'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ವಿಶ್ವನ ಮೇಲಿನ ಅನುಮಾನದಿಂದ ತನು ಆತನ ಕಾಲೇಜಿಗೆ ಹೋಗಿ ಜಾಹ್ನವಿಯ ದಾಖಲೆಗಳನ್ನು ಪತ್ತೆಹಚ್ಚುತ್ತಾಳೆ. ವಿಶ್ವ ತಡೆಯಲು ಪ್ರಯತ್ನಿಸಿದರೂ, ಜಾಹ್ನವಿಯ ದಾಖಲೆ ತನು ಕೈ ಸೇರಿದ್ದು, ವಿಶ್ವ ಮತ್ತು ಜಾಹ್ನವಿಯ ರಹಸ್ಯ ಬಯಲಾಗುವ ಹಂತ ತಲುಪಿದೆ.
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ (Lakshmi Nivasa Serial) ಈಗ ವಿಶ್ವ ಮತ್ತು ಜಾಹ್ನವಿಯ ಲವ್ ಮ್ಯಾಟರ್ ಗುಟ್ಟಾಗುವ ಕಾಲ ಬಂದಾಗಿದೆ. ತನು ಜೊತೆ ಎಂಗೇಜ್ಮೆಂಟ್ ಆದಾಗಿನಿಂದಲೂ ವಿಶ್ವನ ಬದಲಾಗ್ತಿರೋ ಕ್ಯಾರೆಕ್ಟರ್ ಅನ್ನು ತನು ಗಮನಿಸುತ್ತಿದ್ದಾಳೆ. ಆದರೆ ಆಕೆಗೆ ತನ್ನ ಮನೆಯಲ್ಲಿ ಇರುವ ಜಾಹ್ನವಿಯೇ ಆತನ ಲವರ್ ಎನ್ನುವುದು ಗೊತ್ತಿಲ್ಲ. ಆದರೆ ಅವರಿಬ್ಬರೂ ಹೊರಗಡೆ ಹೋಗುವುದು ನೋಡಿ ಯಾಕೋ ಅನುಮಾನ ಬಂದಿದ್ದರೂ, ಜಾಹ್ನವಿಯ ಸತ್ಯ ಗೊತ್ತಿಲ್ಲದ ಕಾರಣ ಅದನ್ನು ಆಕೆ ಅಷ್ಟು ಸೀರಿಯಸ್ ಆಗಿ ತಿಳಿದುಕೊಂಡಿಲ್ಲ.
27
ಜಯಂತ್ ಬಳಿಯೂ ವಿಷಯ ಹೇಳಿದ್ದ ತನು
ಸಾಲದು ಎನ್ನುವುದಕ್ಕೆ ಜಯಂತ್ ಬಳಿಯೂ ಆಕೆ ಜಾಹ್ನವಿ ವಿಷಯವನ್ನು ಹೇಳಿಬಿಟ್ಟಿದ್ದಾಳೆ. ವಿಶ್ವನ ಲವರ್ ಸತ್ತಿಲ್ಲ ಎನ್ನುವ ಸಂದೇಹವಿದೆ. ಅವರಿಬ್ಬರೂ ಮೀಟ್ ಆಗ್ತಿದ್ದಾರೆ ಎನ್ನಿಸ್ತಿದೆ ಎಂದಿದ್ದಾಳೆ. ಇದನ್ನು ಕೇಳಿ ಜಯಂತ್ಗೆ ಸಿಟ್ಟು ಉಕ್ಕಿ ಬಂದಿದ್ದರೂ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದು ಖುಷಿಯಪಟ್ಟುಕೊಂಡಿದ್ದಾನೆ. ಚಿನ್ನುಮರಿ ಒಂದು ಬಾರಿ ಕೈಗೆ ಸಿಕ್ಕರೆ ವಿಶ್ವನ ಕಥೆ ಮುಗಿಸುವ ಪ್ಲ್ಯಾನ್ ಅವನದ್ದು.
