ ತಲುಪಬೇಕಾಗಿತ್ತು. ಜಂಟಿ ಟೀಂನವರು ಜೊತೆಯಾಗಿ ಮತ್ತು ಒಂಟಿ ಟೀಂನವರು ಒಬ್ಬರೇ ಈ ಆಟ ಆಡಬೇಕಿತ್ತು. ಯಾರು ಆಟ ಆಡಬೇಕೆಂದು ತಂಡದವರು ಕುಳಿತು ಚರ್ಚೆ ಮಾಡುತ್ತಿದ್ದರು.

35
ಕರಿಬಸಪ್ಪ

ಜಂಟಿ ಟೀಂನಲ್ಲಿರುವ ಕರಿಬಸಪ್ಪ ಆಟ ಆಡಲು ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಭಿಷೇಕ್, ಡ್ರಮ್ ಮೇಲೆ ನಿಂತು ಅದನ್ನು ಉರುಳಿಸುತ್ತಾ ಹೋಗಬೇಕಾಗುತ್ತದೆ. ಆದ್ದರಿಂದ ತೂಕ ಕಡಿಮೆಯುಳ್ಳವರು ಆಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೆ ಗಿಲ್ಲಿನಟ-ಕಾವ್ಯ ಮತ್ತು ಮಾಳು-ಸ್ಪಂದನಾ ಜಂಟಿ ತಂಡದ ಪರವಾಗಿ ಆಡಿದರು.

45
ಧನುಷ್ ಮತ್ತು ಧ್ರವಂತ್

ಒಂಟಿ ತಂಡದ ಪರವಾಗಿ ಧನುಷ್ ಮತ್ತು ಧ್ರವಂತ್ ಆಡಿದರು. ಈ ಎರಡನೇ ಆಟದಲ್ಲಿ ಒಂಟಿ ತಂಡ ಜಯಶಾಲಿಯಾಯ್ತು. ಸೋಲಿನ ಹತಾಶೆಯಲ್ಲಿದ್ದ ಕರಿಬಸಪ್ಪ, ಕೊಂಕು ಮಾತುಗಳಲ್ಲಿ ಅಭಿಷೇಕ್‌ ಅವರ ಕಾಲೆಳೆಯಲು ಪ್ರಯತ್ನಿಸಿದರು. ಈ ಮೂಲಕ ತಮ್ಮನ್ನು ಆಟದಿಂದ ಹೊರಗಿಟ್ಟಿದ್ದಕ್ಕೆ ಅಭಿಷೇಕ್ ಮೇಲೆ ಕರಿಬಸಪ್ಪ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ? ಗರಂ ಆದ ಗಿಲ್ಲಿ ನಟ

55
ಅಶ್ವಿನಿ ಎಸ್‌ಎನ್

ಈ ವೇಳೆ ಇವರಿಬ್ಬರ ಮಧ್ಯೆ ಪ್ರವೇಶಿಸಿದ ಅಶ್ವಿನಿ ಎಸ್‌ಎನ್, ಒಂದು ವೇಳೆ ಗೆದ್ದಿದ್ದರೆ ಎಲ್ಲರೂ ಜೊತೆಯಾಗಿ ಖುಷಿಪಡುತ್ತಿದ್ದೇವೆ. ಸೋತ ಕಾರಣಕ್ಕೆ ಒಬ್ಬರನ್ನು ದೂಷಿಸೋದು ಸರಿಯಲ್ಲ ಎಂದು ಕರಿಬಸಪ್ಪ ಅವರಿಗೆ ನೀತಿಪಾಠ ಮಾಡಿದರು. ಈ ಮೂಲಕ ತಮ್ಮ ಜಂಟಿಯಾಗಿರುವ ಅಭಿಷೇಕ್ ಪರವಾಗಿ ನಿಂತುಕೊಂಡರು.

ಇದನ್ನೂ ಓದಿ: BBK 12: ಬಿಗ್‌ ಬಾಸ್‌ ಮನೆಯಲ್ಲಿ ಬಂಪರ್‌ ಲಾಟರಿ ಹೊಡೆದ ಮಲ್ಲಮ್ಮ; ಇದೆಲ್ಲ ಒಂಟಿಗಳ ಕೃಪೆ!

Read more Photos on
click me!

Recommended Stories