ವಿನಯ್-ಸಂಗೀತಾಗೆ ಆಟ, ನಮ್ರತಾಗೆ ಪ್ರಾಣ ಸಂಕಟ; ಬಿಗ್‌ಬಾಸ್ ಸೀಸನ್ 10ರ ಈ ದೃಶ್ಯ ನೆನಪಿದೆಯಾ?

Published : Oct 16, 2025, 12:09 PM IST

ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಸಂಗೀತಾ ಹೇಳಿದ ಕಥೆಗೆ ಮೈಮರೆತಿದ್ದ ನಮ್ರತಾ ಗೌಡ ಅವರನ್ನು ವಿನಯ್ ಹಿಂದಿನಿಂದ ಬಂದು ಹೆದರಿಸುತ್ತಾರೆ. ಇದರಿಂದ ಭಯಗೊಂಡ ನಮ್ರತಾ ಜೋರಾಗಿ ಕಿರುಚಿಕೊಂಡು ಕೋಪಗೊಳ್ಳುತ್ತಾರೆ.

PREV
15
ಬಿಗ್‌ಬಾಸ್ ಸೀಸನ್ 10ರ ವಿಡಿಯೋ ಕ್ಲಿಪ್ ವೈರಲ್

ಬಿಗ್‌ಬಾಸ್ ಕನ್ನಡ ಸೀಸನ್ 10 ಮನೆಯೊಳಗೂ ಮತ್ತು ಹೊರಗೂ ಸಾಕಷ್ಟು ಸದ್ದು ಮಾಡಿತ್ತು. ಸೀಸನ್‌ನಲ್ಲಿ ಫಿನಾಲೆಗೂ ತಲುಪಿ ಸಂಗೀತಾ ಅತ್ಯಂತ ಸ್ಟ್ರಾಂಗ್ ಎಂಬುದನ್ನು ಸಾಬೀತು ಮಾಡಿದ್ದರು. ವಿನಯ್ ಮತ್ತು ಸಂಗೀತಾ ನಡುವಿನ ಜಗಳಕ್ಕೆ ಇಡೀ ಮನೆಯೇ ಗಢ ಗಢ ಎಂದು ಅಲ್ಲಾಡುತ್ತಿತ್ತು. ಈ ಸೀಸನ್ ವಿಶೇಷತೆ ಏನಂದ್ರೆ ಆರಂಭದಿಂದಲೂ ಹೊಡೆದಾಡಿಕೊಂಡಿದ್ದ ವಿನಯ್ ಮತ್ತು ಕಾರ್ತಿಕ್ ಮಹೇಶ್ ಫಿನಾಲೆ ವೇಳೆಗೆ ಫ್ರೆಂಡ್ಸ್ ಅಗಿದ್ದರು

25
ಭಯಗೊಂಡು ಕಿರುಚಿದ ನಮ್ರತಾ

ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭವಾದ ಬಳಿಕ ಈ ಹಿಂದಿನ ಸೀಸನ್‌ಗಳ ಸ್ಮರಣೀಯ ವಿಡಿಯೋ ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಇದೀಗ ಸೀಸನ್ 10ರ ವಿಡಿಯೋ ಮುನ್ನಲೆಗೆ ಬಂದಿದ್ದು, ಇದರಲ್ಲಿ ವಿನಯ್ ಮತ್ತು ಸಂಗೀತಾ ಜೊತೆಯಾಗಿ ನಮ್ರತಾ ಅವರನ್ನು ಹೆದರಿಸಿದ್ದಾರೆ. ನಮ್ರತಾ ಭಯಗೊಂಡು ಜೋರಾಗಿ ಕಿರುಚಿಕೊಂಡಿದ್ದರು.

