2025ರಲ್ಲಿ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಗಳಿಸಿದ್ದು ಬರೀ 1.78 ಕೋಟಿ, OTTಯಲ್ಲಿ ಬಂದ ಮೇಲೆ ಸೂಪರ್‌ಹಿಟ್‌!

Published : Jan 31, 2026, 04:55 PM IST

2025 ರಲ್ಲಿ ಬಿಡುಗಡೆಯಾದ ವಿಜಯ್ ವರ್ಮಾ ಮತ್ತು ಫಾತಿಮಾ ಸನಾ ಶೇಖ್ ಅಭಿನಯದ 'ಗಸ್ತಾಖ್‌ ಇಷ್ಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಆದರೆ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ನಂತರ ಈ ಚಿತ್ರವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿ, ಹೊಸ ಜೀವವನ್ನು ಪಡೆದುಕೊಂಡಿತು.

PREV
17

ಕೆಲವೊಮ್ಮೆ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡದಿರಬಹುದು, ಆದರೆ ಅದರ ಕಥೆ ಮತ್ತು ಸಂಗೀತ ಪ್ರೇಕ್ಷಕರ ಹೃದಯದಲ್ಲಿ ಉಳಿಯುತ್ತದೆ. 2025 ರಲ್ಲಿ ಬಿಡುಗಡೆಯಾದ 'ಗಸ್ತಾಖ್‌ ಇಷ್ಕ್' ಎಂಬ ರೋಮಾಂಟಿಕ್‌ ಸಿನಿಮಾದ್ದೂ ಇದೇ ಕಥೆ.

27

ಚಿತ್ರಮಂದಿರಗಳಲ್ಲಿ ಸೋತರೂ, OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ನಂತರ ಭಾರೀ ಪ್ರಮಾಣದ ಜನಪ್ರಿಯತೆ ಗಳಿಸಿದೆ. ವಿಜಯ್ ವರ್ಮಾ ಮತ್ತು ಫಾತಿಮಾ ಸನಾ ಶೇಖ್ ನಟಿಸಿದ 'ಗಸ್ತಾಖ್‌ ಇಷ್ಕ್' ಚಿತ್ರವು 2025 ನವೆಂಬರ್ 28ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿತ್ತು.

37

ಆದರೆ, ಚಿತ್ರದ ಆರಂಭ ನಿರಾಶಾದಾಯಕವಾಗಿತ್ತು, ಮೊದಲ ದಿನ ಕೇವಲ 50 ಲಕ್ಷ ರೂಪಾಯಿ ಗಳಿಸಿದ್ದ ಸಿನಿಮಾ, ಮೊದಲ ವಾರದಲ್ಲಿಕೇವಲ 1.78 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತ್ತು. ಎರಡನೇ ವಾರದಲ್ಲಿ ಅದು ಕೇವಲ 7 ಲಕ್ಷ ರೂ.ಗೆ ಕುಸಿಯಿತು.

47

ಕೊಯಿಮೊಯ್ ವರದಿಯ ಪ್ರಕಾರ, ಸುಮಾರು 25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಭಾರತದಲ್ಲಿ ಕೇವಲ 1.75 ಕೋಟಿ ರೂಪಾಯಿ ಗಳಿಸಿತು. 'ಗಸ್ತಾಖ್‌ ಇಷ್ಕ್' ಚಿತ್ರವನ್ನು ಬಾಕ್ಸ್ ಆಫೀಸ್‌ನಲ್ಲಿ 'ಫ್ಲಾಪ್' ಎಂದು ಘೋಷಿಸಲಾಯಿತು.

57

ಚಿತ್ರಮಂದಿರಗಳಲ್ಲಿ ವಿಫಲವಾದ ನಂತರ, 'ಗಸ್ತಾಖ್‌ ಇಷ್ಕ್' ಚಿತ್ರವು 2026 ಜನವರಿ 27 ರಂದು OTT ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಾಗ ಚಿತ್ರವು ಹೊಸ ಜೀವವನ್ನು ಪಡೆದುಕೊಂಡಿದ್ದು, ಸಿನಿಮಾಗೆ IMDb ಯಲ್ಲಿ 7.8/10 ರ ಬಲವಾದ ರೇಟಿಂಗ್ ಸಿಕ್ಕಿದೆ.

67

"ಪ್ರೇಕ್ಷಕರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆ ನನಗೆ ಹೊಸ ಭರವಸೆ ನೀಡಿದೆ" ಎಂದು ನಿರ್ದೇಶಕ ವಿಭು ಪುರಿ ಒಟಿಟಿ ಸಿಕ್ಕಿರುವ ರೇಟಿಂಗ್‌ ಬಗ್ಗೆ ಹೇಳಿದ್ದಾರೆ.

77

"ಈ ಚಿತ್ರ ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ" ಎಂದು ಫಾತಿಮಾ ಸನಾ ಶೇಖ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories