Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!

Published : Dec 12, 2025, 02:21 PM IST

ಶಕುಂತಲಾಳ ಭಯದಿಂದ ದೂರಾಗಿರುವ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು, ಜೈದೇವ್‌ನಿಂದ ಮೋಸಹೋದ ಅಜ್ಜಿ ಸಾಯುವ ನಾಟಕವಾಡಿದ್ದಾಳೆ. ತನ್ನ ಕೊನೆಯಾಸೆಯ ನೆಪದಲ್ಲಿ ದಂಪತಿಯನ್ನು ಮತ್ತೆ ಒಂದು ಮಾಡಲು ಅಜ್ಜಿ ಪಣತೊಟ್ಟಿದ್ದು, ಈ ಪ್ಲ್ಯಾನ್ ಯಶಸ್ವಿಯಾಗುವುದೇ ಎಂದು ಕಾದುನೋಡಬೇಕಿದೆ.

PREV
17
ದಂಪತಿ ಒಂದು ಮಾಡುವಲ್ಲಿ ವಿಫಲ

ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್​ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್​ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್​ ಜೊತೆ ಬರಲು ರೆಡಿನೇ ಇಲ್ಲ. ಗೌತಮ್​ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ.

27
ಅಜ್ಜಿ ಆಸ್ತಿ ಕಬಳಿಕೆ

ಅದೇ ಇನ್ನೊಂದೆಡೆ, ಅಜ್ಜಿಯ ಎಲ್ಲಾ ಆಸ್ತಿಗಳನ್ನು ಕಬಳಿಸಿ ಜೈದೇವ್​ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ. ಅಜ್ಜಿಯ ಕಷಾಯದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಹೆಬ್ಬೆರಳು ಅಚ್ಚು ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾನೆ.

37
ಆನಂದ್​ಗೆ ವಿಷ್ಯ ತಿಳಿಸಿದ ಲಕ್ಷ್ಮೀಕಾಂತ

ಈ ವಿಷ್ಯ ಮಾವ ಲಕ್ಷ್ಮೀಕಾಂತನಿಂದ ಆನಂದ್​ಗೆ ಗೊತ್ತಾಗಿದೆ. ಅಜ್ಜಿಯನ್ನು ಹುಡುಕಿ ಅವರು ವೃದ್ಧಾಶ್ರಮಕ್ಕೆ ಹೋಗಿದ್ದಾರೆ. ಆಮೇಲೆ ಅಜ್ಜಿಗೂ ಗೌತಮ್​ ಮತ್ತು ಭೂಮಿಕಾ ವಿಷಯ ತಿಳಿದಿದೆ.

47
ಲವ್​ ಅಜ್ಜಿ

ಅಜ್ಜಿ ಅಂದ್ರೆ ಸುಮ್ಮನೇ ಅಲ್ಲ. ಈ ಮೊದಲೂ ಇವರಿಬ್ಬರನ್ನು ಒಂದು ಮಾಡಿದ್ದು ಇದೇ ಅಜ್ಜಿ. ಈಗಲೂ ಒಂದು ಮಾಡುವ ಪಣ ತೊಟ್ಟಿದ್ದಾಳೆ.

57
ಸಾಯುವ ನಾಟಕ

ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್​ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್​ಗೆ ಹೇಳಿದ್ದಾಳೆ.

67
ಇಬ್ಬರೂ ಬರೋದು ಗ್ಯಾರೆಂಟಿ

ಅಜ್ಜಿ ಎಂದರೆ ಇಬ್ಬರಿಗೂ ಪ್ರೀತಿ. ಆಕೆ ಸಾಯುವ ಹಂತದಲ್ಲಿ ಇದ್ದಾಳೆ ಎಂದು ತಿಳಿದರೆ ಇಬ್ಬರ ಕಥೆಯೂ ಅಷ್ಟೇ. ಅಜ್ಜಿಯ ಕೊನೆಯ ಆಸೆಯ ನೆಪದಲ್ಲಿ ಗೌತಮ್​ ಮತ್ತು ಭೂಮಿಕಾ ಒಂದಾಗಲೇ ಬೇಕಿದೆ.

77
ಸೀರಿಯಲ್​ ಮುಗಿದಂತೆ!

ಎಲ್ಲರೂ ಒಂದಾದರೆ, ಎಲ್ಲರೂ ಸೇರಿ ಜೈದೇವ್​ ಮತ್ತು ಶಕುಂತಲಾಗೆ ಬುದ್ಧಿ ಕಲಿಸುವಲ್ಲಿ ಸಂದೇಹವೇ ಇಲ್ಲ. ಒಟ್ಟಿಗೇ ಸೇರಿ ದೊಡ್ಡ ಪ್ಲ್ಯಾನ್​ ಮಾಡಿ ವಿಲನ್​ಗಳನ್ನು ಮುಗಿಸುವುದು ದಿಟ. ಅಷ್ಟಾದರೆ ಅಲ್ಲಿಗೆ ಸೀರಿಯಲ್​ ಮುಗಿದಂತೆ!

Read more Photos on
click me!

Recommended Stories