37
ಜಾಹ್ನವಿ ಪತ್ತೆ ಹಚ್ಚಲು ತನು ಶುರು
ಇದೀಗ ಒಂದು ಹಂತ ಮುಂದಕ್ಕೆ ಹೋಗಿರುವ ತನು, ಆ ಜಾಹ್ನವಿ ಯಾರು ಎನ್ನುವುದನ್ನು ಪತ್ತೆ ಹಚ್ಚಲೇಬೇಕು ಎಂದು ವಿಶ್ವನ ಕಾಲೇಜಿಗೆ ಹೋಗಿದ್ದಾಳೆ. ಅಲ್ಲಿ ಅಟೆಂಡರ್ಗೆ ಲಂಚ ಕೊಟ್ಟು ಆ ದಾಖಲೆಗಳನ್ನು ತರಿಸಿಕೊಂಡಿದ್ದಾಳೆ. ಜಾಹ್ನವಿಯ ಫೋಟೋ ಅನ್ನು ವಿಶ್ವ ತೋರಿಸದೇ ಇರುವ ಕಾರಣ ಹೇಗಾದರೂ ಮಾಡಿ ಆಕೆಯನ್ನು ಪತ್ತೆ ಹಚ್ಚುವುದು ಈಕೆಯ ಉದ್ದೇಶ.
ಯಾವುದೇ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕಾಗಿ ವಿಶ್ವ ಅಲ್ಲಿಗೆ ಬಂದಾಗ ತನುವನ್ನು ನೋಡಿ ಶಾಕ್ ಆಗಿದ್ದಾನೆ. ಆಗ ತನು ಇರುವ ಸತ್ಯವನ್ನು ಹೇಳಿದ್ದಾಳೆ. ಇಲ್ಲಿಂದ ಸತ್ಯ ತಿಳಿದುಕೊಂಡೇ ಹೋಗುವುದಾಗಿ ಹೇಳಿದ್ದಾಳೆ. ವಿಶ್ವ ಆಕೆಯನ್ನು ಎಳೆದುಕೊಂಡು ಹೋಗಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ.
57
ದಾಖಲೆ ತಂದುಕೊಟ್ಟ ಅಟೆಂಡರ್
ಕೊನೆಗೆ ಅಟೆಂಡರ್ ದಾಖಲೆಯನ್ನು ತಂದುಕೊಟ್ಟಿದ್ದಾನೆ. ಅಲ್ಲಿ ಜಾಹ್ನವಿ ಯಾರು ಎನ್ನುವ ಬಗ್ಗೆ ತನು ಹುಡುಕಲು ಶುರು ಮಾಡಿದ್ದಾಳೆ. ಜಾಹ್ನವಿ ಹೆಸರಿನ ವಿದ್ಯಾರ್ಥಿಯ ದಾಖಲೆ ಅವಳಿಗೆ ಸಿಕ್ಕೇಬಿಟ್ಟಿದೆ. ಅಲ್ಲಿಗೆ ಪ್ರೊಮೋ ಕಟ್ ಆಗಿದೆ.
67
ತನುಗೆ ಸತ್ಯ ಗೊತ್ತಾಗತ್ತಾ?
ಹಾಗಿದ್ದರೆ ಜಾಹ್ನವಿ ತನ್ನ ಮನೆಯಲ್ಲಿ ಇರುವ ಚಂದನಾನೇ ಎನ್ನುವುದು ತನುಗೆ ತಿಳಿಯತ್ತಾ, ಅಥವಾ ಅಲ್ಲಿ ಇರುವುದೇ ಬೇರೆ ಫೋಟೋನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಈ ಮೊದಲು ಇಡೀ ಕಾಲೇಜಿಗೆ ಇರುವುದು ಒಬ್ಬಳೇ ಜಾಹ್ನವಿ ಎಂದು ಹೇಳಿದ್ದರಿಂದ ಬೇರೆಯವರ ಹೆಸರು ಹೇಳುವುದು ಅಷ್ಟು ಸುಲಭವಲ್ಲ, ನಿಜ ಗೊತ್ತಾಗತ್ತೆ ಎಂದು ಕಮೆಂಟ್ನಲ್ಲಿ ನೆಟ್ಟಿಗರು ಹೇಳಿದ್ದಾರೆ. ಹಾಗಿದ್ದರೆ ಮುಂದೇನು? ಸತ್ಯ ಅನಾವರಣಗೊಳ್ಳತ್ತಾ? ಸತ್ಯ ತಿಳಿದರೆ ಜಯಂತ್ಗೂ ಇದು ಗೊತ್ತಾಗಿಬಿಡತ್ತಾ?
77
ಹಾಗಿದ್ದರೆ ಮುಂದೇನು?
ಹಾಗಿದ್ದರೆ ಮುಂದೇನು? ಸತ್ಯ ಅನಾವರಣಗೊಳ್ಳತ್ತಾ? ಸತ್ಯ ತಿಳಿದರೆ ಜಯಂತ್ಗೂ ಇದು ಗೊತ್ತಾಗಿಬಿಡತ್ತಾ?