Manju Bhashini angry reactionn: ಬಿಗ್‌ಬಾಸ್ ಸೀಸನ್ 12ರ ಎರಡನೇ ವಾರದಲ್ಲಿ ಒಂಟಿ ಮತ್ತು ಜಂಟಿ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದದಿಂದಾಗಿ ಮಂಜು ಭಾಷಿಣಿ ಆಕ್ರೋಶಗೊಂಡಿದ್ದು, ಈ ಬೆಳವಣಿಗೆಗಳಿಂದ ನೊಂದ ಒಂಟಿಗಳ ರಾಜಮಾತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.
ಬಿಗ್‌ಬಾಸ್ ಸೀಸನ್ 12 ಆರಂಭವಾದ ಮೊದಲ ದಿನದಂದು ಮನೆಯಲ್ಲಿ ಒಂಟಿ ಮತ್ತು ಜಂಟಿ ಎಂಬ ಎರಡು ಬಣಗಳಿವೆ. ಮೊದಲ ವಾರ ಹೊಂದಾಣಿಕೆ ಮಾಡಿಕೊಂಡು ಹೋಗಿದ್ದರಿಂದ ಎರಡೂ ಬಣಗಳ ನಡುವೆ ಯಾವುದೇ ಗಲಾಟೆಗಳು ವ್ಯಾಪಕವಾಗಿ ನಡೆದಿರಲಿಲ್ಲ. ಇದೀಗ ಎರಡನೇ ವಾರದ ಮೊದಲ ದಿನದಿಂದಲೇ ಎರಡೂ ಬಣಗಳ ನಡುವೆ ಬೆಂಕಿ ಹತ್ತಿಕೊಂಡಿದ್ದು, ಗಾಂಚಾಲಿ ಎಂಬಿತ್ಯಾದಿ ಪದಗಳಿಂದ ಮನೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
26
ನಿಯಮಗಳ ಉಲ್ಲಂಘನೆ
ಜಂಟಿಗಳೇ ಏನೇ ತಪ್ಪು ಮಾಡಿದರೂ ಒಂಟಿಗಳು ಶಿಕ್ಷೆ ಅನುಭವಿಸುತ್ತಾರೆ. ಜಂಟಿಗಳು ನಿಯಮ ಪಾಲಿಸುವಂತೆ ನೋಡಿಕೊಳ್ಳುವುದು ಒಂಟಿಗಳ ಜವಾಬ್ದಾರಿಯಾಗಿತ್ತು. ಮೊದಲ ವಾರದಲ್ಲಿ ಈ ರೂಲ್ಸ್ ಬ್ರೇಕ್ ಆಗಿದ್ದರಿಂದ ಒಂಟಿಗಳು ಲಕ್ಷುರಿ ಆಹಾರ ಸಾಮಾಗ್ರಿಗಳನ್ನು ಕಳೆದುಕೊಂಡಿದ್ದರು. ಗಿಲ್ಲಿ ಮತ್ತು ಕಾವ್ಯಾ ಮಾಡಿದ ತಪ್ಪಿನಿಂದ ನಾವು ಆಹಾರ ಕಳೆದುಕೊಂಡಿದ್ದೇವೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು.
36
ಅಶ್ವಿನಿ ಗೌಡ ಕಣ್ಣೀರು
ಇದೀಗ ಜಂಟಿಗಳು ತಪ್ಪಿನಿಂದ ನಾವು ಹೊರಗಡೆ ಮಲಗುವಂತಾಗಿದೆ ಎಂದು ಜಾನ್ವಿ ಮತ್ತು ಅಶ್ವಿನಿ ಗೌಡ ಕೋಪಗೊಂಡಿದ್ದಾರೆ. ಜಗಳದ ಸಂದರ್ಭದಲ್ಲಿ ಗಾಂಚಾಲಿ ಎಂಬ ಪದವನ್ನು ಜಾನ್ವಿ ಬಳಕೆ ಮಾಡಿದ್ದರು. ಇದರಿಂದ ಕೋಪಗೊಂಡಿರುವ ಮಂಜು ಭಾಷಿಣಿ, ಒಂಟಿಗಳನ್ನು ತರಾಟೆಗೆ ತೆಗೆದುಕೊಂಡಂತೆ ಕಾಣಿಸುತ್ತಿದೆ. ಈ ಎಲ್ಲಾ ಬೆಳವಣಿಗೆಯಿಂದ ಒಂಟಿಗಳ ರಾಜಮಾತೆಯಾಗಿರುವ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.
ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಗಾಂಚಾಲಿ ಗೀಂಚಾಲಿ ಯಾವನಿದ್ದಾನೂ ಅನ್ನಿಸಿಕೊಳ್ಳಲ್ಲ ಬಿಗ್‌ಬಾಸ್. ಹದ್ದುಮೀರಿ ಮಾತನಾಡೋದೆಲ್ಲಾ ಬೇಡ, ಮಾತುಗಳ ಮೇಲೆ ನಿಗಾ ಇರಲಿ ಎಂದು ಮಂಜು ಭಾಷಿಣಿ ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ, ಮಂಜು ಭಾಷಿಣಿ ಇಷ್ಟೊಂದು ಓವರ್ ಆಗಿ ರಿಯಾಕ್ಟ್ ಮಾಡೋದು ಬೇಕಿರಲ್ಲ ಅಂತಾ ಅಶ್ವಿನಿ ಗೌಡ ಹೇಳಿದ್ದಾರೆ.
56
ಊಟ ಮಾಡದ ಅಶ್ವಿನಿ ಗೌಡ
ಮಂಜು ಭಾಷಿಣಿ ಅವರ ಮಾತಿನೇಟಿನಿಂದ ನೊಂದಿರುವ ಅಶ್ವಿನಿ ಗೌಡ ಊಟ ಮಾಡದೇ ಕುಳಿತಿದ್ದಾರೆ. ಆಟ ಆಡೋದಕ್ಕೆ ನನಗೇನು ಅಭ್ಯಂತರವಿಲ್ಲ. ಒಬ್ಬರನ್ನು ಅಂಗಿಸೋದ್ಯಾಕೆ? ಮೂರು ದಿನದಿಂದ ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಾ ಧನುಷ್ ಸೇರಿದಂತೆ ಎಲ್ಲಾ ಒಂಟಿಗಳ ಮುಂದೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಈ ಎಲ್ಲಾ ಜಗಳವನ್ನು ರಕ್ಷಿತಾ ಶೆಟ್ಟಿ ಬೆಕ್ಕಸ ಬೆರಗಾಗಿ ನೋಡುತ್ತಾ ನಿಂತಿದ್ದಾರೆ.
ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಜಂಟಿಗಳಿಗೆ ಅಡುಗೆಮನೆಯನ್ನು ಕ್ಲೋಸ್ ಮಾಡಲಾಗಿದೆ. ಹಾಗಾಗಿ ಒಂಟಿಗಳೇ ಅಡುಗೆ ತಯಾರಿಸಿದಂತೆ ಕಾಣಿಸುತ್ತಿದೆ. ಕಿಚನ್ ಹೊರಗಡೆ ನಿಂತುಕೊಂಡು ಜಂಟಿಗಳೆಲ್ಲಾ ಒಂದಾಗಿ ಒಂಟಿಗಳನ್ನು ತಮಾಷೆ ಮಾಡುತ್ತಾ ಕಾಲೆಳೆದಿರೋದು ಪ್ರೋಮೋದಲ್ಲಿ ಕಂಡು ಬಂದಿದೆ. ಮತ್ತೊಂದೆಡೆ ಅಭಿಷೇಕ್ ಮತ್ತು ಜಾನ್ವಿ ನಡುವೆಯೂ ಕಿಚ್ಚು ಹೊತ್ತುಕೊಂಡಿದೆ.