ಬಿಗ್‌ಬಾಸ್ 13: ಸಂಭವನೀಯ ಪಟ್ಟಿಯಲ್ಲಿ ಝೀ ಕನ್ನಡ ಸೀರಿಯಲ್‌ನ ಆರು ಸ್ಟಾರ್‌ಗಳ ಹೆಸರು

Published : Aug 31, 2026, 01:22 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಸಂಭವನೀಯ ಸ್ಪರ್ಧಿಗಳ ಪಟ್ಟಿಯಲ್ಲಿ ಝೀ ಕನ್ನಡ ವಾಹಿನಿಯ ಹಲವು ಧಾರಾವಾಹಿಗಳ ಕಲಾವಿದರ ಹೆಸರುಗಳು ಕೇಳಿಬರುತ್ತಿವೆ.

PREV
15
ಬಿಗ್‌ಬಾಸ್ ಸೀಸನ್ 13ರ ಸಂಭವನೀಯ ಸ್ಪರ್ಧಿಗಳು

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದೆಡೆ ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿರುವ ಸ್ಪರ್ಧಿಗಳು ದೊಡ್ಮನೆ ಪ್ರವೇಶಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಝೀ ಕನ್ನಡ ವಾಹಿನಿಯ ಆರು ಕಲಾವಿದರು ಬಿಗ್‌ಬಾಸ್ ಸ್ಪರ್ಧಿಗಳಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

25
ದಿಯಾ ಪಾಲಕ್ಕಲ್ ಮತ್ತು ಭುವನ್

ಸದ್ಯ ಝೀ ಕನ್ನಡದಲ್ಲಿ ಬ್ರಹ್ಮಗಂಟು ಧಾರಾವಾಹಿ ಮುಕ್ತಾಯವಾಗಿದ್ರೆ, ಶ್ರಾವಣಿ ಸುಬ್ರಹ್ಮಣ್ಯ ಅಂತಿಮ ಘಟ್ಟದಲ್ಲಿದೆ. ಈ ಎರಡೂ ಸೀರಿಯಲ್‌ನ ನಟ-ನಟಿಯರು ಬಿಗ್‌ಬಾಸ್‌ ಶೋಗೆ ಬರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಬ್ರಹ್ಮಗಂಟು ಸೀರಿಯಲ್‌ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಮತ್ತು ಚಿರು ಪಾತ್ರದ ಭುವನ್ ಹೆಸರು ಸಹ ಸಂಭವನೀಯ ಪಟ್ಟಿಯಲ್ಲಿವೆ. ಇನ್ನುಳಿದಂತೆ ಇದೇ ಧಾರಾವಾಹಿಯ ನರಸಿಂಹ ಮತ್ತು ಸಂಜನಾ ಹೆಸರು ಸಹ ಮುನ್ನಲೆಯಲ್ಲಿವೆ.

35
ಅಮೋಘ ಆದಿತ್ಯ ಮತ್ತು ಆಸಿಯಾ ಫಿರ್ಧೊಷ್

ಇನ್ನು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ ಪ್ರಮುಖ ಪಾತ್ರಧಾರಿಗಳಾಗಿರುವ ಅಮೋಘ ಆದಿತ್ಯ ಮತ್ತು ಆಸಿಯಾ ಫಿರ್ಧೊಷ್ ಬರಬಹುದು ಎಂಬ ಲೆಕ್ಕಾಚಾರಗಳಿವೆ. ಈ ಸೀರಿಯಲ್‌ನಿಂದ ಇಬ್ಬರು ಕಲಾವಿದರು ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿದ್ದು, ಹಾಗಾಗಿ ಬಿಗ್‌ಬಾಸ್‌ ಮನೆಯನ್ನು ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ಇದೇ ರೇಸ್‌ನಲ್ಲಿ ಮದನ್ ಪಾತ್ರಧಾರಿಯಾಗಿದ್ದ ಅಥರ್ವ್ ಹೆಸರು ಸಹ ಸೇರಿದೆ.

45
ಮಹಾನಟಿ ಖ್ಯಾತಿಯ ಗಗನಾ, ಜಿಮ್‌ ಸೀನ್

ಇನ್ನು ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಮೂಲಕ ಮುನ್ನಲೆಗೆ ಬಂದ ಕಲಾವಿದೆ ಗಗನಾ ಹೆಸರು ಸಹ ಸಂಭವನೀಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಇತ್ತೀಚೆಗಷ್ಟೇ ಅಣ್ಣಯ್ಯ ಧಾರಾವಾಹಿಯಿಂದ ಹೊರ ಬಂದಿರುವ ಜಿಮ್ ಸೀನ ಖ್ಯಾತಿಯ ಸುಶ್ಮಿತ್ ಜೈನ್ ಹೆಸರು ವೈರಲ್ ಲಿಸ್ಟ್‌ನಲ್ಲಿದೆ. ಸುಶ್ಮಿತ್ ಜೈನ್ ಸೀರಿಯಲ್‌ನಿಂದ ಹೊರ ಬರುತ್ತಿದ್ದಂತೆ ಬಿಗ್‌ಬಾಸ್ ಗೆ ಹೋಗಬಹುದು ಎಂದು ಹೇಳಲಾಗುತ್ತಿದೆ.

55
ನಂದಗೋಕುಲದ ಕೇಶವ

ಕಳೆದ ವಾರವಷ್ಟೇ ನಂದಗೋಕುಲ ತಂಡದಿಂದ ಹೊರ ಬಂದಿರುವ ಕೇಶವ ಪಾತ್ರಧಾರಿ ಯಶವಂತ್ ಎಸ್ಎಸ್ ಹೆಸರು ಬಿಗ್‌ಬಾಸ್ ಸ್ಪರ್ಧಿಗಳ ಸಂಭವನೀಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ರೂ, ತಮ್ಮ ಮುಂದಿನ ಪ್ರೊಜೆಕ್ಟ್ ಬಗ್ಗೆ ಯಶವಂತ್ ಎಲ್ಲಿಯೂ ಹೇಳಿಕೊಂಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories