ವರ್ಕೌಟ್‌ಗೆ ಸಮಯ ಸಿಗದ ಕಾರಣ ಸಂಗೀತಾ ಶೃಂಗೇರಿ ತಮ್ಮ ಡಯಟ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅನ್ನ, ರೋಟಿ, ದೋಸೆಗೆ ಬ್ರೇಕ್ ನೀಡಿ ಹಣ್ಣು-ತರಕಾರಿ ಸಲಾಡ್‌ಗೆ ಆದ್ಯತೆ ನೀಡುತ್ತಿರುವುದಾಗಿ ನಟಿ ಹೇಳಿದ್ದಾರೆ.
‘777 ಚಾರ್ಲಿ’ ಖ್ಯಾತಿಯ ನಟಿ ಸಂಗೀತ ಶೃಂಗೇರಿ ಸದ್ಯ ಅನ್ನ, ರೋಟಿ, ದೋಸೆ ಇತ್ಯಾದಿಗೆಲ್ಲ ಗುಡ್‌ಬೈ ಹೇಳಿ ತರಕಾರಿ ಹಣ್ಣು ತಿಂದು ಫಿಟ್‌ನೆಸ್ ಮೈಂಟೇನ್ ಮಾಡುತ್ತಿದ್ದಾರೆ.
25
ನಿರಂತರವಾಗಿ ಶೂಟಿಂಗ್
ಈ ಬಗ್ಗೆ ವಿವರ ನೀಡಿದ ಸಂಗೀತಾ, ರಿಯಾಲಿಟಿ ಶೋಗಳ ಶೂಟಿಂಗ್ ರಾತ್ರಿ ಹಗಲೆನ್ನದೇ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದರಲ್ಲಿ ತೊಡಗಿಸಿಕೊಂಡಾಗ ಊಟ, ನಿದ್ದೆ, ವರ್ಕೌಟ್ ಜೊತೆಗೆಲ್ಲ ಜೂಟ್ ಬಿಡುವುದು ಅನಿವಾರ್ಯ.
35
ಸದ್ಯ ಗುಡ್ ಬೈ
ನಾನೀಗ ಬಿಗ್‌ಬಾಸ್ ಅಗ್ನಿಪರೀಕ್ಷೆ ರಿಯಾಲಿಟಿ ಶೋದಲ್ಲಿ ಜ್ಯೂರಿಯಾಗಿದ್ದೇನೆ. ಶೂಟಿಂಗ್ ಗದ್ದಲದ ನಡುವೆ ವರ್ಕೌಟ್‌ಗೆ, ಬಾಡಿ ಮೈಂಟೇನ್ ಮಾಡಲು ಸಮಯವೇ ಸಿಗುವುದಿಲ್ಲ. ಬೇರೆ ದಾರಿ ಇಲ್ಲದೇ ಊಟ, ತಿಂಡಿಗೆಲ್ಲ ಸದ್ಯ ಗುಡ್ ಬೈ ಹೇಳಿದ್ದೇನೆ.
ಬರೀ ತರಕಾರಿ, ಹಣ್ಣು ಸಲಾಡ್ ತಿಂದು ದೇಹದ ತೂಕ ಮೈಂಟೇನ್ ಮಾಡುತ್ತಿದ್ದೇನೆ. ಈ ಶೋಗೆ ಬರುವ ಮುಂಚೆ ಉತ್ತರಖಂಡ್‌ನ ಟ್ರೆಕಿಂಗ್ ಮಾಡಿದ್ದೆ. ಫಿಟ್‌ನೆಸ್ ಉಳಿಸಿಕೊಳ್ಳಲು ಅದೂ ಸಹಾಯಕವಾಗಿದೆ ಎಂದಿದ್ದಾರೆ.
55
ಆಟೋ ಡ್ರೈವರ್ ಮಗಳ ಪಾತ್ರ
ಸದ್ಯ ಸಂಗೀತಾ ನಟನೆಯ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಶೂಟಿಂಗ್ ಮುಗಿದಿದ್ದು, ನವೆಂಬರ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ. ಇದರಲ್ಲಿ ಆಟೋ ಡ್ರೈವರ್ ಮಗಳ ಪಾತ್ರದಲ್ಲಿ ಸಂಗೀತ ನಟಿಸಿದ್ದಾರೆ. ಖ್ಯಾತ ಹಾಸ್ಯ ನಟ ದೀಪಕ್ ರೈ ಪಾಣಾಜೆ ಇವರ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.