Published : Jan 31, 2026, 05:24 PM ISTUpdated : Jan 31, 2026, 05:31 PM IST
ಬಿಗ್ಬಾಸ್ 12 ವಿನ್ನರ್ ಗಿಲ್ಲಿ ನಟ, ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ, ತನ್ನ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಗೆ ನೀಡಿದ್ದ ಭೇಟಿಯ ಮಾತನ್ನು ಮರೆತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೊಂದ ಅಭಿಮಾನಿ, ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಿಗ್ಬಾಸ್ 12 ವಿನ್ನರ್ ಗಿಲ್ಲಿ ನಟ (Bigg Boss 12 Winner Gilli Nata) ಸದ್ಯ ಆಕಾಶದಲ್ಲಿ ತೇಲುತ್ತಿದ್ದಾರೆ. ಬಿಗ್ಬಾಸ್ ವಿನ್ ಆಗುತ್ತಲೇ ಸಿನಿಮಾ ಸೆಲೆಬ್ರಿಟಿಗಳಿಗಿಂತಲೂ, ರಾಜಕಾರಣಿಗಿಂತಲೂ ಒಂದು ಹಂತ ಮೇಲೆ ಹೋಗಿದ್ದಾರೆ. ಇವರ ಒಂದು ಝಲಕ್ಗಾಗಿ ಹೋದಲ್ಲಿ ಬಂದಲ್ಲಿ ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತುಕೊಳ್ಳುತ್ತಿದ್ದಾರೆ.
27
ಕೆಲವು ದಿನ ಹವಾ
ಇದಾಗಲೇ ಹಲವು ನಟರು, ರಾಜಕಾರಣಿಗಳು, ವಿವಿಧ ಫಂಕ್ಷನ್ಗಳು, ವಿವಿಧ ಮಾಧ್ಯಮಗಳು... ಹೀಗೆ ಒಂದರ ಮೇಲೊಂದರಂತೆ ಗಿಲ್ಲಿ ನಟ ಸಕತ್ ಬಿಜಿ. ಸದ್ಯ ಈ ಬಿಗ್ಬಾಸ್ ಹವಾ ಮುಗಿಯುವವರೆಗೂ ಗಿಲ್ಲಿ ನಟನಿಗೆ ಬಿಡುವೇ ಇಲ್ಲದ ಕಾರ್ಯಕ್ರಮಗಳು ಒಂದೊಂದಾಗಿ ಬರುತ್ತಿವೆ.
37
ಅಭಿಮಾನಿಯ ಮರೆತರಾ?
ಇವುಗಳ ಮಧ್ಯೆ, ಗಿಲ್ಲಿ ನಟ ತಮ್ಮ ಟ್ಯಾಟೂ ಅಭಿಮಾನಿಯನ್ನು ಮರೆತುಬಿಟ್ಟಿದ್ದಾರೆ! ಗಿಲ್ಲಿ ನಟ ಅವರು ತಮ್ಮ ಅಭಿಮಾನಿಯೊಬ್ಬರು, ತಮ್ಮ ಫೋಟೋದ ಟ್ಯಾಟೂ ಹಾಕಿಸಿಕೊಂಡ ಬಗ್ಗೆ ಬಿಗ್ಬಾಸ್ ಸಮಯದಲ್ಲಿ ತುಂಬಾ ಖುಷಿಪಟ್ಟು ಶ್ಲಾಘನೆ ವ್ಯಕ್ತಪಡಿಸಿದ್ದರು. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಅವರನ್ನು ಖಂಡಿತವಾಗಿಯೂ ಭೇಟಿಯಾಗುತ್ತೇನೆ ಎಂದಿದ್ದರು.
ಈ ಅಭಿಮಾನಿ, ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಳ್ಳುತ್ತಲೇ ಸೋಷಿಯಲ್ ಮೀಡಿಯಾದ ಹೀರೋ ಆದರು. ಮಾಧ್ಯಮಗಳಲ್ಲಿ ಸಂದರ್ಶನವನ್ನೂ ನೀಡುವ ಮಟ್ಟಿಗೆ ಬಂದರು. ಇವರು ಯಾವಾಗ ಇಷ್ಟು ಫೇಮಸ್ ಆದರೋ, ಆಗ ಇನ್ನೂ ಕೆಲವರು ಗಿಲ್ಲಿ ನಟ ಟ್ಯಾಟೂ ಹಾಕಿಸಿಕೊಂಡು ಫೇಮಸ್ ಆಗಲು ಹವಣಿಸಿದರು. ಅವರಲ್ಲಿ ಕೆಲವರು ಅಲ್ಲಿ ಇಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರು ಬೆಳಕಿಗೆ ಬರಲೇ ಇಲ್ಲ!