35
ಕಿಚನ್‌ನಲ್ಲಿ ನಡೆದ ಘಟನೆ

ಸಂಗೀತಾ ಮತ್ತು ನಮ್ರತಾ ಕಿಚನ್‌ನಲ್ಲಿ ಕುಳಿತಿರುತ್ತಾರೆ. ಅವರ ಮುಂದೆಯೇ ವಿನಯ್ ಸಹ ನಿಂತಿರುತ್ತಾರೆ. ಇಬ್ಬರ ಮುಂದೆ ಸಂಗೀತಾ ಒಂದು ಕಥೆಯನ್ನು ಹೇಳುತ್ತಿರುತ್ತಾರೆ. ಈ ವೇಳೆ ಸಂಗೀತಾ ಹೇಳುವ ಮಾತುಗಳನ್ನು ನಮ್ರತಾ ಅತ್ಯಂತ ಏಕಾಗ್ರತೆಯಿಂದ ಕೇಳುತ್ತಿರುತ್ತಾರೆ. ವಿನಯ್ ಸಹ ಈ ಕತೆಯನ್ನು ಕೇಳಿಸಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: ಅಸುರನ ಹುಚ್ಚು ಬಿಡಿಸಿದ ಬಿಗ್‌ ಮನೆಯ ಪುಟ್ಟಿ: ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ

45
ಸಂಗೀತಾ ಹೇಳಿದ ಕಥೆ ಏನು?

ಒಬ್ಬರು ಮಲಗಿಕೊಂಡಿದ್ರಂತೆ, ಆಗ ಅವರಿಗೆ ಬಿಕ್ಕಳಿಸೋ ಅಳುವ ಧ್ವನಿ ಕೇಳಿಸುತ್ತದೆ. ಆ ಧ್ವನಿ ಹೇಗಿತ್ತು ಎಂಬುದನ್ನು ಸಹ ಸಂಗೀತಾ ಅನುಕರಿಸಿ ತೋರಿಸುತ್ತಾರೆ. ಆ ಧ್ವನಿ ಕೇಳಿ ಮಲಗಿಕೊಂಡಿರುವ ಮುಖದ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯುತ್ತಾರೆ. ನೋಡಿದ್ರೆ ಕಾಲಡಿ ಮಂಚದ ಕೆಳಗೆ ಮಹಿಳೆ ಕುಳಿತಿರೋದನ್ನು ನೋಡುತ್ತಾರೆ. ಆ ಮೇಲೆ ಮತ್ತೆ ಮುಸುಕು ಹಾಕಿಕೊಂಡು ಮಲಗಿದರಂತೆ ಎಂದು ಹೇಳಿ ಸಂಗೀತಾ ನಗುತ್ತಾರೆ.

ಇದನ್ನೂ ಓದಿ: Bigg Boss 12 mid-night eviction: ಮಿಡ್‌ನೈಟ್ ಎಲಿಮಿನೇಷನ್‌ನಲ್ಲಿ ಒಬ್ಬರಲ್ಲ ಇಬ್ಬರು ಔಟ್

55
ವೈರಲ್

ಕಥೆಯನ್ನು ಕೇಳುತ್ತಾ ಅದರ ಕಲ್ಪನೆಯಲ್ಲಿಯೇ ಮುಳುಗಿದ್ದ ನಮ್ರತಾ ಹಿಂದೆ ಬಂದ ವಿನಯ್, ಭುಜ ತಟ್ಟಿ ಹೆದರಿಸುತ್ತಾರೆ. ಕಥೆಯಲ್ಲಿಯೇ ಕಳೆದು ಹೋಗಿದ್ದ ನಮ್ರತಾ ಹಿಂದಿನಿಂದ ಬಂದ ವಿನಯ್ ಧ್ವನಿ ಕೇಳಿ ಹೆದರಿಕೊಂಡು ಜೋರಾಗಿ ಕಿರುಚಿಕೊಳ್ಳುತ್ತಾರೆ. ಇಬ್ಬರ ಮೇಲೆ ಮುನಿಸಿಕೊಂಡು ನಮ್ರತಾ ಬೆಡ್‌ರೂಮ್ ಸೇರಿಕೊಳ್ಳುತ್ತಾರೆ. ನಾನು ನಿಮ್ಮ ಬಳಿ ಬರಲ್ಲ ಎಂದು ನಮ್ರತಾ ಹುಸಿ ಕೋಪ ಮಾಡಿಕೊಳ್ಳುತ್ತಾರೆ.

ವೈರಲ್ ಆಗಿರುವ ವಿಡಿಯೋ ತುಣಕು ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.facebook.com/reel/1087148340276854

Read more Photos on
click me!

Recommended Stories