Kannada Serials: ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​

Published : Dec 12, 2025, 02:46 PM IST

ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್​ಬಿ'ಯ ಭಾರ್ಗವಿ, ಜೀ ಕನ್ನಡದ 'ಕರ್ಣ' ಸೀರಿಯಲ್​ನ ನಿಧಿ ಸುಳ್ಳು ಆರೋಪಗಳ ಮೇಲೆ ಜೈಲು ಸೇರಿದ್ದಾರೆ. ಈ ಹಿಂದೆ 'ಬ್ರಹ್ಮಗಂಟು' ಧಾರಾವಾಹಿಯ ದೀಪಾ ಕೂಡ ಇದೇ ರೀತಿ ಅರೆಸ್ಟ್ ಆಗಿದ್ದಳು. ಧಾರಾವಾಹಿಗಳಲ್ಲಿ ನಾಯಕಿಯರು ಸಂಕಷ್ಟಕ್ಕೆ ಸಿಲುಕುತ್ತಿರುವ ಪ್ರಸಂಗಗಳು ನಡೆಯುತ್ತಿವೆ.

PREV
17
ಭಾರ್ಗವಿ ಅರೆಸ್ಟ್​!

ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್​ಎಲ್​ಬಿ (Bhargavi LLB) ಸೀರಿಯಲ್​ನಲ್ಲಿ ಕೊ*ಲೆಯಾಗಿರುವ ಸಂಧ್ಯಾಗೆ ನ್ಯಾಯ ಕೊಡಿಸಲು ಹೋಗಿ ಭಾರ್ಗವಿನೇ ಜೈಲುಪಾಲಾಗಿದ್ದಾಳೆ. ಸಂಧ್ಯಾ ಕೋರ್ಟ್​ ಮುಂದೆ ಪ್ರತ್ಯಕ್ಷಳಾಗಿ ಭಾರ್ಗವಿ ವಿರುದ್ಧವೇ ಸುಳ್ಳು ಆರೋಪ ಮಾಡಿರುವ ಕಾರಣ, ಭಾರ್ಗವಿಯನ್ನು ಜೈಲಿಗೆ ಸೇರಿಸಲಾಗಿದೆ.

27
ಭಾರ್ಗವಿ ಅಲ್ಲೋಲ ಕಲ್ಲೋಲ

ಈಕೆ ಫೇಕ್​ ಸಂಧ್ಯಾ ಎನ್ನುವುದು ವೀಕ್ಷಕರಿಗೆ ತಿಳಿದಿದೆ. ಅದನ್ನು ಸಾಬೀತು ಮಾಡಲು ಇನ್ನಷ್ಟು ವರ್ಷಗಳು ಬೇಕಾಗುವ ಕಾರಣ, ಸದ್ಯ ಭಾರ್ಗವಿ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ವಿಲನ್​ ಆಗಿರೋ ಅಕ್ಕ ಬೃಂದಾ ಮತ್ತು ಮಾವ ಪಾಟೀಲನ ಕೈ ಮೇಲಾಗಿದೆ.

37
ನಿಧಿ ಜೈಲುಪಾಲು

ಇದು ಭಾರ್ಗವಿ ಸ್ಟೋರಿಯಾದರೆ, ಅತ್ತ ಜೀ ಕನ್ನಡದ ಕರ್ಣ ಸೀರಿಯಲ್​​ (Karna Serial) ನಲ್ಲಿ ನಿಧಿ ಜೈಲುಪಾಲಾಗಿದ್ದಾಳೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ ಟ್ರ್ಯಾಪ್​ ಆಗಿದ್ದಾಳೆ. ಕುರುಡಿ ವೇಷದಲ್ಲಿ ಬಂದಿದ್ದ ಮೋಸಗಾತಿಯಿಂದಾಗಿ ನಿಧಿ ಪೊಲೀಸರ ಕೈಯಲ್ಲಿ ರೆಡ್​ಲೈಟ್​ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾಳೆ.

47
ರಮೇಶ್​ ಕುತಂತ್ರ

ಇದು ವಿಲನ್​ಗಳಾದ ರಮೇಶ್​ ಮತ್ತು ಸಂಜಯ್​ ಮಾಡಿಸಿರುವುದು ಎಲ್ಲರಿಗೂ ತಿಳಿದಿದ್ದರೂ ಸದ್ಯ ನಿಧಿಯನ್ನು ಕಾಪಾಡಲು ಕರ್ಣ ಬಂದಿಲ್ಲ. ಅವಳ ಸ್ಥಿತಿ ಜೈಲಿನಲ್ಲಿ ಶೋಚನೀಯವಾಗಿದೆ.

57
ಅಕ್ಕನಿಂದ ಅರೆಸ್ಟ್​

ಅದಕ್ಕೂ ಮುನ್ನ ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ದೀಪಾ ಅರೆಸ್ಟ್​ ಆಗಿ ಜೈಲಿಗೆ ಹೋಗಿದ್ದಳು. ಅಲ್ಲಿಯೂ ಮೋಸದಿಂದ ಅವಳನ್ನು ಅರೆಸ್ಟ್​ ಮಾಡಿಸಲಾಗಿತ್ತು.

67
ಸಹಾಯಕ್ಕೆ ಬಂದ ಶ್ರಾವಣಿ

ದೀಪಾ ಮತ್ತು ದಿಶಾ ಇಬ್ಬರೂ ಒಬ್ಬರೇ ಎನ್ನೋದನ್ನು ಅರಿತಿರುವ ಆಕೆಯ ಅಕ್ಕ ರೂಪಾ, ಹಣದ ಕಳ್ಳತನದ ಆರೋಪ ಹೊರಿಸಿ ಪೊಲೀಸರಿಗೆ ಕಂಪ್ಲೇಂಟ್​ ಕೊಟ್ಟು ಅರೆಸ್ಟ್ ಮಾಡಿಸಿದ್ದಳು. ಅವಳನ್ನು ಬಿಡಿಸಿಕೊಂಡು ಹೋಗಲು ಶ್ರಾವಣಿ ಸುಬ್ರಹ್ಮಣ್ಯ (Shravani Subrahmanya Serial) ಸೀರಿಯಲ್​ ಶ್ರಾವಣಿ ಬಂದು ಬಿಡಿಸಿಕೊಂಡು ಹೋಗಿದ್ದಾಳೆ.

77
ಗ್ರಹಗತಿ ಚೆನ್ನಾಗಿಲ್ಲ

ಒಟ್ಟಿನಲ್ಲಿ ಚಾನೆಲ್​ಗಳು ಬೇರೆ ಬೇರೆಯಾದರೂ ನಾಯಕಿಯರು ಮಾತ್ರ ಸುಳ್ಳು ಆರೋಪಗಳ ಮೇಲೆ ಅರೆಸ್ಟ್ ಆಗ್ತಿದ್ದಾರೆ. ಯಾಕೋ ನಾಯಕರಿಗೆ ಸದ್ಯ ಗ್ರಹಗತಿ ಚೆನ್ನಾಗಿಲ್ಲ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

Read more Photos on
click me!

Recommended Stories