ವೇದಿಕೆಗಳ ಮೇಲೆ ಹುಡುಗಿಯರ ಗಾಳ ಹಾಕೋ ಗಿಲ್ಲಿ ನಟಂಗೆ ಮದ್ವೆ ಯಾವಾಗ? ಕೊನೆಗೂ ಬಾಯ್ಬಿಟ್ಟ ನಟ

Published : Sep 30, 2025, 10:25 PM IST

ಕಾಮಿಡಿ ಗಿಲ್ಲಿಗಿಲ್ಲಿ ಖ್ಯಾತಿಯ ನಟರಾಜ್ ಅಲಿಯಾಸ್ ಗಿಲ್ಲಿ ನಟ, ತಮ್ಮ ಮದುವೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಸದ್ಯಕ್ಕೆ ಮದುವೆ ಯೋಚನೆ ಇಲ್ಲವೆಂದಿರುವ ಅವರು, ಸಾಕಷ್ಟು ಸಂಪಾದನೆ ಮಾಡಿದ ನಂತರವೇ ಸಂಸಾರದ ಬಗ್ಗೆ ಯೋಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

PREV
16
ಕಾಮಿಡಿ ಗಿಲ್ಲಿ

ಗಿಲ್ಲಿ ನಟ ಎಂದ್ರೆ ಸಾಕು ಟಿವಿ ವೀಕ್ಷಕರ ಮುಖದಲ್ಲಿ ಒಂದು ಕ್ಷಣ ನಗುವಿನ ಅಲೆ ಏಳುತ್ತದೆ. ಇವರ ನಿಜವಾದ ಹೆಸರು ನಟರಾಜ್. ಕನ್ನಡ ಕಿರುತೆರೆಯಲ್ಲಿ ಪ್ರಾಪರ್ಟಿ ಕಾಮಿಡಿಯಿಂದಲೇ ಫೇಮಸ್ ಆದ ನಟ ಇವರು. ಪಂಚಿಂಗ್ ಡೈಲಾಗ್‌ಗಳ ಮೂಲಕ ಗಿಲ್ಲಿ ಕಿರುತೆರೆ ವೀಕ್ಷಕರ ಮನಗೆಲ್ಲುತ್ತಲೇ ಇದ್ದಾರೆ. ಕಾಮಿಡಿ ಷೋ ಹಾಗೂ ರಿಯಾಲಿಟಿ ಶೋಗಳಲ್ಲಿಯೂ ಸಾಕಷ್ಟು ತರ್ಲೆಮಾಡುತ್ತಲೇ, ಅಲ್ಲಿಯ ನಟಿಯರ ಜೊತೆ ಡವ್​ ಮಾಡುತ್ತಲೇ ಫೇಮಸ್​ ಆದವರು. ಇದೀಗ ಬಿಗ್​ಬಾಸ್​​ 12ರ ಮನೆಯಲ್ಲಿಯೂ ಹವಾ ಸೃಷ್ಟಿಸಿದ್ದಾರೆ. 

26
ಮಂಡ್ಯದ ಗಂಡು

ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು. ನಲ್ಲಿ ಮೂಳೆ ಕಂಟೆಂಟ್‌ಯಿಂದ ಫೇಮಸ್‌ ಆದ ಇವರು, ಡೈರೆಕ್ಟರ್‌ ಆಗಬೇಕು ಎಂದುಕೊಂಡಿದ್ದರಂತೆ. ಬಳಿಕ ಅವರು ಕಾಮಿಡಿ ಸ್ಟಾರ್​ ಆಗಿದ್ದಾರೆ. ಇದೀಗ ಅವರಿಗೆ ಕೈತುಂಬಾ ಸಾಕಷ್ಟು ಕೆಲಸಗಳೂ ಇವೆ.

36
ಗಿಲ್ಲಿ ನಟ ಮದ್ವೆ ಯಾವಾಗ?

