Bigg Boss 12 mid-night eviction: ಮಿಡ್‌ನೈಟ್ ಎಲಿಮಿನೇಷನ್‌ನಲ್ಲಿ ಒಬ್ಬರಲ್ಲ ಇಬ್ಬರು ಔಟ್

Published : Oct 16, 2025, 10:28 AM IST

ಬಿಗ್‌ಬಾಸ್ ಕನ್ನಡ ಸೀಸನ್ 12 ರ ಮೊದಲ ಫಿನಾಲೆ ಮೂರನೇ ವಾರದಲ್ಲಿ ನಡೆಯಲಿದ್ದು, ಮಾಸ್ ಎಲಿಮಿನೇಷನ್ ನಿರೀಕ್ಷಿಸಲಾಗಿದೆ. ಫಿನಾಲೆಗೂ ಮುನ್ನ ನಡೆದ ಮಿಡ್‌ನೈಟ್ ಎಲಿಮಿನೇಷನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. 

PREV
15
ಬಿಗ್‌ಬಾಸ್

ಈ ಬಾರಿಯ ಬಿಗ್‌ಬಾಸ್ ಆರಂಭವಾದ ಮೊದಲ ದಿನದಿಂದಲೂ ಅಚ್ಚರಿಗಳ ಮೇಲೆ ಅಚ್ಚರಿಗಳು ಸಿಗಲಿವೆ. ಸೀಸನ್ 12, ಒಂದಕ್ಕೆ ಡಬಲ್ ಎಂಬರ್ಥವನ್ನು ಸಹ ಸುದೀಪ್ ನೀಡಿದ್ದರು. ಮೂರನೇ ವಾರಕ್ಕೆ ಬಿಗ್‌ಬಾಸ್ ಫಿನಾಲೆ ನಡೆಯುತ್ತಿದ್ದು, ಮಾಸ್ ಎಲಿಮಿನೇಷನ್ ಎಂಬ ಎಚ್ಚರಿಕೆಯನ್ನು ಸುದೀಪ್ ನೀಡಿದ್ದಾರೆ.

25
ಜಂಟಿ ಮತ್ತು ಒಂಟಿ

ಜಂಟಿ ಮತ್ತು ಒಂಟಿಯಾಗಿ ಸ್ಪರ್ಧಿಗಳು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ವಾರ ಜಂಟಿ ಸ್ಪರ್ಧಿಗಳಾಗಿದ್ದ ಅಮಿತ್ ಮತ್ತು ಕರಿಬಸವಯ್ಯ ಔಟ್ ಆಗಿದ್ದರು. ನಂತರ ಅದೇ ಸಂಚಿಕೆಯಲ್ಲಿಯೇ ಮೊದಲ ದಿನವೇ ಎಲಿಮಿನೇಟ್ ಆಗಿದ್ದ, ರಕ್ಷಿತಾ ಶೆಟ್ಟಿ ಕಂಬ್ಯಾಕ್ ಮಾಡಿದ್ದರು. ಎರಡನೇ ವಾರದಲ್ಲಿ ಮನೆಯಿಂದ ಹೊರಗೆ ಯಾರನ್ನು ಕಳುಹಿಸಿರಲಿಲ್ಲ. ಬದಲಾಗಿ ವೀಕ್ಷಕರ ವೋಟ್ ಆಧಾರದ ಮೇಲೆ ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಫೈನಲಿಸ್ಟ್ ಆಗಿದ್ದರು.

35
ಮೊದಲ ಫಿನಾಲೆ

ಇದೇ ಶನಿವಾರ ಮತ್ತು ಭಾನುವಾರ ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೊದಲ ಫಿನಾಲೆ ನಡೆಯಲಿದೆ. ಆದ್ರೆ ಅದಕ್ಕೂ ಮೊದಲೇ ಮನೆಯಿಂದ ಇಬ್ಬರು ಸ್ಪರ್ಧಿಗಳು ದೊಡ್ಡಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಮಿಡ್‌ನೈಟ್ ಎಲಿಮಿಷೇನ್ ಮಾಡಿರೋದನ್ನು ತೋರಿಸಲಾಗಿದೆ.

45
ಇಬ್ಬರು ಔಟ್!

ಮಧ್ಯರಾತ್ರಿಯ ಎಲಿಮಿನೇಷನ್‌ನಲ್ಲಿ ನಟಿ ಮಂಜು ಭಾಷಿಣಿ ಮತ್ತು ಶ್ವಾನ ವ್ಯಾಪಾರಿ ಸತೀಶ್ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಜು ಭಾಷಿಣಿ ಜಂಟಿಯಾಗಿ ರಾಶಿಕಾ ಶೆಟ್ಟಿಯೊಂದಿಗೆ ಮನೆಯೊಳಗೆ ಬಂದಿದ್ದರು. ಹಾಸ್ಯ ಕಲಾವಿದ ಚಂದ್ರಪ್ರಭಾ ಜೊತೆಯಲ್ಲಿ ಸತೀಶ್ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: Bigg Boss Kannada: ಕೊನೆಗೂ ಗಿಲ್ಲಿಯೂ ಸೋತ, ಸಪೋರ್ಟ್ ಸಿಕ್ರೂ ಕಾವ್ಯಾ ಮಾಡಿಕೊಂಡ್ರಾ ಎಡವಟ್ಟು!

55
ಯಾರೆಲ್ಲಾ ಹೊರಗೆ ಹೋಗ್ತಾರೆ?

ಮಿಡ್‌ನೈಟ್ ಎಲಿಮಿನೇಷನ್ ಮನೆಯ ಸದಸ್ಯರ ಆಯ್ಕೆ ಅನುಗುಣವಾಗಿ ನಡೆದಿದೆ. ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ, ಕಾಕ್ರೋಚ್ ಸುಧಿ, ಮಾಳು ನಿಪನಾಳ ಮತ್ತು ರಾಶಿಕಾ ಫೈನಿಲಿಸ್ಟ್‌ ಆಗಿದ್ದಾರೆ. ಇನ್ನು ವೀಕೆಂಡ್ ಎಪಿಸೋಡ್‌ನಲ್ಲಿ ಇನ್ನು ಯಾರೆಲ್ಲಾ ಹೊರಗೆ ಹೋಗ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ:  ಬಿಗ್‌ಬಾಸ್‌ನಿಂದ ಮಿಡ್‌ನೈಟ್ ಎಲಿಮಿನೇಷನ್ ಶಾಕ್; ಮನೆಯಿಂದ ಹೊರ ಬಂದೋರು ಯಾರು?

Read more Photos on
click me!

Recommended Stories