57
ಭಾರಿ ಗರಂ
ಆದರೆ ಮೊದಲಿಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಇದೀಗ ಭಾರಿ ಗರಂ ಆಗಿದ್ದಾರೆ. ಅದಕ್ಕೆ ಕಾರಣ, ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ನಾನು ಅವರನ್ನು ಭೇಟಿಯಾಗುತ್ತೇನೆ ಎಂದು ಗಿಲ್ಲಿ ನಟ ಹೇಳಿದ್ದರಂತೆ. ಆದರೆ ಇಷ್ಟುದಿನವಾದರೂ ಭೇಟಿಯಾಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಕೆಂಡಾಮಂಡಲ ಆಗಿದ್ದಾರೆ.
67
ಇದುವರೆಗೂ ಪತ್ತೆ ಇಲ್ಲ!
ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಎಲ್ಲ ಸೆಲೆಬ್ರಿಟಿಗಳು, ಖ್ಯಾತನಾಮರನ್ನು ಬಿಟ್ಟು ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡೆ. ಅವರಿಗೆ ಸರಸ್ವತಿ ಒಲಿದಿದೆ, ಒಳ್ಳೆಯ ಕಲಾವಿದ ಎಂದುಕೊಂಡು ಹಾಕಿಸಿಕೊಂಡೆ. ಆ ಬಳಿಕ ಅವರು ಮನೆಯಿಂದ ಹೊರಕ್ಕೆ ಬಂದ ಮೇಲೆ ಭೇಟಿಯಾಗುವೆ ಅಂದರು. ಆದರೆ ಇದುವರೆಗೂ ಪತ್ತೆ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಗಿಲ್ಲಿ ನಟ ಸದ್ಯ ಸಕತ್ ಬಿಜಿ ಇರುವ ಕಾರಣ, ಅವರಿಗೆ ಭೇಟಿಯಾಗಲು ಸಮಯ ಸಿಗದೇ ಹೋಗಿರಬಹುದು. ಆದರೆ ಅವರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿ ಸ್ಟಾರ್ ಆಗುವ ಹಂಬಲ ಇರುವ ಇವರಿಗೆ ಇದು ಬೇಸರ ತರಿಸಿರುವುದು ಸಹಜವೇ.
77
ಅಭಿಮಾನಿ ಹೇಳಿದ್ದೇನು?
'ಅವರು ಕಾಲ್ ಮಾಡಿದ್ರು. ನನ್ನನ್ನು ವಿಚಾರಿಸಿಕೊಂಡ್ರು. ಆಗ ನಾನು ಅವರ ಹೆಸರಿನಲ್ಲಿ ತೇರು ಎಳೆಯಲು ಹೋಗಿದ್ದೆ. ಆದ್ದರಿಂದ ವಾಪಸ್ ಬಂದ ಮೇಲೆ ಕಾಲ್ ಮಾಡುತ್ತೇನೆ ಎಂದೆ. ವಾಪಸ್ ಬಂದ ಮೇಲೆ ನೋಡಿದ್ರೆ ಅವರು ಫೋನ್ಗೆ ಸಿಗಲಿಲ್ಲ, ಶೂಟಿಂಗ್ನಲ್ಲಿ ಬಿಜಿ ಅದೂ ಇದೂ ಅಂತಾ ಇದ್ದಾರೆ' ಎಂದಿದ್ದಾರೆ. ಅಲ್ಲಿಗೆ, ಗಿಲ್ಲಿ ನಟ ಕೊಟ್ಟ ಮಾತನ್ನು ತಪ್ಪಲಿಲ್ಲ. ಕಾಲ್ ಅಂತೂ ಮಾಡಿದ್ದಾರೆ. ಆದರೆ ಸಿಕ್ಕಾಪಟ್ಟೆ ಬಿಜಿ ಇರುವ ಕಾರಣ ಮೀಟ್ ಮಾಡಲು ಆಗಿಲ್ಲ ಎಂದ ಮೇಲೆ ಹೀಗೆ ಹೇಳುವುದು ಸರಿಯಲ್ಲ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.