ಇದೀಗ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಬಾಸ್​ ಟಿವಿಯವರು ಗಿಲ್ಲಿ ನಟಂಗೆ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ನಟ ಎಲ್ಲೋದ್ರೂ ಹುಡುಗಿಯರಿಗೆ ಗಾಳ ಹಾಕ್ತಾರೆ. ಹಾಗಿದ್ರೆ ಮದ್ವೆಯಾವಾಗ ಎಂದು. ಅದಕ್ಕೆ ಅವರು, ಸದ್ಯ ಯಾವುದೂ ಪ್ಲ್ಯಾನ್​ ಇಲ್ಲ. 2-3 ವರ್ಷ ಆಗಲಿ ಎಂದಿದ್ದಾರೆ. ನಮ್ಮನ್ನು ನಾವು ಸಾಕುವಷ್ಟು ದುಡಿಯುತ್ತಾ ಇದ್ದೇನೆ. ಮದುವೆ, ಮಕ್ಕಳು ಸಂಸಾರ ಎಂದಾಕ್ಷಣ ಎಲ್ಲವೂ ಹೆಚ್ಚಿಗೆ ಬೇಕಾಗುತ್ತದೆ, ಅದು ಬೇರೆ ರೂಟ್​ ಹಿಡಿಯುತ್ತದೆ. ಸದ್ಯ ಆ ಸ್ಥಿತಿಯಲ್ಲಿ ನಾನಿಲ್ಲ. ಅದಕ್ಕಾಗಿ ಸದ್ಯ ಮದುವೆಯಿಲ್ಲ ಎಂದಿದ್ದಾರೆ.

46
ಸಂಪಾದನೆ ಬಳಿಕ ಮದುವೆ

ಈಗ ಸಾಕಷ್ಟು ಕೈಯಲ್ಲಿ ಕೆಲಸ ಇದೆ. ಆದರೆ ಮುಂದೆ ಏನೋ ಎನ್ನುವುದು ಇದ್ದೇ ಇರುತ್ತದೆ. ಆದ್ದರಿಂದ ಒಂದಿಷ್ಟು ಸಂಪಾದನೆ ಮಾಡಿದ ಬಳಿಕ ಆಮೇಲೆ ಮದುವೆ ಯೋಚನೆ ಎನ್ನುವ ಮೂಲಕ ಸದ್ಯ ಮದುವೆಯಾಗುವುದಿಲ್ಲ ಎಂದಿದ್ದಾರೆ.

56
ಬೆಂಗಳೂರಿಗೆ ಉದ್ಯೋಗ ಅರಸಿ..

ಇನ್ನು ಗಿಲ್ಲಿ ನಟ ಕುರಿತು ಹೇಳುವುದಾದರೆ ಇವರು ಐಟಿಐ ಓದಿದ್ದಾರೆ. ಮಂಡ್ಯದಲ್ಲಿ ಓದು ಮುಗಿಸಿರುವ ಇವರು, ಅಲ್ಲಿಂದ ಸೀದಾ ಬಂದಿಳಿದಿದ್ದೆ ಬೆಂಗಳೂರಿಗೆ ಉದ್ಯೋಗ ಅರಸಿ ಬಮದವರು. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಬೆಂಗಳೂರಿಗೆ ಬಂದು ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಕೆಲಸಕ್ಕೆ ಸೇರಿದರು. ಏನೂ ಕೆಲಸ ಸಿಗದೇ ಕಷ್ಟದಲ್ಲಿ ಸಿಲುಕಿದರು.

66
ನಟರಾಜ್​ ಜರ್ನಿ

ಡೈರೆಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದರೂ ಹಣ ಮಾತ್ರ ಸಿಗುತ್ತಿರಲಿಲ್ಲ. ಕೊನೆಗೆ ಸ್ಕ್ರಿಪ್ಟ್ ಗಳನ್ನು ಬರೆಯೋದಕ್ಕೆ ಶುರು ಮಾಡಿದರು. ಕೊನೆಗೆ ಹಾಗೂ ಹೀಗೂ ಅಷ್ಟಿಷ್ಟು ದುಡಿದು ಮಂಡ್ಯ ಸ್ಟೈಲ್ ನಲ್ಲಿ ಮೂರು ಶಾರ್ಟ್ ಸಿನಿಮಾಗಳನ್ನು ಮಾಡಿದರು. ಕೊನೆಗೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸಿದರು. ‘ಕಾಮಿಡಿ ಕಿಲಾಡಿಗಳು ಸೀಸನ್‌ 4’ ಶೋನಲ್ಲಿ ರನ್ನರ್ ಅಪ್ ಆದ ಗಿಲ್ಲಿ ನಟ ‘ಭರ್ಜರಿ ಬ್ಯಾಚುಲರ್ಸ್’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗಳಲ್ಲೂ ಸ್ಪರ್ಧಿಸಿದ್ದರು. ಜೀ ಕನ್ನಡ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಗೂ ಶಿಫ್ಟ್ ಆದ ಗಿಲ್ಲಿ ನಟ ‘ಕ್ವಾಟ್ಲೆ ಕಿಚನ್’ ಶೋಗೆ ಬಂದರು. ಹೀಗೆ ಅವರ ಜರ್ನಿ ಸಾಗಿದೆ.

Read more Photos on
click me!

Recommended Stories