Bigg Boss Kannada: ಅಶ್ವಿನಿ ಗೌಡ ಮಾತಿಗೆ ಮಾಳು ಕೂದಲಿಗೆ ಬಿತ್ತು ಕತ್ತರಿ! ಈ ವಾರ ಮನೆಯಿಂದ ಹೋಗೋರು ಯಾರು?

Published : Dec 12, 2025, 01:11 PM IST

ಬಿಗ್​ಬಾಸ್​ 74ನೇ ದಿನಕ್ಕೆ ಕಾಲಿಟ್ಟಿದ್ದು, ಟಾಸ್ಕ್​ಗಳು ತೀವ್ರಗೊಂಡಿವೆ. ಅಶ್ವಿನಿ ಗೌಡ ಅವರ ಸಲಹೆಯಂತೆ, ಟಾಸ್ಕ್​ವೊಂದರ ಭಾಗವಾಗಿ ಸ್ಪರ್ಧಿ ಮಾಳು ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಈ ವಾರ ಏಳು ಮಂದಿ ನಾಮಿನೇಟ್ ಆಗಿರುವ ನಡುವೆಯೇ ಮಾಳು ಅವರ ಈ ಹೊಸ ಲುಕ್​ ಗಮನ ಸೆಳೆದಿದೆ.

PREV
17
ಟಾಸ್ಕ್​ಗಳ ಭರಾಟೆ

ಬಿಗ್​ಬಾಸ್​ನಲ್ಲಿ ಇದೀಗ ಟಾಸ್ಕ್​ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಇದಾಗಲೇ ಬಿಗ್​ಬಾಸ್​ 74ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನು ಷೋ ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಇಂಥ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಕ್ಕೆ ಹೋಗಲು ಇಷ್ಟ ಪಡುವುದಿಲ್ಲ. ತಮ್ಮ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ.

27
ಏಳು ಮಂದಿ ನಾಮಿನೇಟ್​

ಈ ವಾರ ಗಿಲ್ಲಿ ನಟ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ, ಅಶ್ವಿನಿ, ರಾಶಿಕಾ ಮನೆಯಿಂದ ಹೊರಕ್ಕೆ ಹೋಗುವವರಲ್ಲಿ ನಾಮಿನೇಟ್ ಆಗಿದ್ದಾರೆ. ಈ ಏಳು ಮಂದಿ ಪೈಕಿ ಯಾರು ಔಟ್ ಆಗುತ್ತಾರೋ ಕಾದು ನೋಡಬೇಕಿದೆ.

37
ಅಶ್ವಿನಿ ಗೌಡ ಸಲಹೆ

ಆದರೆ ಇದರ ನಡುವೆಯೇ ಮಾಳುಗೆ ಹೊಸ ಲುಕ್​ ಬಂದಿದೆ. ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಅಶ್ವಿನಿ ಗೌಡ (Bigg Boss Ashwini Gowda) ಅವರ ಮಾತಿನ ಮೇರೆಗೆ ಈ ಕಟಿಂಗ್​ ಮಾಡಲಾಗಿದೆ.

47
ಎರಡು ಟೀಮ್​

ಇದಾಗಲೇ ಬಿಗ್​ಬಾಸ್​​ ಮನೆಯಲ್ಲಿ, ಟಾಸ್ಕ್​ ಸಂಬಂಧ ಎರಡು ಗುಂಪು ಮಾಡಲಾಗಿದೆ. ಒಂದು ರಜತ್‌ ಟೀಂ ಇನ್ನೊಂದು ಅಶ್ವಿನಿ ಗೌಡ ಟೀಂ, ರಜತ್​ ಅವರ ಗುಂಪಿನಲ್ಲಿ ಧನುಷ್‌, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದು, ಬಾಕಿ ಇರುವ ಸ್ಪರ್ಧಿಗಳು ಅಶ್ವಿನಿ ಗೌಡ ಗುಂಪಿನಲ್ಲಿ ಇದ್ದಾರೆ.

57
ಒಂದು ಗುಂಪು ವಿಲನ್​

ಒಂದು ಗುಂಪಿನ ಸ್ಪರ್ಧಿಗಳನ್ನು ವಿಲನ್​ ಮಾಡಲಾಗಿದೆ. ಅವರು ಈಗ ಇನ್ನೊಂದು ಟೀಮ್​ಗೆ ಕಷ್ಟ ಕೊಡಬೇಕಿದೆ. ಕಠಿಣ ಟಾಸ್ಕ್​ಗಳನ್ನೂ ನೀಡಬೇಕಿದೆ. ಆದ್ದರಿಂದ ಪರಸ್ಪರ ಎರಡೂ ಟೀಮ್​ಗಳು ಜಿದ್ದಿಗೆ ಬಿದ್ದವರಂತೆ ಕಠಿಣ ಟಾಸ್ಕ್​ ಕೊಡುತ್ತಿದ್ದಾರೆ.

67
ಕಾವ್ಯಾ ಕೂದಲಿಗೆ ಬಣ್ಣ

ನಿನ್ನೆ ಕಾವ್ಯಾ ಶೈವ (Bigg Boss Kavya Shaiva) ಅವರ ಕೂದಲಿಗೆ ಬಣ್ಣ ಹಾಕಲಾಗಿದ್ದು, ರಜತ್​ಗೆ ಟ್ಯಾಟೂ ಹಾಕಲಾಗಿತ್ತು. ಆದರೆ ಇದೀಗ ಮಾಳು ಅವರ ಕೂದಲು ಕಟ್​ ಮಾಡುವಂತೆ ಅಶ್ವಿನಿ ಗೌಡ ಹೇಳಿದ್ದರಿಂದ ಕಟ್​ ಮಾಡಲಾಗಿದೆ.

77
ಹೇಗಿದೆ ಹೊಸ ಲುಕ್​?

ಮಾಳು ಹೊಸ ಲುಕ್​ ಹೇಗಿದೆ ಎನ್ನುವ ಹೆಸರಿನಲ್ಲಿ ಈ ಪ್ರೊಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಾಳು ಅವರನ್ನು ವಿಶೇಷ ರೀತಿಯಲ್ಲಿ ನೋಡಬಹುದಾಗಿದೆ.

Read more Photos on
click me!

Recommended Stories