ಖ್ಯಾತ ನಿರೂಪಕಿ ಅನುಶ್ರೀ ತಮ್ಮ ಪತಿ ರೋಷನ್ ರಾಮಮೂರ್ತಿ ಅವರ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳೊಂದಿಗೆ ವಿಶೇಷ ಕವನವೊಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ರೋಷನ್‌ಗೆ ಶುಭ ಹಾರೈಸಿದ್ದು, ಕೊಡಗು ಮೂಲದ ಐಟಿ ಉದ್ಯೋಗಿಯಾಗಿರುವ ರೋಷನ್ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಪತಿ ರೋಷನ್ ರಾಮಮೂರ್ತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪತಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನುಶ್ರೀ ಇನ್‌ಸ್ಟಾಗ್ರಾಂನಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಕವನವೊಂದನ್ನು ಬರೆದುಕೊಂಡಿದ್ದಾರೆ. ಫೋಟೋ ಹಂಚಿಕೊಂಡ ಬಳಿಕ ಅನುಶ್ರೀ ಅಭಿಮಾನಿಗಳು ರೋಷನ್ ರಾಮಮೂರ್ತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಹ್ಯಾಪಿ ಬರ್ತ್ ಡೇ ಬಾವ, ಯಾವತ್ತೂ ಇದೇ ತರ ಖುಷಿ ಖುಷಿಯಾಗಿ ಇರಿ ಯಾರ ಕೆಟ್ಟ ದೃಷ್ಟಿಯು ಬೀಳದೇ ಇರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ಈ ಎರಡು ಚಂದದ ನಗುವಿನ ಬೆಸುಗೆಯಲಿ ಒಂದು ನಗು ಇದೆ. ಆ ನಗುವೇ ಸೂಪರ್ ಜೋಡಿ ನಗು. ಹುಟ್ಟುಹಬ್ಬದ ಶುಭಾಶಯಗಳು ಭಾವ. ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಪತಿಗಾಗಿ ಅನುಶ್ರೀ ಬರೆದ ಕವನ

ಜೊತೆಯಲಿ ನಿನ್ನ ಜೊತೆಯಲಿ… ಸದಾ ಸಂತೋಷ ಇರಲಿ!!!!

ಜೊತೆಯಲಿ ನಿನ್ನ ಜೊತೆಯಲಿ ನಿನ್ನೆಲ್ಲಾ ಕನಸು ನನಸಾಗಲಿ…

ಜೊತೆಯಲಿ ನಿನ್ನ ಜೊತೆಯಲಿ. ಅನು ನಾನಿರಲಿ, ಅನು ಮಾತ್ರ ಇರಲಿ

Happiest bday Hubby

ಕವನದ ಕೊನೆಗೆ ಅನು ಮಾತ್ರ ಇರಲಿ ಎಂದು ಹೇಳುವ ಮೂಲಕ ಗಂಡನನ್ನು ಬಿಟ್ಟುಕೊಡಲ್ಲ ಎಂಬ ಅಭಿಪ್ರಾಯವನ್ನು ಅನುಶ್ರೀ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಟಿಪಿಕಲ್ ಹೆಂಡ್ತಿ ಅಥವಾ ಪಕ್ಕಾ ಗೃಹಿಣಿ ಅನ್ನೋದನ್ನು ಸಾಬೀತು ಮಾಡಿದ್ದಾರೆ ಮಾತಿನ ಮಲ್ಲಿ ಅನುಶ್ರೀ.

ಇದನ್ನೂ ಓದಿ: ಗಂಡನ ಜೊತೆ ಹುಟ್ಟೂರಲ್ಲಿ ದಸರಾ ಸಂಭ್ರಮಿಸಿ, ರಾಜ್ ಬಿ ಶೆಟ್ಟಿ ಗ್ಯಾಂಗ್ ಜೊತೆ ಮೀನೂಟ ಸವಿದ Anchor Anushree

ಯಾರು ಈ ರೋಷನ್ ರಾಮಮೂರ್ತಿ?

ಐಟಿ ಉದ್ಯೋಗಿಯಾಗಿರುವ ರೋಷನ್‌ ರಾಮಮೂರ್ತಿ ಅವರು ಕೊಡಗು ಮೂಲದವರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಯಾಗಿರುವ ರೋಷನ್, ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ, ಆಕೆ ಚೆನ್ನಾಗಿ ತಿನ್ನುತ್ತಾಳೆ, ನಾನೇನು ಕೋಟ್ಯಧಿಪತಿಯಲ್ಲ, ಸಾಮಾನ್ಯ ಐಟಿ ಉದ್ಯೋಗಿ ಎಂದು ಹೇಳಿಕೊಂಡಿದ್ದರು. ಕಳೆದ 5 ವರ್ಷಗಳಿಂದ ಅನುಶ್ರೀ ಅವರಿಗೆ ರೋಷನ್ ಪರಿಚಯ ಹೊಂದಿದ್ದಾರೆ.

ಇದನ್ನೂ ಓದಿ: Anchor Anushree: ರುಚಿ ರುಚಿ ಅಡುಗೆ ಮಾಡಿ, ಅನುಶ್ರೀಗೆ ಮುತ್ತಿಟ್ಟು ತುತ್ತು ನೀಡಿದ ಪತಿ

View post on Instagram