Bigg Boss Kannada 12 ಶೋಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡುತ್ತಿರುವವರು ಯಾರು? ಯಾರು?

Published : Oct 16, 2025, 11:39 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ಬಾರಿ ಮಾಸ್‌ ಎವಿಕ್ಷನ್‌ ನಡೆಯಲಿದೆ. ಯಾರು, ಯಾರು ದೊಡ್ಮನೆಯೊಳಗಡೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಕಿಚ್ಚ ಸುದೀಪ್‌ ಅವರೇ ದೊಡ್ಡ ಮಟ್ಟದಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಲಿದೆ ಎಂದು ಹೇಳಿದ್ದರು. 

PREV
16
ಠಕ್ಕರ್‌ ಕೊಡೋ ಸ್ಪರ್ಧಿಗಳು

ಈಗಾಗಲೇ ಕೆಲ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎನ್ನಲಾಗ್ತಿದೆ. ಈಗ ಇರುವ ಸ್ಪರ್ಧಿಗಳಿಗೆ ಠಕ್ಕರ್‌ ಕೊಡುವ ರೀತಿಯಲ್ಲಿ, ವಿವಿಧ ವ್ಯಕ್ತಿತ್ವ ಇರುವವರು ದೊಡ್ಮನೆಗೆ ಹೋಗಲಿದ್ದಾರಂತೆ.

26
ವರುಣ್‌ ಆರಾಧ್ಯ

ವರುಣ್‌ ಆರಾಧ್ಯ ಅವರು ಈ ಹಿಂದಿನ ಸೀಸನ್‌ನಲ್ಲಿ ಬಿಗ್‌ ಬಾಸ್‌ ಕನ್ನಡ ಶೋ ಆಫರ್‌ ಬಂದಿತ್ತು. ಈ ಬಾರಿ ಬಂದಿಲ್ಲ. ಈ ತಿಂಗಳು ನನ್ನ ಮನೆ ಸೀಸ್‌ ಆಗುವ ಸಾಧ್ಯತೆಯಿದ್ದು, ಬಿಗ್‌ ಬಾಸ್‌ ಆಫರ್‌ ಬಂದಿದ್ದರೂ ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ. ನನ್ನ ಅಕ್ಕ ಕೂಡ ಮನೆಗೆ ಬಂದಿದ್ದು, ಮತ್ತೆ ಅವಳು ಇಷ್ಟುದಿನಗಳ ಕಾಲ ನಮ್ಮ ಮನೆಯಲ್ಲಿ ಇರೋದಿಲ್ಲ, ಅವಳ ಜೊತೆ ಸಮಯ ಕಳೆಯುವ ಆಸೆ ಎಂದು ಹೇಳಿದ್ದರು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ವರುಣ್‌ ಬರುತ್ತಾರೆ ಎನ್ನಲಾಗಿದೆ.

36
ಭೂಮಿಕಾ ದೇಶಪಾಂಡೆ

ಯುಟ್ಯೂಬರ್‌, ನಟಿ, ಡಯೆಟಿಷಿಯನ್‌ ಭೂಮಿಕಾ ದೇಶಪಾಂಡೆ ಅವರು ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

46
ವಿಜಯ್‌ ಸೂರ್ಯ

ಆರಂಭದಲ್ಲಿ ವಿಜಯ್‌ ಸೂರ್ಯ ಅವರು ಬಿಗ್‌ ಬಾಸ್‌ ಶೋಗೆ ಹೋಗ್ತಾರೆ ಎನ್ನಲಾಗಿತ್ತು, ಆದರೆ ಹೋಗಿರಲಿಲ್ಲ. ಈ ಬಾರಿ ಅವರು ದೊಡ್ಮನೆಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

56
ಮೌನ ಗುಡ್ಡೇಮನೆ

ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಅವರು ಈ ಹಿಂದೆಯೇ, “ನಾನು ಬಿಗ್‌ ಬಾಸ್‌ ಶೋಗೆ ಹೋಗುತ್ತಿಲ್ಲ, ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೇನೆ” ಎಂದು ಹೇಳಿದ್ದರು. ಆದರೂ ಕೂಡ ಅವರು ದೊಡ್ಮನೆಗೆ ಹೋಗ್ತಾರೆ ಎನ್ನಲಾಗ್ತಿದೆ.

66
ಆರ್‌ ಕೆ ಚಂದನ್‌

ಮಾಂಗಲ್ಯಂ ತಂತುನಾನೇನ ಧಾರಾವಾಹಿ ನಟ ಆರ್‌ ಕೆ ಚಂದನ್‌ ಅವರು ‘ಕ್ವಾಟ್ಲೆ ಕಿಚನ್‌ʼ ಶೋನಲ್ಲಿ ಭಾಗವಹಿಸಿದ್ದರು. ಈಗ ಅವರು ಸಿನಿಮಾವನ್ನು ಕೂಡ ಮಾಡುತ್ತಿದ್ದಾರೆ. ಚಂದನ್‌ ಅವರು ಈ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Read more Photos on
click me!

Recommended Stories