Karna Serial ತೇಜಸ್‌ ಬಾವ, ಯಾಕೆ ಹೀಗೆ ಮಾಡಿದ್ರಿ? ಸಿಕ್ಕಾಪಟ್ಟೆ ಕೆಂಡಾಮಂಡಲರಾದ ವೀಕ್ಷಕರು!

Published : Jan 31, 2026, 05:09 PM IST

Karna Serial Tejas: ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಪಾತ್ರದಲ್ಲಿ ಚೇತನ್‌ ರಾಜ್‌ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಿತ್ಯಾ ಜೊತೆ ಪ್ರೀತಿಯಲ್ಲಿದ್ದ ತೇಜಸ್‌, ಅವಳನ್ನು ಗರ್ಭಿಣಿ ಮಾಡುತ್ತಾನೆ. ಆ ಬಳಿಕ ಯಾರದ್ದೋ ಮಾತು ಕೇಳಿ ಅವಳ ಕ್ಯಾರೆಕ್ಟರ್‌ ಬಗ್ಗೆ ಅನುಮಾನ ಪಡುತ್ತಾನೆ. 

PREV
15
ಮನೆಯವರಿಗೆ ಸತ್ಯ ಗೊತ್ತಿಲ್ಲ

ತೇಜಸ್‌ ಹಾಗೂ ನಿತ್ಯಾ ಮದುವೆ ನಡೆಯಬೇಕು ಎಂದಾದಾಗ ತೇಜಸ್‌ ಕಿಡ್ನ್ಯಾಪ್‌ ಆಗುವುದು. ಆ ಬಳಿಕ ನಿತ್ಯಾ ಹಾಗೂ ಕರ್ಣ ಮದುವೆ ನಾಟಕ ಮಾಡಿದ್ದರು. ಇದು ಮನೆಯಲ್ಲಿದ್ದವರಿಗೆ ಗೊತ್ತೇ ಇಲ್ಲ.

25
ಬೈತಾರೆ ಅಂತ ಗೊತ್ತಿತ್ತು

ಈಗ ತೇಜಸ್‌ ಪಾತ್ರಧಾರಿ ಚೇತನ್‌ ರಾಜ್‌ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ನಾನು ಮದನ ಮನೋಹರಿ ಹಾಡಿನಲ್ಲಿ ಕಾಣಿಸಿಕೊಂಡೆ. ಈಗ ನಾನು ಧಾರಾವಾಹಿಯಲ್ಲಿ ನಿತ್ಯಾಳನ್ನು ಮದುವೆ ಆಗಿಲ್ಲ, ಅದನ್ನು ಜನರು ಇಲ್ಲಿ ಕನೆಕ್ಟ್‌ ಮಾಡಿ ಬೈತಾರೆ ಎಂದು ಹೇಳಿದ್ದೆ. ಅದರಂತೆ ಜನರು ಬೈದರು, ಯಾಕೆ ನಿತ್ಯಾಳನ್ನು ಮದುವೆ ಆಗಿಲ್ಲ ಅಂತ ಕೇಳಿದರು?” ಎಂದು ಹೇಳಿದ್ದಾರೆ.

35
ನಿತ್ಯಾ ಹಾಗೂ ತೇಜಸ್‌ ಮದುವೆ ಆಗಲಿದೆಯಾ?

ನಿತ್ಯಾ ಹಾಗೂ ತೇಜಸ್‌ ಮದುವೆ ಆಗಲಿದೆಯಾ? ಎಂಬ ಪ್ರಶ್ನೆ ಕೂಡ ಕೇಳಲಾಗಿದೆ. ಇದಕ್ಕೂ ಕೂಡ ಅವರು ಉತ್ತರ ಕೊಟ್ಟಿಲ್ಲ. ಒಟ್ಟಿನಲ್ಲಿ ನಿತ್ಯಾ, ತೇಜಸ್‌ ಮದುವೆ ಆಗಲಿ ಎಂದು ಅನೇಕರು ಬಯಸುತ್ತಿದ್ದಾರೆ.

45
ಯಾಕೆ ಹೀಗೆ ನಿತ್ಯಾ ಮೇಲೆ ಅನುಮಾನಪಟ್ರಿ?

ಅಂದಹಾಗೆ ಈಗ ನಿತ್ಯಾ ಮೇಲೆ ತೇಜಸ್‌ ಅನುಮಾನ ಪಟ್ಟಿದ್ದಾನೆ. ಇದು ವೀಕ್ಷಕರಿಗೆ ಬೇಸರ ಆಗಿದೆ. ನಿತ್ಯಾ ಹಾಗೂ ತೇಜಸ್‌ ಮದುವೆ ಆದರೆ ಆ ಕಡೆ ನಿಧಿ-ಕರ್ಣ ಒಂದಾಗಬಹುದು ಎಂಬುದು ವೀಕ್ಷಕರ ಪ್ಲ್ಯಾನ್.‌ ಬಾವ, ಯಾಕೆ ಹೀಗೆ ನಿತ್ಯಾ ಮೇಲೆ ಅನುಮಾನಪಟ್ರಿ? ನಾವು ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

55
ಮುಂದೆ ಏನಾಗುವುದು?

ಕರ್ಣ ಧಾರಾವಾಹಿಯಲ್ಲಿ ಮುಂದೆ ಏನಾಗುವುದು ಎಂಬ ಕುತೂಹಲ ಶುರುವಾಗಿದೆ. ಅತ್ತ ಕರ್ಣನ ಮೇಲೆ ನಿತ್ಯಾಗೆ ಲವ್‌ ಆಗಬಹುದಾ ಎಂಬ ಅಳುಕು ಕೂಡ ಇದೆ. ಹೀಗಾಗಿ ಸೀರಿಯಲ್‌ ಬಹಳ ಕುತೂಹಲಕಾರಿ ಘಟ್ಟ ತಲುಪಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories