ತಂಗಿಯರ ಸಂಸಾರ ಭದ್ರವಾಗುವ ಹೊತ್ತಿಗೆ ಅಣ್ಣಯ್ಯನ ಸುಖ ಸಂಸಾರವೇ ಛಿದ್ರ-ಛಿದ್ರ!

Published : Oct 02, 2025, 12:37 PM IST

Paaru and Shivu divorce: ಅತ್ತೆಯ ಮನೆಯಲ್ಲಿ ಕಣ್ಣೀರು ಹಾಕದೆ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ತಿದ್ದಾರೆ ಅಣ್ಣಂದಿರ ಇಬ್ಬರೂ ತಂಗಿಯರಾದ ರಶ್ಮಿ, ರಾಣಿ. ಆದರೀಗ ಅಣ್ಣ ಶಿವು ಸಂಸಾರದಲ್ಲಿಯೇ ಬಿರುಕು ಕಾಣುತ್ತಿದೆ.

PREV
16
ನಿಟ್ಟುಸಿರು ಬಿಟ್ಟಿದ್ದ ವೀಕ್ಷಕರು

'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು ತಂಗಿಯರು ತಮ್ಮ ಸಂಸಾರ ಭದ್ರ ಮಾಡಿಕೊಳ್ತಿದ್ದ ಹಾಗೆ ಇತ್ತ ಶಿವು ಸುಖ ಸಂಸಾರ ಛಿದ್ರವಾಗುವ ಹಾಗೆ ಕಾಣುತ್ತಿದೆ. ಹೌದು. ಮೊನ್ನೆಮೊನ್ನೆಯಷ್ಟೇ ತನಗೇ ತಿಳಿಯದಂತೆ ಅಮ್ಮ ಶಾರದಮ್ಮನ ಕಾಪಾಡಿದ ಶಿವು. ಬಿಡು ಅಮ್ಮ-ಮಗ ಇನ್ನು ಒಂದಾಗುತ್ತಿದ್ದಾರೆ ಎಂದು ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದರು.

26
ಟಾಂಗ್ ಕೊಡ್ತಿದ್ದಾಳೆ ರಾಣಿ

ಇತ್ತ ರಾಣಿ ಕೂಡ ಅತ್ತೆ ಮನೆಯಲ್ಲಿ ಆ ಅಜ್ಜಿ, ಅಕ್ಕ, ಭಾವ ಕೊಡುವ ಕಾಟದ ವಿರುದ್ಧ ಸಿಡಿದೆದ್ದು, ಸರಿಯಾಗಿಯೇ ಟಾಂಗ್ ಕೊಡ್ತಿದ್ದಾಳೆ. ಅತ್ತೆಯ ಮನೆಯಲ್ಲಿ ಕಣ್ಣೀರು ಹಾಕದೆ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ತಿದ್ದಾರೆ ಅಣ್ಣಂದಿರ ಇಬ್ಬರೂ ತಂಗಿಯರಾದ ರಶ್ಮಿ, ರಾಣಿ. ಅಂದು ರಶ್ಮಿ ಕೂಡ ಗಂಡ ಸೀನನ ತಂಟೆಗೆ ಬಂದ ಪಿಂಕಿಗೆ ಸರಿಯಾಗಿಯೇ ಗ್ರಹಚಾರ ಬಿಡಿಸಿದ್ದಳು.

36
ಬಿರುಗಾಳಿ ಎದ್ದೇಳಲು ಕಾರಣ ಶಿವು ಫ್ಲಾಶ್ ಬ್ಯಾಕ್

ಆದರೀಗ ಅಣ್ಣ ಶಿವು ಸಂಸಾರದಲ್ಲಿಯೇ ಬಿರುಕು ಕಾಣುತ್ತಿದೆ. ಅಯ್ಯೋ ಇದೇನಾಯ್ತು ಗಂಡ-ಹೆಂಡತಿ ಇಬ್ಬರೂ ಚೆನ್ನಾಗಿದ್ದೀರಲ್ಲ ಅಂತೀರಾ?. ಆದರೆ ಇಲ್ಲಿ ಇವರಿಬ್ಬರ ಮಧ್ಯೆ ಬಿರುಗಾಳಿ ಎದ್ದೇಳಲು ಕಾರಣ ಶಿವು ಫ್ಲಾಶ್ ಬ್ಯಾಕ್. ಬ್ಯಾಕ್‌ ಟು ಬ್ಯಾಕ್ ಶಿವು ಹಳೆಯ ಇತಿಹಾಸವನ್ನ ಬಗೆದು ಬಗೆದು ತೋರಿಸುತ್ತಿದ್ದಾರೆ ಡೈರೆಕ್ಟರ್. ಅಂದ್ರೆ ನಾವಂದುಕೊಂಡ ಹಾಗೆ ಶಿವು ಸಾಧುವಲ್ಲ, ದೊಡ್ಡ ರೌಡಿ ಎಂಬಂತೆ ಬಿಂಬಿಸಲಾಗಿದೆ.

46
ಪಾರು ಮನವೊಲಿಸಲು ಪ್ರಯತ್ನ

ಇದು ಈಗ ಯಾವ ಲೆವೆಲ್‌ಗೆ ಹೋಗಿದೆ ಎಂದರೆ ಶಿವು-ಪಾರು ಮಧ್ಯೆಯೇ ಒಡಕು ತಂದಿಟ್ಟಿದೆ. ಅಂದರೆ ಪಾರುಗೆ ಶಿವು ಇತಿಹಾಸ ಗೊತ್ತಿಲ್ಲ. ಪೊಲೀಸರ ಮೂಲಕ ತನ್ನ ಗಂಡ ರೌಡಿ ಎಂದು ತಿಳಿದ ಪಾರು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಶಿವುಗೆ ಏನು ಹೇಳಬೇಕೆಂದು ತಿಳಿಯದೆ ಶಾಕ್ ಆಗಿದ್ದಾನೆ. ಪಾರು ಮನವೊಲಿಸಲು ಪ್ರಯತ್ನಿಸಿದ್ದಾನೆ.

56
ಪೊಲೀಸರು ಶಿವು ಹಿಂದೆ ಬಿದ್ದಿದ್ದಾರಾ?

ಆದರೆ ಇದು ಶಿವುಗೆ ಬಿದ್ದ ಕನಸಾ? ಅಥವಾ ನಿಜವಾಗಲೂ ಪೊಲೀಸರು ಶಿವು ಹಿಂದೆ ಬಿದ್ದಿದ್ದಾರಾ?. ಇದರಲ್ಲಿ ಮಾವ ವೀರಭದ್ರನ ಕೈವಾಡವಿದೆಯಾ? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ. ಆದರೆ ವೀಕ್ಷಕರು ಮಾತ್ರ ಶಿವು ಫ್ಲಾಶ್ ಬ್ಯಾಕ್ ನೋಡಿ ಕೋಟಿಗೊಬ್ಬ ಸಿನಿಮಾ ತರಹವಿದೆ ಎಂದು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.

66
ವೀಕ್ಷಕರು ಹೇಳಿದ್ದೇನು?

*ಶಿವು ಅವರ ಫ್ಲಾಶ್ ಬ್ಯಾಕ್ ಸ್ಟೋರಿ ಬೇಡವಾಗಿತ್ತು, ದೇವಿ ಪುತ್ರ ನಾ ಹಾಗೆ ಚೆನ್ನಾಗಿತ್ತು . *ಕೋಟಿಗೊಬ್ಬ ಸಿನೆಮಾ ತರ ತೋರಿಸುತ್ತಿದ್ದೀರ, ಇನ್ನೂ ಧಾರವಾಹಿ ನೋಡೋಕೆ ಬೇಜಾರು .
*ಈಗ ಇವ್ಳು ದೂರ ಆಗ್ತಾಳೆ ಮತ್ತೆ ಇವರಿಬ್ಬರೂ ಒಂದಾಗೋದಕ್ಕೆ ಎರಡು ವರ್ಷ ಬೇಕಾಗುತ್ತೆ.
*ರಾಣಿ ರಾಕ್ ,ಶಿವು ಅಣ್ಣ ಕನುಸು ಕಾಣ್ತಾ ಇದ್ಯಾ
*ಡೈವೋರ್ಸ್ ಕೊಡು ... ಸೀರಿಯಲ್ದು ಹೊಸ ರೋಗ ಇವಾಗಿನ್ದು
*ಇದು ಯಾಕೋ ಕೊಟ್ಟಿಗೊಬ್ಬ ಮೂವಿ ತರ ಇದೆ. ಅಣ್ಣ ಈಗಲಾದ್ರೂ ನಿಜ ಹೇಳಿ ಯಾರ್ ನೀವು
*ಇರ್ರೋ ಒಳ್ಳೇ ಧಾರವಾಹಿ ಅದಗೇಡಿಸಿ. ಹಳ್ಳ ಹಿಡಿಸ್ತಿದಿರಾ. ಎಂದೆಲ್ಲಾ ವೀಕ್ಷಕರು  ಹೇಳಿರುವುದನ್ನ ನೀವಿಲ್ಲಿ ನೋಡಬಹುದು. 

Read more Photos on
click me!

Recommended Stories