ಕೆಟ್ಟ ಸುದ್ದಿಯಿಂದ Bigg Bossಗೆ ಅವಕಾಶ, ಗಂಟೆಗೆ 10 ಲಕ್ಷ ಪೇಮೆಂಟ್‌! ಡಾಗ್‌ ಸತೀಶ್‌ ಮಾತು ಕೇಳಿ

Published : Sep 30, 2025, 09:09 PM IST

'ವಿಶ್ವದ ನಂ.1 ಡಾಗ್‌ ಬ್ರೀಡರ್‌' ಎಂದು ಕರೆಸಿಕೊಳ್ಳುವ ಡಾಗ್ ಸತೀಶ್, ವಿವಾದಗಳಿಂದಲೇ ಖ್ಯಾತಿ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ತಮ್ಮ ದುಬಾರಿ ಜೀವನಶೈಲಿ, ನಾಯಿ ಸಾಕಾಣಿಕೆ ವ್ಯವಹಾರ ಮತ್ತು ನಕಾರಾತ್ಮಕ ಪ್ರಚಾರವೇ ತಮಗೆ ಅವಕಾಶಗಳನ್ನು ತಂದುಕೊಟ್ಟಿತು ಎಂದು ಅವರು ಬಹಿರಂಗಪಡಿಸಿದ್ದಾರೆ.

PREV
18
ʻವಿಶ್ವದ ನಂ.1 ಡಾಗ್‌ ಬ್ರೀಡರ್‌ʼ

Bigg Boss 12ರ ಹವಾ ಜೋರಾಗಿಯೇ ನಡೆಯುತ್ತಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವವರಲ್ಲಿ ಒಬ್ಬರು ʻಇಂಟರ್‌ನ್ಯಾಷನಲ್‌ ಸೆಲೆಬ್ರೆಟಿ ಡಾಗ್‌ ಬ್ರೀಡರ್‌ʼ ಮತ್ತು ʻವಿಶ್ವದ ನಂ.1 ಡಾಗ್‌ ಬ್ರೀಡರ್‌ʼಎಂದು ತಮ್ಮನ್ನು ತಾವು ಕರೆದುಕೊಳ್ಳುವ ಡಾಗ್‌ ಸತೀಶ್‌ ಕ್ಯಾಡಬಾಮ್ಸ್‌ (Dog Sateesh) ಒಬ್ಬರು.

28
25 ಲಕ್ಷ ರೂಪಾಯಿಗಳಿಗೆ ಬಟ್ಟೆ ಖರೀದಿ

ಬಿಗ್‌ ಬಾಸ್‌ಗಾಗಿ 25 ಲಕ್ಷ ರೂಪಾಯಿಗಳಿಗೆ ಬಟ್ಟೆಗಳನ್ನ ಖರೀದಿಸಿರುವುದಾಗಿ ಅವರು ಬಿಗ್‌ಬಾಸ್‌ ಮನೆಯ ಒಳಗೆ ಹೋಗುವ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಮುಂದೆ ಹೇಳಿಕೊಂಡಿದ್ದಾರೆ. 50 ಕೋಟಿ ರೂಪಾಯಿಗಳ ನಾಯಿಗಳನ್ನು ಹೊಂದಿರುವವರು 50 ಲಕ್ಷಕ್ಕಾಗಿ ಬಿಗ್‌ಬಾಸ್‌ ಆಟವಾಡುತ್ತಿದ್ದಾರೆ ಎಂದೂ ಇವರು ಸದ್ದು ಮಾಡುತ್ತಿದ್ದಾರೆ.

38
10ನೇ ಕ್ಲಾಸ್‌ನಿಂದಲೇ ನಾಯಿಗಳ ಸಾಕುವ ವ್ಯವಹಾರ

ಅಂದಹಾಗೆ, ಸತೀಶ್‌ ಕ್ಯಾಡಬಾಮ್ಸ್‌ 10ನೇ ಕ್ಲಾಸ್‌ನಿಂದಲೇ ನಾಯಿಗಳ ಸಾಕುವ ವ್ಯವಹಾರ ಆರಂಭಿಸಿದ್ದವಂತೆ. ಆಗಲೇ ದಿನಕ್ಕೆ 10 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಡಾಗ್‌ ಸತೀಶ್‌, ʻಕ್ಯಾಡಬಾಮ್ಸ್‌ ಕೆನ್ನೆಲ್ಸ್‌ʼ ಎಂಬ ಕೆನಲ್‌ ನಡೆಸುತ್ತಿದ್ದು, ಅಲ್ಲಿ ಅಪರೂಪದ ನಾಯಿ ಜಾತಿಗಳನ್ನು ಸಾಕುತ್ತಿದ್ದಾರೆ.

