ಕಾಣೆಯಾದ ಮಗಳ ಬಗ್ಗೆ ಪೊಲೀಸರು ವಿಚಾರಿಸಿದ್ದರಿಂದ ಗೌತಮ್‌ಗೆ ಹೊಸ ಭರವಸೆ ಮೂಡಿದೆ. ಇನ್ನೊಂದೆಡೆ, ಭೂಮಿಕಾಗೆ ಹೆಡ್ ಮಿಸ್ ಕೆಲಸ ಸಿಕ್ಕಿದ್ದು, ಗೌತಮ್ ನೆನಪಿನಿಂದ ದೂರವಿರಲು ಪ್ರಯತ್ನಿಸುತ್ತಾಳೆ. ಎರಡು ಮಕ್ಕಳಲ್ಲಿ ನಿಜವಾದ ಮಗು ಯಾರು ಎಂಬ ರಹಸ್ಯವು ಕಥೆಗೆ ಹೊಸ ತಿರುವು ನೀಡಿದೆ.
ಒಂದೆಡೆ ಭೂಮಿಕಾಳ ಸ್ನೇಹಿತೆ ಕಾವೇರಿ ಮನೆಯಲ್ಲಿ ಮಗುವೊಂದು ಇದ್ದರೆ, ಇನ್ನೊಂದೆಡೆ, ಅಪ್ಪ-ಅಮ್ಮ ಬಿಟ್ಟು ಹೋದ ಮಗುವೊಂದು ಗೌತಮ್ ಕೈಸೇರಿದೆ. ಇಬ್ಬರಲ್ಲಿ ಒಬ್ಬಳು ಇವರದ್ದೇ ಮಗು ಎನ್ನುವುದು ಬಹುತೇಕ ಖಚಿತವಾಗಿದೆ. ಇಷ್ಟು ಅಂದುಕೊಳ್ಳುತ್ತಿರುವುದಾಗಲೇ ಸೀರಿಯಲ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
26
ವಠಾರಕ್ಕೆ ಬಂದ ಪೊಲೀಸರು
ಪೊಲೀಸರು ಗೌತಮ್ನನ್ನು ಹುಡುಕಿಕೊಂಡು ವಠಾರಕ್ಕೆ ಬಂದಿದ್ದಾರೆ. ಅಲ್ಲಿ ಅವರು ಮಕ್ಕಳನ್ನು ಕಿಡ್ನ್ಯಾಪ್ ಮಾಡುವವರ ಬಗ್ಗೆ ತಿಳಿಸಿದ್ದಾರೆ. ಹಲವು ಮಕ್ಕಳನ್ನು ಅನಾಥಾಶ್ರಮದಿಂದ ಬಚಾವ್ ಮಾಡಲಾಗಿದೆ. ಕೆಲವರನ್ನು ಕಿಡ್ನ್ಯಾಪ್ ಮಾಡಿ ತಂದು ಇಡಲಾಗಿತ್ತು. ಆ ಮಕ್ಕಳನ್ನು ಅಪ್ಪ-ಅಮ್ಮನ ಬಳಿ ಸೇರಿಸಲಾಗಿದೆ ಎಂದಿದ್ದಾರೆ. ಆ ಸಮಯದಲ್ಲಿ ತನ್ನ ಮಗಳೂ ಸಿಕ್ಕಿರಬಹುದು ಎನ್ನುವ ಸಣ್ಣ ಆಸೆ ಗೌತಮ್‌ಗೆ ಚಿಗುರಿದೆ. ಮಗಳ ಬಗ್ಗೆ ವಿಚಾರಿಸಿದ್ದಾರೆ.
36
ಪೊಲೀಸರಿಂದ ಮಾಹಿತಿ
ಕೊನೆಗೆ ಪೊಲೀಸರು, ಇದು ತುಂಬಾ ವರ್ಷ ಆಗಿದ್ದರಿಂದ ಮಗುವನ್ನು ಇನ್ನೂ ಹುಡುಕಲು ಆಗಲಿಲ್ಲ. ನೀವು ಮಗು ಮಿಸ್ ಆಗಿರೋ ದೂರು ಕೊಟ್ಟಿದ್ದರಿಂದ ಹುಡುಕಿಕೊಂಡು ಬಂದೆವು. ನಿನ್ನ ವಿಳಾಸವನ್ನು ಆನಂದ್ ತಿಳಿಸಿದರು ಎನ್ನುತ್ತಾರೆ. ಆದರೆ ಭಯ ಪಡಬೇಡಿ. ಮಗಳು ಸಿಗುತ್ತಾಳೆ ಎಂದು ಹೇಳಿ ಹೋಗಿರುವ ಕಾರಣ, ಗೌತಮ್‌ಗೆ ಮಗಳು ಸಿಗುವ ಚಿಕ್ಕ ಭರವಸೆ ಮೂಡಿದೆ.
ಅದೇ ಇನ್ನೊಂದೆಡೆ, ತನಗೆ ಹೆಡ್ ಮಿಸ್ ಕೆಲಸ ಸಿಕ್ಕಿರುವ ವಿಷಯವನ್ನು ಮಲ್ಲಿಗೆ ಬಂದು ಭೂಮಿಕಾ ತಿಳಿಸುತ್ತಾಳೆ. ಮಲ್ಲಿ ಗೌತಮ್ ವಿಷಯ ತೆಗೆದಾಗ ಭೂಮಿಕಾ, ಆ ವಿಷಯವನ್ನು ಹೇಳಬೇಡ. ನಿನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡು, ಚೆನ್ನಾಗಿ ಓದು ಎನ್ನುತ್ತಾಳೆ.
56
ಪಾಯಸ ಮಾಡು ಎಂದ ಭೂಮಿಕಾ
ಕೊನೆಗೆ ಕಾಲೇಜಿಗೆ ಹೋಗಲು ಸಲ್ವಾರ್ ಕಮೀಜ್ ಹಾಕಿಕೋ ಎಂದು ಸೀರೆಯ ಬದಲು ಹೊಸ ಡ್ರೆಸ್ ತಂದುಕೊಡುತ್ತಾಳೆ. ಕೆಲಸ ಸಿಕ್ಕ ಖುಷಿಗೆ ಜಾಮೂನು ಮಾಡಲಾ ಎಂದು ಮಲ್ಲಿ ಕೇಳಿದಾಗ, ಜಾಮೂನು ಎಂದರೆ ಗೌತಮ್‌ಗೆ ಇಷ್ಟ ಎನ್ನುವ ಕಾರಣಕ್ಕೆ ಮತ್ತೆ ಗೌತಮ್ ನೆನಪಾಗಿ ಭೂಮಿಕಾ ಬೇಡ, ಪಾಯಸ ಮಾಡು ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ.
66
ನಿಜವಾದ ಮಗಳು ಯಾರು?
ಒಟ್ಟಿನಲ್ಲಿ ಈಗ ಬೇಗ ಮಗಳು ಸಿಗಲಿ, ಇಬ್ಬರೂ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ. ನಿಜವಾದ ಮಗಳು ಯಾರು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯೂ ಶುರುವಾಗಿದೆ. ಆ ಮಗು-ಈ ಮಗು ಎಂದು ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಮಗು ಯಾವುದೇ ಆಗಿರಲಿ, ಒಟ್ಟಿನಲ್ಲಿ ಎಲ್ಲರೂ ಬೇಗ ಒಂದಾಗಿ ಸೀರಿಯಲ್ ಮುಗಿಸಿ ಎನ್ನುತ್ತಿದ್ದಾರೆ.