48
6ನೇ ಕ್ಲಾಸ್​​ನಲ್ಲಿ ಇದ್ದಾಗ ಕ್ರಾಸ್ ಬ್ರೀಡ್ ಡಾಗ್

‘ನನಗೆ ನಾಯಿ ಎಂದರೆ ಇಷ್ಟ. 6ನೇ ಕ್ಲಾಸ್​​ನಲ್ಲಿ ಇದ್ದಾಗ ಕ್ರಾಸ್ ಬ್ರೀಡ್ ಡಾಗ್ ಕೊಡಿಸಿದರು. ನಾಯಿಗಳಿಗೂ ಬೆಲೆ ಇದೆ ಎಂದು ಆಗಲೇ ನನಗೆ ಗೊತ್ತಾಗಿತ್ತು. ತುಂಬಾ ಅಪರೂಪದ ತಳಿಯಗಳನ್ನು ನಾನು ಭಾರತಕ್ಕೆ ತರಿಸಿಕೊಳ್ಳೋಕೆ ಆರಂಭಿಸಿದೆ. ಫಂಕ್ಷನ್​ಗೆ ನಾನು ಒಬ್ಬನೇ ಹೋದರೆ ನನ್ನ ಗುರುತಿಸೋದಿಲ್ಲ. ಆದರೆ, ಶ್ವಾನದ ಜೊತೆ ಹೋದರೆ ನನ್ನ ಗುರುತಿಸುತ್ತಾರೆ’ ಎಂದಿದ್ದಾರೆ ಸತೀಶ್‌.

58
ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಫೇಮಸ್‌

ಇನ್ನು ಇದೀಗ ಅವರು ನೀಡಿರುವ ಸಂದರ್ಶನವೊಂದರಲ್ಲಿ, ನನ್ನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟಕೆಟ್ಟದ್ದಾಗಿ ಮಾತನಾಡಿದರು. ಅದರಿಂದ ನಾನು ಫೇಮಸ್ ಆದೆ. ಬಿಗ್‌ಬಾಸ್‌ 12ಕ್ಕೆ ನನಗೆ ಆಹ್ವಾನ ಬಂದಿದೆ. ಮಾತ್ರವಲ್ಲದೇ ಎರಡು ಸಿನಿಮಾಗಳಲ್ಲಿ ಹೀರೋ ಆಗಿದ್ದೇನೆ. ಒಳ್ಳೊಳ್ಳೆ ಅವಕಾಶಗಳು ಬಂದಿವೆ. ಒಂದು ಗಂಟೆ ಎರಡೂವರೆ ಲಕ್ಷ ರೂ. ಪೇಮೆಂಟ್‌ ಇತ್ತು. ಅದೀಗ 10 ಲಕ್ಷ ಆಗಿದೆ ಎಂದಿದ್ದಾರೆ.

68
8 ವರ್ಷಗಳಿಂದ ಕಾದಿದ್ದೆ

Bigg Bossನಲ್ಲಿ ಭಾಗವಹಿಸಲು 8 ವರ್ಷಗಳಿಂದ ಕಾದಿದ್ದರಂತೆ. ಆದರೆ ಇದೀಗ ಕಾಂಟ್ರವರ್ಸಿಯ ಬಳಿಕ ಅವರಿಗೆ ಅವಕಾಶ ದೊರೆತಿದೆ.

78
ಕಾಂಟ್ರವರ್ಸಿ ಮಾಡಿಕೊಂಡವರಿಗೆ ಚಾನ್ಸ್‌

ಈ ಮೂಲಕ, ಕಾಂಟ್ರವರ್ಸಿ ಮಾಡಿಕೊಂಡವರಿಗೆ, ಕೆಟ್ಟ ಪ್ರಚಾರ ಪಡೆದುಕೊಂಡವರು ಬಿಗ್‌ಬಾಸ್‌ನ ಬಾಗಿಲು ತೆರೆದಿರುತ್ತದೆ ಎನ್ನುವ ಮಾತನ್ನು ಸತ್ಯ ಮಾಡಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

88
ಪತ್ನಿ ಜೊತೆ ಸಣ್ಣ ಸಮಸ್ಯೆ

ಇನ್ನು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದ ಸತೀಶ್‌ ಅವರು, ಪತ್ನಿ ಜೊತೆ ಸಣ್ಣ ಸಮಸ್ಯೆ ಆಗಿ ನಾವಿಬ್ಬರೂ ದೂರ ಇದ್ದೇವೆ. ನನಗೆ ಮಗನೇ ಎಲ್ಲ. ಮಗನ ಅಷ್ಟು ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಬರುವ ಮಲತಾಯಿ ಆತನನ್ನು ಹೇಗೆ ನೋಡಿಕೊಳ್ಳುತ್ತಾಳೇನೋ ಎನ್ನುವ ಭಯ ನನಗೆ. ಹೀಗಾಗಿ, ಎರಡನೇ ಮದುವೆ ಆಗಿಲ್ಲ’ ಎಂದು ಅವರು ಹೇಳಿಕೊಂಡಿದ್ದರು.

Read more Photos on
click me!

Recommended Stories